ಶಿಕ್ಷಕಿ ಹುದ್ದೆ ಕೊಡಿಸುವುದಾಗಿ ಸೌದಿಗೆ ಕರೆದೊಯ್ದು ಮಾಡಿದ್ದೇನು ಗೊತ್ತಾ..?

ಕೊಪ್ಪಳ, ಮಂಗಳವಾರ, 1 ಆಗಸ್ಟ್ 2017 (13:13 IST)

ಅರೇಬಿಕ್ ಶಿಕ್ಷಕಿ ಹುದ್ದೆ ಕೊಡಿಸುವುದಾಗಿ ಮೂಲದ ಮಹಿಳೆಯನ್ನ ಸೌದಿ ಅರೇಬಿಯಾಗೆ ಕರೆದೊಯ್ದು ಕಸ ಗುಡಿಸುವ ಕೆಲಸ ಕೊಟ್ಟು ಹಿಂಸೆ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.


ಮಂಗಳೂರು ಮೂಲದ ಏಜೆಂಟ್ ಶಂಶೀರ್ ಎಂಬಾತ ಬಾಬಾಜಾನ್ ಪತ್ನಿ ಚಾಂದ್ ಸುಲ್ತಾನಾ ಎಂಬುವವರಿಗೆ 40 ಸಾವಿರ ರೂ. ಸಂಬಳದ ಅರೇಬಿಕ್ ಬೋಧನಾ ಕೆಲಸ ಕೊಡಿಸುವುದಾಗಿ ಕರೆದೊಯ್ದಿದ್ದಾನೆ. ಇದಕ್ಕಾಗಿ ಶಂಶೀರ್`ಗೆ ಬಾಬಾಜಾನ್ 50 ಸಾವಿರ ರೂ. ಹಣವನ್ನೂ ನೀಡಿದ್ದಾನೆ. ಆದರೆ, ಸೌದಿಯಲ್ಲಿ ಮಹಿಳೆಗೆ ಕಸ ಗುಡಿಸುವ ಕೆಲಸ ಕೊಟ್ಟಿರುವುದಲ್ಲದೆ, ಕೊಠಡಿಯಲ್ಲಿ ಕೂಡಿ ಹಾಕಿ ಕೇವಲ ಬ್ರೆಡ್ ಪೀಸ್`ಗಳನ್ನ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೇರೆಯವರ ಸಹಾಯದೊಂದಿಗೆ ಪತಿಗೆ ಕರೆ ಮಾಡಿದ್ದ ಚಾಂದ್ ಸುಲ್ತಾನಾ ತನ್ನ ಸ್ಥಿತಿ ಬಗ್ಗೆ ಪತಿಗೆ ತಿಳಿಸಿದ್ದಾಳೆ.

ತನ್ನನ್ನ ಊರಿಗೆ ಕಳುಹಿಸಿ ಎಂದು ಚಾಂದ್ ಸುಲ್ತಾನಾಮಾಲೀಕನನ್ನ ಕೇಳಿದರೆ ಏಜೆಂಟರ್`ಗೆ 4 ಲಕ್ಷ ರೂ. ನೀಡಿದ್ದೇನೆ. ಅದನ್ನ ಕೊಟ್ಟು ಹೋಗು ಎನ್ನುತ್ತಿದ್ದಾರಂತೆ. ಘಟನೆ ಬಗ್ಗೆ ಸಂಸದ ಕರಡಿ ಸಂಗಣ್ಣ ಗಮನ ಸೆಳೆದಿದ್ದು, ನೆರವಿನ ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿ ಶಾಸಕ ರಾಜು ಕಾಗೆ ಗಂಡಸೇ ಅಲ್ಲ: ಜಾರಕಿಹೊಳಿ

ಬೆಳಗಾವಿ: ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಗಂಡಸರಿಲ್ಲ ಎಂದಿದ್ದ ಬಿಜೆಪಿ ಶಾಸಕ ರಾಜು ಕಾಗೆ, ಗಂಡಸೇ ...

news

ಪಡಿತರ ಆಹಾರ ಧಾನ್ಯಕ್ಕೆ ಬದಲು ಅಕೌಂಟಿಗೆ ಬೀಳಲಿದೆ ಹಣ..!

ಪಡಿತರ ವಿತರಣಾ ವ್ಯವಸ್ಥೆಯನ್ನ ರದ್ದು ಮಾಡಿ ಎಲ್`ಪಿಜಿ ಸಬ್ಸಿಡಿ ರೀತಿ ಫಲಾನುಭವಿಗಳ ಖಾತೆಗೇ ನೇರವಾಗಿ ಹಣ ...

news

ಆಂಬ್ಯುಲೆನ್ಸ್ ಸಿಗಲಿಲ್ಲ, 20 ಕಿ.ಮೀ ನಡೆದೇ ಬಂದ ಗರ್ಭಿಣಿ: ರಸ್ತೆಯಲ್ಲೇ ಪ್ರಸವ

ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವಂತಾ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಡೆದಿದೆ. ಆಂಬ್ಯುಲೆನ್ಸ್ ...

news

ಮತ್ತೊಮ್ಮೆ ಗುಟುರು ಹಾಕಿದ ಚೀನಾ ಅಧ್ಯಕ್ಷ

ಬೀಜಿಂಗ್: ಚೀನಾ ಜನತೆಗೆ ಶಾಂತಿ ಬೇಕು. ನಾವು ಆಕ್ರಮಣ ಮಾಡಲು ಮುಂದಾಗುವುದಿಲ್ಲ. ಆದರೆ ನಮ್ಮ ಸಾರ್ವಭೌಮತೆಗೆ ...

Widgets Magazine