ಕರ್ನಾಟಕ ಧ್ವಜಕ್ಕೆ ಕಾನೂನು ಮಾನ್ಯತೆ: ಫಲಿಸುತ್ತಾ ರಾಜ್ಯ ಸರ್ಕಾರದ ಯತ್ನ

ಬೆಂಗಳೂರು, ಮಂಗಳವಾರ, 18 ಜುಲೈ 2017 (11:22 IST)

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕರ್ನಾಟಕ ಧ್ವಜಕ್ಕೆ ಕಾನೂನು ಮಾನ್ಯತೆ ದೊರಕಿಸಿಕೊಡುವ ಪ್ರಯತ್ನ ನಡೆಸಿದೆ. ರಾಜ್ಯಕ್ಕೆ ಸ್ವಂತ ಧ್ವಜ ವಿನ್ಯಾಸಗೊಳಿಸಲು ಸರ್ಕಾರ 9 ಸದಸ್ಯರ ಸಮಿತಿ ನೇಮಿಸಿದೆ. ಧ್ವಜಕ್ಕೆ ಕಾನುನು ಮಾನ್ಯತೆ ನೀಡುವ ಸಂಬಂಧ ಸಮಿತಿ ವರದಿ ಸಲ್ಲಿಸಲಿದೆ.
 
ಒಂದೊಮ್ಮೆ ಕರ್ನಾಟಕ ಧ್ವಜಕ್ಕೆ ಕಾನೂನು ಮಾನ್ಯತೆ ದೊರೆತಲ್ಲಿ ಸಂವಿಧಾನದ 370ನೇ ಸೆಕ್ಷನ್ ಅಡಿ ವಿಶೇಷ ಸ್ಥಾನಮಾನ ಹೊಂದಿರುವ ಜಮ್ಮು-ಕಾಶ್ಮೀರದ ನಂತರ ಅಧಿಕೃತ ರಾಜ್ಯ ಧ್ವಜ ಹೊಂದಲಿರುವ ಎರಡನೆ ರಾಜ್ಯವಾಗಲಿದೆ.
 
ರಾಜ್ಯದ ಧ್ವಜಕ್ಕೆ ಕಾನೂನು ಮಾನ್ಯತೆ ನೀಡುವ ಕ್ರಮಕ್ಕೆ 2012ರಲ್ಲಿ ಬಿಜೆಪಿ ಸರ್ಕಾರ ತೀವ್ರ ಆಕ್ಷೇಪವ್ಯಕ್ತಪಡಿಸಿತ್ತು. ದೇಶದ ಐಕ್ಯತೆಗೆ ಅಡ್ಡಿ ಉಂಟುಮಾಡುವ ಕಾರಣ ಕೆಂಪು-ಹಳದಿಯ ಕನ್ನಡದ ಧ್ವಜವನ್ನು ಅಧಿಕೃತ ರಾಜ್ಯ ಧ್ವಜ ಎಂದು ಘೋಷಿಸಲು ಸಮ್ಮತಿ ಇಲ್ಲ ಎಂದು ಹೈಕೋರ್ಟ್ ಗೆ ಅಂದಿನ ಸರ್ಕಾರ ತಿಳಿಸಿತ್ತು. ಇನ್ನು ಹಿಂದಿ ಹೇರಿಕೆ ವಿಚಾರವಗೈ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿರುವ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ಧ್ವಜ ಪ್ರಸ್ತಾಪ ಮುಂದಿಟ್ಟಿದ್ದು, ಈ ಬಗ್ಗೆ ಬಿಜೆಪಿ ಒಂದು ರಾಷ್ಟ್ರದಲ್ಲಿ ಎರಡು ಧ್ವಜಗಳಿರಲು ಸಾಧ್ಯವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಉಷಾ ಪತಿಯಾಗಿರುತ್ತೇನೆಂದಿದ್ದ ವೆಂಕಯ್ಯ ನಾಯ್ಡು ಇಂದು ಉಪರಾಷ್ಟ್ರಪತಿ ಹುದ್ದೆಗಾಗಿ ನಾಮಪತ್ರ ಸಲ್ಲಿಕೆ!

ನವದೆಹಲಿ: ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾಗಲಿದ್ದಾರೆ ಎಂಬ ಸುದ್ದಿ ಬಂದಾಗಲೆಲ್ಲಾ ನಾನು ...

news

ಡಿಐಜಿ ರೂಪಾ ವರ್ಗಾವಣೆ: ಸರ್ಕಾರದ ನಿರ್ಧಾರ ಖಂಡಿಸಿ ಜೈಲಿನಲ್ಲಿ ಖೈದಿಗಳ ಪ್ರತಿಭಟನೆ

ಡಿಐಜಿ ರೂಪಾ ಅವರ ವರ್ಗಾವಣೆಯನ್ನು ಖಂಡಿಸಿ ಹಾಗೂ ವರ್ಗಾವಣೆ ಆದೇಶವನ್ನು ಸರ್ಕಾರ ಹಿಂಪಡೆದುಕೊಳ್ಳಬೇಕೆಂದು ...

news

ಪತ್ನಿಗೆ ಧೈರ್ಯ ಹೇಳಲು ಓಡೋಡಿ ಬಂದ ಡಿಐಜಿ ರೂಪಾ ಪತಿ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡಗಳನ್ನು ಹೊರಗೆಳೆದು ವಿವಾದಕ್ಕೆ ಗುರಿಯಾದ ಡಿಐಜಿ ರೂಪಾಗೆ ...

news

ಟೀಂ ಇಂಡಿಯಾ ಕ್ರಿಕೆಟಿಗನ ತಂದೆಗೆ ಇರಿತ

ಲಕ್ನೋ: 2007 ರ ಟಿ20 ವಿಶ್ವಕಪ್ ಫೈನಲ್ ನ ಕೊನೆಯ ಓವರ್ ನ ಹೀರೋ ಟೀಂ ಇಂಡಿಯಾ ಕ್ರಿಕೆಟಿಗ ಜೋಗಿಂದರ್ ಶರ್ಮಾ ...

Widgets Magazine