ಜಾತಿ ಧರ್ಮವನ್ನು ಒಡೆದು ಮತ ಗಿಟ್ಟಿಸಿಲ್ಲ: ಜಿ.ಪರಮೇಶ್ವರ್

ತುಮಕೂರು, ಗುರುವಾರ, 13 ಏಪ್ರಿಲ್ 2017 (14:39 IST)

Widgets Magazine

ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಜಾತಿ ಧರ್ಮವನ್ನು ಒಡೆದು ಮತ ಗಿಟ್ಟಿಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಜನಪರ ಅಡಳಿತಕ್ಕೆ ಮತದಾರರು ನೀಡಿದ ಮನ್ನಣೆಯಾಗಿದೆ. ಸರಕಾರ ಅಭಿವೃದ್ಧಿ ಪರ, ಜನಪರವಾಗಿದೆ ಎನ್ನುವುದಕ್ಕೆ ಉಪಚುನಾವಣೆ ಫಲಿತಾಂಶವೇ ಸಾಕ್ಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
 
ಜಾತಿ, ಧರ್ಮಗಳನ್ನು ಒಡೆದು ರಾಜಕಾರಣ ಮಾಡಬೇಕು ಎನ್ನುವ ಬಿಜೆಪಿಗೆ ತಕ್ಕ ಶಾಸ್ತಿಯಾಗಿದೆ. ಇಂತಹ ರಾಜಕಾರಣ ಬಹಳ ದಿನಗಳವರೆಗೆ ನಡೆಯುವುದಲ್ಲ ಎನ್ನುವುದು ಮತದಾರರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ತೋರಿಸಿದ್ದಾರೆ ಎಂದರು.
 
ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು. ಆದರೆ. ಮತದಾರರು ಬಿಜೆಪಿಯ ಸುಳ್ಳು ಆರೋಪಗಳಿಗೆ ತಿರುಗೇಟು ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹಣಬಲ, ಅಧಿಕಾರಬಲದಿಂದ ಕಾಂಗ್ರೆಸ್ ಗೆಲುವು: ಶ್ರೀನಿವಾಸ್ ಪ್ರಸಾದ್

ಹಣಬಲ, ಅಧಿಕಾರದ ಬಲದಿಂದ ಕಾಂಗ್ರೆಸ್ ಚುನಾವಣೆ ಗೆದ್ದಿದೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ...

news

ಬಿಜೆಪಿ ಅಹಂಗೆ ಗರ್ವಭಂಗವಾಗಿದೆ: ಮಲ್ಲಿಕಾರ್ಜುನ್ ಖರ್ಗೆ

ಬೆಂಗಳೂರು: ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶದಿಂದ ಬಿಜೆಪಿ ಅಹಂಗೆ ಗರ್ವಭಂಗವಾಗಿದೆ ಎಂದು ...

news

ಡಿ.ಕೆ.ಶಿವಕುಮಾರ್‌ರಿಂದ ಬಿಎಸ್‌ವೈ, ಶೋಭಾ ಕರಂದ್ಲಾಜೆ ರಕ್ಷಣೆ: ಕುಮಾರಸ್ವಾಮಿ

ಬೆಂಗಳೂರು: ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ...

news

ಇನ್ಮುಂದೆ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ: ಶ್ರೀನಿವಾಸ ಪ್ರಸಾದ್ ಘೋಷಣೆ

ನಂಜನಗೂಡು ಉಪಚುನಾವಣೆಯಲ್ಲಿ ಸೋಲನುಭವಿಸಿರುವ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಇನ್ಮುಂದೆ ಚುನಾವಣೆಗಳಲ್ಲಿ ...

Widgets Magazine