ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಕರವೇ ಲಂಚ ತೆಗೆದುಕೊಂಡಿತೇ?!

ಬೆಂಗಳೂರು, ಶುಕ್ರವಾರ, 12 ಜನವರಿ 2018 (08:21 IST)

Widgets Magazine

ಬೆಂಗಳೂರು: ಸದಾ ನಾಡು ನುಡಿ ವಿಚಾರದಲ್ಲಿ ಹೋರಾಟಕ್ಕಿಳಿಯುವ ಕರ್ನಾಟಕ ರಕ್ಷಣಾ ವೇದಿಕೆ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ.
 

ಪ್ರೇಮಿಗಳ ದಿನದಂದು ಸನ್ನಿ ಲಿಯೋನ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಸಿದರೆ ಅದರ ಭದ್ರತೆಗೆ ತೊಂದರೆ ಮಾಡದಂತೆ ಲಂಚ ಸ್ವೀಕರಿಸಲು ಮುಂದಾಗಿದ್ದಾರೆ ಎಂದು ಕರವೇ ಪ್ರವೀಶ್ ಶೆಟ್ಟಿ ಬಳಗ ಮತ್ತು ನಾರಾಯಣ ಗೌಡರ ಬಳಗ ಪ್ರಮುಖ ನಾಯಕರ ಮೇಲೆ ಬಂದಿದೆ.
 
ರಾಷ್ಟ್ರೀಯ ವಾಹಿನಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಈ ವಿಷಯ ಬಹಿರಂಗಪಡಿಸಿದೆ. ನೀವು ಕಾರ್ಯಕ್ರಮ ನಡೆಸಿ. ನಮ್ಮ ಕಾರ್ಯಕರ್ತರು ನಾವು ಹೇಳಿದರೆ ಮಾತ್ರ ಪ್ರತಿಭಟನೆ ನಡೆಸುತ್ತಾರೆ. ನೀವು 30 ಲಕ್ಷ ನಮ್ಮ ಬಾಸ್ ಗೆ ಕೊಡಿ. ಪೊಲೀಸರಿಂದ ಒಪ್ಪಿಗೆ ಪಡೆದುಕೊಂಡು ಬನ್ನಿ. ಮುಂದಿನದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಕರವೇ ನಾಯಕರು ಹೇಳುತ್ತಿರುವ ವಿಡಿಯೋ ತುಣುಕುಗಳನ್ನು ರಾಷ್ಟ್ರೀಯ ವಾಹಿನಿ ವರದಿ ಮಾಡಿದೆ.
 
ಆದರೆ ಇದೆಲ್ಲಾ ಕನ್ನಡ ಪರ ಸಂಘಟನೆಗಳ ಹೋರಾಟ ಹತ್ತಿಕ್ಕುವ ಯತ್ನ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಆರೋಪಿಸಿದ್ದಾರೆ. ಕಾರ್ಯಕ್ರಮಕ್ಕೆ ಭದ್ರತೆ ಒದಗಿಸುವ ಕುರಿತಂತೆ ಅವರು ಮಾತನಾಡಿದ್ದರಷ್ಟೇ. ಬೇರೆ ಯಾವುದೇ ಅಕ್ರಮ ನಡೆಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸನ್ನಿ ಲಿಯೋನ್ ಕರವೇ ಕನ್ನಡ ರಾಜ್ಯ ಸುದ್ದಿಗಳು Kannada Sunny Leon State News Karnataka Rakshana Vedike

Widgets Magazine

ಸುದ್ದಿಗಳು

news

ಇಂದು ಸಕ್ಕರೆ ನಾಡಿನಲ್ಲಿ ಸಿಎಂ ಸಾಧನಾ ಸಮಾವೇಶ

ಮಂಡ್ಯ: ಸಿಎಂ ಸಿದ್ದರಾಮಯ್ಯ ಇಂದು ಸಕ್ಕರೆ ನಾಡು ಮಂಡ್ಯದಲ್ಲಿ ತಮ್ಮ ಸರ್ಕಾರದ ಸಾಧನಾ ಸಮಾವೇಶದಲ್ಲಿ ...

news

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ನೇರವಾಗಿ ನೇಮಕವಾಗಲಿರುವ ಮೊದಲ ಮಹಿಳೆ ಯಾರು ಗೊತ್ತಾ...?

ನವದೆಹಲಿ: ಹಿರಿಯ ವಕೀಲರಾದ ಇಂದು ಮಲ್ಹೋತ್ರಾ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ...

news

ಪುತ್ರ ಯತೀಂದ್ರ ಪರ ಪರೋಕ್ಷವಾಗಿ ಈ ಸುಳಿವು ಬಿಟ್ಟುಕೊಟ್ಟ ಸಿಎಂ ಸಿದ್ದರಾಮಯ್ಯ!

ಮಂಡ್ಯ: ಸಿಎಂ ಸಿದ್ದರಾಮಯ್ಯ ಪುತ್ರ ಈ ಬಾರಿ ತಮ್ಮ ಪುತ್ರ ಯತೀಂದ್ರರನ್ನು ವರುಣಾ ಕ್ಷೇತ್ರದಲ್ಲಿ ...

news

ತಾಕತ್ತಿದ್ದರೆ ಆರ್‌ಎಸ್‌ಎಸ್‌, ಶ್ರೀರಾಮಸೇನೆ, ಬಜರಂಗದಳ ನಿಷೇಧಿಸಲಿ- ಮುತಾಲಿಕ್

ತಾಕತ್ತಿದ್ದರೆ ರಾಜ್ಯ ಸರ್ಕಾರ ಆರ್‌ಎಸ್‌ಎಸ್‌, ಶ್ರೀರಾಮಸೇನೆ, ಬಜರಂಗದಳ ಸಂಘಟನೆಗಳನ್ನು ನಿಷೇಧ ಮಾಡಲಿ ...

Widgets Magazine