ಕಲ್ಲು ತೂರಾಟ ನಡೆಸಿದ ವಾಟಾಳ್ ಬೆಂಬಲಿಗರಿಗೆ ಸಾರ್ವಜನರಿಕರಿಂದಲೇ ತರಾಟೆ!

ಬೆಂಗಳೂರು, ಗುರುವಾರ, 25 ಜನವರಿ 2018 (09:42 IST)

ಬೆಂಗಳೂರು: ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಕೆಲವು ಕಿಡಿಗೇಡಿಗಳು ದುಷ್ಕೃತ್ಯಕ್ಕೆ ತೊಡಗಿಸಿಕೊಂಡಿದ್ದು ಜನ ಸಾಮಾನ್ಯರಿಗೆ ಸಮಸ್ಯೆಯಾಗುತ್ತಿದೆ. ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಬೆಂಬಲಿಗರು ಮಲ್ಲೇಶ್ವರದಲ್ಲಿ ಕಿಡಿಗೇಡಿ ಕೃತ್ಯ ನಡೆಸಿದ ವರದಿಯಾಗಿದೆ.
 

ಮಲ್ಲೇಶ್ವರಂ 18 ನೇ ಕ್ರಾಸ್ ನಲ್ಲಿ ಹೋಟೆಲ್, ಅಂಗಡಿಗಳ ಮೇಲೆ ಇದ್ದಕ್ಕಿದ್ದಂತೇ ನಡೆಸಿ ವಾಟಾಳ್ ಬೆಂಬಲಿಗರು ದಾಂಧಲೆ ನಡೆಸಿದ್ದಾರೆ. ಇದರ ವಿರುದ್ಧ ಸ್ಥಳೀಯರೇ ತಿರುಗಿಬಿದ್ದಿದ್ದಾರೆ.
 
ಈ ರೀತಿ ನಮ್ಮ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದರೆ ನಮ್ಮ ಹೊಟ್ಟೆ ಪಾಡಿಗೆ ತೊಂದರೆಯಾಗುವುದಷ್ಟೇ ಹೊರತು ಸರ್ಕಾರಗಳಿಗೆ ಸಮಸ್ಯೆ ಅರ್ಥವಾಗುವುದಿಲ್ಲ. ಇದನ್ನು ನೋಡಿದರೆ ನೀವು ಯಾವುದೋ ಒಂದು ರಾಜಕೀಯ ಪಕ್ಷಕ್ಕೆ ಬೆಂಬಲಿಸುವ ಕೆಲಸ ಮಾಡುತ್ತಿದ್ದೀರಿ ಎಂದುಕೊಳ್ಳಬೇಕಾಗುತ್ತದೆ ಎಂದು ಸ್ಥಳೀಯರೇ ಕಿಡಿಗೇಡಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ವರದಿಯಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಾಟಾಳ್ ಹಿಂಬಾಲಕರಿಂದ ಕಲ್ಲು ತೂರಾಟ

ಮಹಾದಾಯಿ ನೀರಿಗಾಗಿ ಕರ್ನಾಟಕ ಬಂದ್ ಬೆಂಬಲಿಸಿ ವಾಟಾಳ್ ನಾಗರಾಜ ಬೆಂಬಲಿಗರು ಕಲ್ಲೂ ತೂರಾಟ ನಡೆಸಿರುವ ಘಟನೆ ...

news

‘ರಾಜ್ಯದ ಬಗ್ಗೆ ಕಾಳಜಿಯಿದ್ದರೆ ಬಿಜೆಪಿ ಪರಿವರ್ತನಾ ಯಾತ್ರೆ ಮುಂದೂಡಲಿ’

ಬೆಂಗಳೂರು: ಬಿಜೆಪಿ ಇಂದು ಮೈಸೂರಿನಲ್ಲಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆಸಲುದ್ದೇಶಿಸಿದ್ದ ...

news

ಕನ್ನಡಪರ ಸಂಘಟನೆಗಳಿಂದ ಮೈಸೂರಿನಲ್ಲಿ ಬಲವಂತದ ಬಂದ್

ಮೈಸೂರಿನಲ್ಲಿ ಕನ್ನಡ ಪರ ಸಂಘಟನೆಗಳಿಂದ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಬಂದ್ ಮಾಡಿಸಲಾಗಿದೆ.

news

ಕರ್ನಾಟಕ ಬಂದ್: ಬೆಳ್ಳಂ ಬೆಳಿಗ್ಗೆ ತಿನ್ನಲು ಪರದಾಡಿದ ಜನ

ಬೆಂಗಳೂರು: ಕರ್ನಾಟಕ ಬಂದ್ ನ ಇಫೆಕ್ಟ್ ಹೋಟೆಲ್ ಉದ್ಯಮಕ್ಕೂ ತಟ್ಟಿದೆ. ರಾಜಧಾನಿ ಬೆಂಗಳೂರಿಗೆ ಬೆಳ್ಳಂ ...

Widgets Magazine
Widgets Magazine