ಸಿಎಂ ವಿರುದ್ಧ ಕೀಳು ಭಾಷೆ ಬಳಕೆ: ಸಚಿವ ಹೆಗಡೆ ಸಂಸ್ಕ್ರತಿ ಎಂದ ಸಚಿವ ಭೈರೇಗೌಡ

ಬೆಂಗಳೂರು, ಶನಿವಾರ, 18 ನವೆಂಬರ್ 2017 (12:12 IST)

ಕೇಂದ್ರ ಸಚಿವರಾಗಿರುವ ಅನಂತ್ ಕುಮಾರ್ ಹೆಗಡೆ ಕೀಳು ಭಾಷೆ ಬಳಸಿ ಸಿಎಂ ಸಿದ್ದರಾಮಯ್ಯರನ್ನು ನಿಂದಿಸಿರುವುದು ಅವರ ಸಂಸ್ಕ್ರತಿಯನ್ನು ತೋರಿಸುತ್ತದೆ ಎಂದು ಸಚಿವ ಕೃಷ್ಣ ಭೈರೆಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಸಾಂವಿಧಾನಿಕ ಕೇಂದ್ರ ಸಚಿವ ಸ್ಥಾನದಲ್ಲಿರುವವರು ರಾಜ್ಯದ ಮುಖ್ಯಮಂತ್ರಿಯೊಬ್ಬರನ್ನು ಅತ್ಯಂತ ಕೀಳು ಭಾಷೆಯಲ್ಲಿ ನಿಂದಿಸಿರುವುದು ನಾಚಿಕೆಗೇಡಿತನದ ಸಂಗತಿ. ಬಿಜೆಪಿಯ ಸಂಸ್ಕ್ರತಿಯ ಅತಂಹ ಹೀನವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. 
 
ಮುಂಬರುವ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಬೇಕಾಗಿದೆ. ಇಂತಹ ವ್ಯಕ್ತಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಕೇಂದ್ರ ಸಚಿವರನ್ನಾಗಿ ಆಯ್ಕೆ ಮಾಡಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಕಿಡಿಕಾರಿದ್ದಾರೆ.
 
ಬಿಜೆಪಿ ನಾಯಕರು ಸಂಸ್ಕ್ರತಿಯನ್ನೇ ಮರೆತಿದ್ದಾರೆ. ಅಸಂಸ್ಕ್ರತ ನಡುವಳಿಕೆ ಹೆಚ್ಚಿಸಲೆಂದೇ ಹೆಗಡೆಗೆ ಕೇಂದ್ರ ಸಚಿವ ಸ್ಥಾನ ನೀಡಲಾಗಿದೆ ಎಂದು ಸಚಿವ ಕೃಷ್ಣಭೈರೇಗೌಡ ವ್ಯಂಗ್ಯವಾಡಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ವೋಟ್‌ಬ್ಯಾಂಕ್‌ಗಾಗಿ ಯಾರ್ ಬೂಟ್ ಬೇಕಾದ್ರೂ ನೆಕ್ತಾರೆ: ಅನಂತ್ ಕುಮಾರ್ ಹೆಗಡೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವೋಟ್‌ಬ್ಯಾಂಕ್‌ಗಾಗಿ ಯಾರ ಬೂಟ್ ಬೇಕಾದ್ರೂ ನೆಕ್ತಾರೆ ಎಂದು ಕೇಂದ್ರ ಸಚಿವ ...

news

ಐಟಿ ದಾಳಿಗೆ ಶಶಿಕಲಾ ಬಣದ ಕುಮ್ಮಕ್ಕು: ಜಯಾ ಸೊಸೆ ಆರೋಪ

ಚೆನ್ನೈ: ಅಮ್ಮಾ ಜಯಲಲಿತಾ ನಿವಾಸದ ಮೇಲೆ ರಾತ್ರೋ ರಾತ್ರಿ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದರ ಹಿಂದೆ ...

news

ಜಯಲಲಿತಾ ಮನೆಯಲ್ಲಿ ಐಟಿ ಅಧಿಕಾರಿಗಳ ಕಣ್ಣು ಆ ಎರಡು ಬೆಡ್ ರೂಂ ಮೇಲಿತ್ತು!

ಚೆನ್ನೈ: ಮಾಜಿ ಸಿಎಂ, ದಿವಂಗತ ಜಯಲಲಿತಾ ನಿವಾಸಕ್ಕೆ ರಾತ್ರೋ ರಾತ್ರಿ ದಾಳಿ ನಡೆಸಿದ ಐಟಿ ಅಧಿಕಾರಿಗಳು ...

news

ಜಯಲಲಿತಾ ಕೊಠಡಿಗೆ ಐಟಿ ಅಧಿಕಾರಿಗಳು ಕಾಲಿಡಲಿಲ್ಲ! ಯಾಕೆ ಗೊತ್ತಾ?

ಚೆನ್ನೈ: ಜಯಲಲಿತಾ ನಿವಾಸಕ್ಕೆ ರಾತ್ರೋ ರಾತ್ರಿ ದಾಳಿ ನಡೆಸಿದ ಐಟಿ ಅಧಿಕಾರಿಗಳು ಮಾಜಿ ಸಿಎಂರ ಕೊಠಡಿಗೆ ...

Widgets Magazine
Widgets Magazine