ಮಾಜಿ ಸಚಿವ ಅಂಬರೀಶ್ ವರ್ತನೆಗೆ ಕಾಂಗ್ರೆಸ್ ನಾಯಕರ ಆಕ್ರೋಶ

ಬೆಂಗಳೂರು, ಬುಧವಾರ, 15 ನವೆಂಬರ್ 2017 (15:52 IST)

ವಿಧಾನಮಂಡಲದ ಅಧಿವೇಶನಕ್ಕೆ ಗೈರುಹಾಜರಾಗಿ ನಟಿಯೊಬ್ಬಳೊಂದಿಗೆ ಡಾನ್ಸ್ ಮಾಡುತ್ತಿರುವ ಶಾಸಕ ಅಂಬರೀಷ್ ವರ್ತನೆ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗಿಸಿದೆ.  
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶದಲ್ಲಿ ಪಾಲ್ಗೊಂಡು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದೇ ನಟಿಯೊಂದಿಗೆ ನೃತ್ಯದಲ್ಲಿ ತೊಡಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 
 
ನಟ-ಕಂ-ರಾಜಕಾರಣಿಯಾಗಿರುವ ಅಂಬರೀಶ್ ತಮ್ಮ ಸ್ಥಾನಕ್ಕೆ ಹಿಂತಿರುಗುವ ಮುನ್ನ ವೇದಿಕೆಯಲ್ಲಿ ಮಹಿಳೆಯೊಂದಿಗೆ ಮಾಡಿರುವುದು ವಿಡಿಯೋದಲ್ಲಿ ವೈರಲ್ ಆಗಿದೆ. ಅಂಬರೀಷ್ ಅವರ ಇಂತಹ ವರ್ತನೆ ಮೊದಲನೆಯದಲ್ಲ ಎನ್ನಲಾಗಿದೆ.
 
ಕಳೆದ 2015 ರಲ್ಲಿ ಅಂಬರೀಶ್ ಅವರು ಕಾಂಗ್ರೆಸ್ ಶಾಸಕ ಎಸ್.ಎಸ್. ಮಲ್ಲಿಖರ್ಜುನ್‌ರೊಂದಿಗೆ ವಿಧಾನಸಭೆಯ ಅಧಿವೇಶನದಲ್ಲಿ ವಾಟ್ಸಪ್‌ನಲ್ಲಿ ನೃತ್ಯದ ವೀಡಿಯೊವನ್ನು ವೀಕ್ಷಿಸುವಾಗ ರೆಡ್ ಹ್ಯಾಂಡಾಗಿ ಸಿಕ್ಕು ಬಿದ್ದಿದ್ದರು. 
 
2014 ರಲ್ಲಿ, ಹಮ್ಮಾ ಹಮ್ಮಾ ಹಾಡಿಗೆ ನೃತ್ಯ ಮಾಡುತ್ತಿರುವ ವೀಡಿಯೋ ಮತ್ತು ಬಾರ್‌ನಲ್ಲಿ ಯುವತಿಯನ್ನು ಚುಂಬಿಸುತ್ತಿದ್ದ ಚಿತ್ರ ವೈರಲ್ ಆಗಿ ಹೋಗಿತ್ತು.
 
ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಂಬರೀಷ್, ಮತ್ತೊಬ್ಬ ಕಾಂಗ್ರೆಸ್ ನಾಯಕಿ ರಮ್ಯ ಅವರೊಂದಿಗೆ ವಿವಾದದಲ್ಲಿ ಸಿಲುಕಿ ಸುದ್ದಿಯಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಏನಾಗಿದೆ ನಿಮಗೆ ಕಲಾಪಕ್ಕೆ ಯಾಕೆ ಗೈರು: ಶಾಸಕ, ಸಚಿವರಿಗೆ ಸಿಎಂ ಕ್ಲಾಸ್

ಬೆಂಗಳೂರು: ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ನಮ್ಮ ಸರಕಾರದ ಕೊನೆಯ ಅಧಿವೇಶನವಾಗಿದೆ. ಆದಾಗ್ಯೂ ಸಚಿವ ...

news

ಸಿಎಂ ಸಿದ್ದರಾಮಯ್ಯ- ಜಗದೀಶ್ ಶೆಟ್ಟರ್ ನಡುವೆ ಟಾಕ್ ಫೈಟ್

ಬೆಂಗಳೂರು: ಮಹದಾಯಿ ಸಮಸ್ಯೆ ಇತ್ಯರ್ಥಿ ಕುರಿತಂತೆ ಸಿಎಂ ಸಿದ್ದರಾಮಯ್ಯ ವಿಪಕ್ಷ ನಾಯಕ ಜಗದೀಶ್ ...

news

ಮಹದಾಯಿ ಸಮಸ್ಯೆ ಎತ್ತಲು ಬಿಜೆಪಿ ಶಾಸಕರ ಹಿಂದೇಟು

ಬೆಂಗಳೂರು: ಮಹತ್ವಕಾಂಕ್ಷೆಯ ನೀರಾವರಿ ಯೋಜನೆಯಾದ ಮಹದಾಯಿ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಲು ವಿಪಕ್ಷವಾದ ...

news

ಸಚಿವ ಜಾರ್ಜ್‌ಗೆ ತನಿಖೆಗೆ ಮುನ್ನವೇ ಕ್ಲೀನ್ ಚಿಟ್: ಕುಮಾರಸ್ವಾಮಿ ಕಿಡಿ

ಬೆಂಗಳೂರು: ಡಿವೈಎಸ್‌ಪಿ ಎಂ.ಕೆ.ಗಣಪತಿ ಪ್ರಕರಣದಲ್ಲಿ ನಗರಾಭಿವೃದ್ಧಿ ಖಾತೆ ಸಚಿವ ಕೆ.ಜೆ.ಜಾರ್ಜ್ ಅವರಿಗೆ ...

Widgets Magazine
Widgets Magazine