ಕರಂದ್ಲಾಜೆ, ಪ್ರತಾಪ್ ಸಿಂಹರಿಂದ ನನ್ನ ಪತ್ನಿ, ಕುಟುಂಬದ ವಿರುದ್ಧ ಹೇಳಿಕೆ: ದಿನೇಶ್ ಗುಂಡೂರಾವ್

ಬೆಂಗಳೂರು, ಸೋಮವಾರ, 4 ಡಿಸೆಂಬರ್ 2017 (14:27 IST)

ಬಿಜೆಪಿ ಸಂಸರು ಮನಬಂದಂತೆ ಅಸಭ್ಯ ಹೇಳಿಕೆ ನೀಡುವವರಿಗೆ ಏನೆಂದು ಪ್ರತಿಕ್ರಿಯೆ ನೀಡುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ನನ್ನ ಪತ್ನಿಯ ಜಾತಿಯ ವಿರುದ್ಧ ಹೇಳಿಕೆ ನೀಡಿದ್ದರು. ಇದೀಗ ಸಂಸದ ನನ್ನ ಕುಟುಂಬದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
 
ರಾಜಕಾರಣದಲ್ಲಿ ವೈಯಕ್ತಿಕ ವಿಷಯಗಳನ್ನು ಬೆರೆಸುವುದು ಸರಿಯಲ್ಲ. ಕೇವಲ ಪ್ರಚಾರಕ್ಕಾಗಿ ಮನಬಂದಂತೆ ಹೇಳಿಕೆ ನೀಡುವುದು ಯಾವುದೇ ರಾಜಕೀಯ ನಾಯಕನಿಗೆ ಶೋಭೆ ತರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
 
ನಾನು ಕೂಡಾ ಬಿಜೆಪಿ ನಾಯಕರ ಬಗ್ಗೆ ಅಸಭ್ಯ ಹೇಳಿಕೆಗಳನ್ನು ನೀಡಬಹುದು. ಆದರೆ, ನಾನು ಅಂತಹ ಕೀಳುಮಟ್ಟಕ್ಕೆ ಹೋಗುವವನಲ್ಲ. ರಾಜಕೀಯಕ್ಕೆ ತನ್ನದೇ ಆದ ಪಾವಿತ್ರ್ಯತೆಯಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಐಸಿಸಿ ಅಧ್ಯಕ್ಷ ಸ್ಥಾನರಾಹುಲ್‍ ಗಾಂಧಿಗೆ: ಔರಂಗಜೇಬನ ಆಡಳಿತ ಆರಂಭ- ಮೋದಿ

ಕಾಂಗ್ರೆಸ್ ಯುವ ನೇತಾರ ರಾಹುಲ್ ಗಾಂಧಿ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಕಾಂಗ್ರೆಸ್‍‍ ಪಕ್ಷ ...

news

ಅಮಿತ್ ಶಾ ಮೆಚ್ಚಿಸಲು ಉದ್ಧಟತನ ತೋರಿದ ಪ್ರತಾಪ ಸಿಂಹ : ಸಿಎಂ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೆಚ್ಚಿಸಲು ಮೈಸೂರು ಸಂಸದ ಪ್ರತಾಪ್ ಸಿಂಹ್ ಇಂತಹ ...

news

ಸಂಸದ ಪ್ರತಾಪ್ ಸಿಂಹಗೆ ಎಸ್‌ಪಿ ಚನ್ನಣ್ಣನವರ್ ತಿರುಗೇಟು

ಬೆಂಗಳೂರು: ಆಳುವ ಪಕ್ಷದ ಆಳುಗಳು ಎನ್ನುವ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿರುವ ...

news

‘ಹನುಮ ಜಯಂತಿ ಆಚರಿಸಲು ಯಾರಪ್ಪನ ಅಪ್ಪಣೆ ಬೇಕು?’

ಬೆಂಗಳೂರು: ಹನುಮ ಜಯಂತಿ ಆಚರಣೆ ವೇಳೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿದ ಪ್ರಕರಣಕ್ಕೆ ...

Widgets Magazine
Widgets Magazine