ಶಾಸಕ ಹಾಲಾಡಿ ಪರ ಕೋಟ ಶ್ರೀನಿವಾಸ ಪೂಜಾರಿ ಬ್ಯಾಟಿಂಗ್

ಭಾನುವಾರ, 15 ಜುಲೈ 2018 (19:38 IST)

ಶಾಸಕ ಹಾಲಾಡಿ ಮಾತು ಬೆಂಬಲಿಸಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಬ್ಯಾಟಿಂಗ್ ಮಾಡಿದ್ದಾರೆ. 104 ಸ್ಥಾನ ಪಡೆದರೂ ನಾವು ಸರಕಾರ ರಚನೆ ಮಾಡಲಾಗಲಿಲ್ಲ. ಅಂಕಿ ಅಂಶದ ಆಧಾರದ ಮೇಲೆ ಸರಕಾರ ರಚನೆ ಆಗಿದೆ. ಈ ಬಗ್ಗೆ ನಾನು ಸದನದಲ್ಲಿ ಸಿಎಂಗೆ ಮಾತನಾಡಿದ್ದೆ. ಸಿಎಂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದಿದ್ದೆ. ಆಗ ರಾಜ್ಯ ಸರಕಾರ ತಾಯಿಯ ಸ್ಥಾನದಲ್ಲಿದೆ ಎಂದಿದ್ದರು ಸಿಎಂ.

ಆದರೆ ಅವರದೇ ಬಜೆಟ್ ನಲ್ಲಿ ಕರಾವಳಿ ಭಾಗಕ್ಕೆ ಮಲತಾಯಿ ಧೋರಣೆ ತೋರಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಬಜೆಟ್ ಸರ್ವವ್ಯಾಪಿಯಾಗಿರಬೇಕು.

ನೊಂದವರಿಂದ ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಪ್ರತಿಧ್ವನಿಸುತ್ತದೆ ಎಂದು ಎಚ್ಚರಿಸಿದರು. 
 
 

ಈಶ್ವರ‌ಖಂಡ್ರೆ ಎದುರಲ್ಲೇ ಜಿಲ್ಲಾ ಕಾಂಗ್ರೆಸ್ ನಲ್ಲಿ ಅಸಮಧಾನ

ನೂತನ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮೇಲೆ ಮೊಟ್ಟ ಮೊದಲ ಬಾರಿಗೆ ಆಗಮಿಸಿದ್ದ ಈಶ್ವರ ಖಂಡ್ರೆ ಎದುರಲ್ಲೇ ...

ಶಿರಾಡಿಘಾಟ್ ರಸ್ತೆ ಲೋಕಾರ್ಪಣೆ

ರಾಜಧಾನಿ ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್ ರಸ್ತೆಯನ್ನು ...

ಹಾಲುಮತ ಸಮಾಜ: ಎಸ್ ಟಿ ಮೀಸಲಾತಿಗೆ ಸೇರಿಸುವಂತೆ ಸಭೆ

ಹಾಲುಮತ ಸಮಾಜದವರನ್ನು ಎಸ್ ಟಿ ಮೀಸಲಾತಿಗೆ ಸೇರಿಸುವಂತೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕಾಗಿನೆಲೆ ...

ಪಾಲಿಕೆ ಅಧಿಕಾರಿಗಳಿಂದ ರಾಷ್ಟ್ರಧ್ವಜಕ್ಕೆ ಅವಮಾನ!

ದೇಶದ ಅತಿ ಎತ್ತರದ ಧ್ವಜವನ್ನ ಮಾರ್ಚ 12 ರಂದು ಸ್ಥಾಪನೆ ಮಾಡಿದ್ದರು. ಆದರೆ ಎನು ಪ್ರಯೋಜನೆ? ಸ್ಥಾಪನೆ ...