ಮಂಡ್ಯದ 7 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನ ವಜಾ ಮಾಡಿದ ಕೆಪಿಸಿಸಿ

ಮಂಡ್ಯ, ಗುರುವಾರ, 11 ಏಪ್ರಿಲ್ 2019 (09:33 IST)

: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಕ್ಷಣ ಕ್ಷಣಕ್ಕೆ ಕುತೂಹಲ ಮೂಡಿಸುತ್ತಿದ್ದು, ಇದೀಗ ಮಂಡ್ಯದ 7 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನ ಕೆಪಿಸಿಸಿ ವಜಾ ಮಾಡಿದೆ ಎಂಬುದಾಗಿ ತಿಳಿದುಬಂದಿದೆ.

 ಮಂಡ್ಯದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮೈತ್ರಿ ಸರ್ಕಾರದ ಅಭ್ಯರ್ಥಿ ನಿಖಿಲ್ ಗೆ ಬೆಂಬಲ ಸೂಚಿಸದೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನು ವಜಾ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಂಡ್ಯ ಗ್ರಾಮಾಂತರದ ಹೆಚ್. ಅಪ್ಪಾಜಿ, ಭಾರತಿ ನಗರದ ಎಎಸ್ ರಾಜೀವ್, ಮಳವಳ್ಳಿಯ ಪುಟ್ಟರಾಮು, ಮಳವಳ್ಳಿ ನಗರದ ಕೆಜೆ ದೇವರಾಜು, ನಾಗಮಂಗಲದ ಎಂ ಪ್ರಸನ್ನ, ಕೆಆರ್ ಪೇಟೆಯ ಕೆಆರ್ ರವೀಂದ್ರ ಬಾಬು, ಮೇಲುಕೋಟೆಯ ಎಸ್‍.ಬಿ ಪ್ರಕಾಶ್ ಅವರನ್ನು  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ. ವೈ. ಘೋರ್ಪಡೆ ಅವರು ವಜಾಗೊಳಿಸಿ ಆದೇಶ ನೀಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೋದಿ ಸರ್ಕಾರಕ್ಕೆ ಸುಪ್ರೀಂಕೋರ್ಟಿನಿಂದ ಕಪಾಳ ಮೋಕ್ಷ !

ರಫೇಲ್ ಹಗರಣ ಕುರಿತು ಸುಪ್ರೀಂಕೋರ್ಟ್ ತನ್ನ ನಿರ್ಧಾರ ತಿಳಿಸಿದ್ದು, ಕೇಂದ್ರ ಸರ್ಕಾರವು ಸಲ್ಲಿಸಿದ್ದ ಎಲ್ಲಾ ...

news

ರಾತ್ರೋರಾತ್ರಿ 7 ಬೈಕ್ ಸುಟ್ಟಿದ್ದು ಹೇಗೆ?

ತಡರಾತ್ರಿ ಸಂಭವಿಸಿದ ಬೆಂಕಿ ಅವಘಡಕ್ಕೆ ಬೈಕ್ ಮಾಲೀಕರು ನಲುಗಿದ್ದರೆ, ಸೈಕಲ್ ಸವಾರರು ಆತಂಕಗೊಂಡಿದ್ದಾರೆ.

news

ಸುಮಲತಾಗೆ ವೋಟ್ ಹಾಕಲ್ಲ ಎಂದ ಅಂಬರೀಶ್ ಅಭಿಮಾನಿ. ಕಾರಣವೇನು ಗೊತ್ತಾ?

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೀಳಿಯುತ್ತಿರುವ ಸುಮಲತಾಗೆ ಯಾವುದೇ ...

Widgets Magazine