Widgets Magazine
Widgets Magazine

ರಾಹುಲ್ ಗಾಂಧಿಗಾಗಿ ತೆರಿಗೆ ದುಡ್ಡು ಪೋಲಾದರೂ ‘ನಾಟ್ ಎ ಬಿಗ್ ಮ್ಯಾಟರ್’ ಎಂದ ಸಚಿವ!

ಬೆಂಗಳೂರು, ಬುಧವಾರ, 7 ಫೆಬ್ರವರಿ 2018 (08:40 IST)

Widgets Magazine


ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಫೆಬ್ರವರಿ 10 ರಿಂದ ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಮಾಡಲಿರುವ ಹಿನ್ನಲೆಯಲ್ಲಿ ಕೊಪ್ಪಳದ ಸರ್ಕ್ಯೂಟ್ ಹೌಸ್ ನವೀಕರಣಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ 25 ಲಕ್ಷ ಖರ್ಚು ಮಾಡುತ್ತಿರುವುದು ದೊಡ್ಡ ವಿಷಯವಲ್ಲ ಎಂದಿದ್ದಾರೆ.
 

ಈ ಬಗ್ಗೆ ವರದಿ ಪ್ರಸಾರ ಮಾಡಿರುವ ಖಾಸಗಿ ವಾಹಿನಿ ಕೊಪ್ಪಳದ ಸರ್ಕ್ಯೂಟ್ ಹೌಸ್ ಇತ್ತೀಚೆಗಷ್ಟೇ ಉದ್ಘಾಟನೆಯಾಗಿದೆ. ಉದ್ಘಾಟನೆಯಾದ ಬಳಿಕ ಯಾವುದೇ ನಾಯಕರು ಇಲ್ಲಿ ತಂಗಿಲ್ಲ. ಹಾಗಿದ್ದರೂ ರಾಹುಲ್ ಗಾಂಧಿ ವಾಸ್ತವ್ಯದ ಹಿನ್ನಲೆಯಲ್ಲಿ ಮತ್ತೆ 25 ಲಕ್ಷ ರೂ. ವೆಚ್ಚ ಮಾಡುತ್ತಿದೆ ಎಂದಿದೆ.
 
ಅಷ್ಟೇ ಅಲ್ಲ, ಈ ಬಗ್ಗೆ ಪ್ರಶ್ನಿಸಿದರೆ, ಇಲ್ಲಿ ಗೀಜರ್, ಎಸಿ ಇರಲಿಲ್ಲ. ಹಾಗಾಗಿ ಅದನ್ನು ಅಳವಡಿಸಲು ವೆಚ್ಚ ಮಾಡುತ್ತಿದ್ದೇವಷ್ಟೇ. ಇಟ್ ಈಸ್ ನಾಟ್ ಎ ಬಿಗ್ ಮ್ಯಾಟರ್ ಎಂದು ಸಚಿವರು ಸಮಜಾಯಿಷಿ ನೀಡಿದ್ದಾರೆ. ಹಾಗಿದ್ದರೂ ತಮ್ಮ ಪಕ್ಷದ ನಾಯಕನ ಅನುಕೂಲತೆಗಾಗಿ ಜನರ ತೆರಿಗೆ ದುಡ್ಡು ವೆಚ್ಚ ಮಾಡುತ್ತಿರುವುದು ಸರಿಯೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮೂರು ವರುಷದ ಹಸುಳೆಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ

ಮೈಸೂರು : ಕಾಮುಕನೊಬ್ಬ 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಘಟನೆಯೊಂದು ಬೆಳಕಿಗೆ ಬಂದಿದೆ.

news

ಚಿಕ್ಕೋಡಿ ಜಿಲ್ಲಾ ರಚನೆಗಾಗಿ ವಿಷ ಕುಡಿಯಲೂ ಸಿದ್ಧ- ಹುಕ್ಕೇರಿ

ಚಿಕ್ಕೋಡಿ ಜಿಲ್ಲಾ ರಚನೆಗಾಗಿ ಯಾವುದೇ ಹೋರಾಟಕ್ಕೂ ಸಿದ್ಧವಿದ್ದು, ವಿಷ ಕುಡಿಯಲು ಕೂಡ ತಯಾರಿದ್ದೇನೆ ಎಂದು ...

news

ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂಬುದು ಯುವಕರ ಒತ್ತಾಸೆ- ಮೊಯ್ಲಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೇಶದ ಪ್ರಧಾನಮಂತ್ರಿ ಆಗಬೇಕು ಎಂಬುದು ಪಕ್ಷ ಹಾಗೂ ಯುವಕರ ...

news

ಭ್ರಷ್ಟಾಚಾರ ದಾಖಲೆಯಿದ್ದರೆ ಸರ್ಕಾರ ವಜಾಗೊಳಿಸಲು ಉಗ್ರಪ್ಪ ಮೋದಿಗೆ ಸವಾಲು

ಭ್ರಷ್ಟಾಚಾರ ಆರೋಪ ಹೊರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕ ಸರ್ಕಾರವನ್ನು ವಜಾಗೊಳಿಸಿ, ...

Widgets Magazine Widgets Magazine Widgets Magazine