ಮುಂದಿನ ಬಾರಿ ಮುಜರಾಯಿ ಖಾತೆ ಪಡೆದು ಕಾಂಗ್ರೆಸ್ ನೆಗೆದು ಬೀಳುವಂತೆ ಮಾಡುತ್ತೇನೆ: ಕೆಎಸ್ ಈಶ್ವರಪ್ಪ

ಬೆಳಗಾವಿ, ಬುಧವಾರ, 15 ನವೆಂಬರ್ 2017 (09:56 IST)

ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುತ್ತಿರುವ ಸದನದ ಮೇಲ್ಮನೆಯಲ್ಲಿ ಮಂಗಳವಾರ ಮುಜರಾಯಿ ಇಲಾಖೆ ಕುರಿತು ಪ್ರಶ್ನೋತ್ತರ ವೇಳೆ ಸ್ವಾರಸ್ಯಕರ ಚರ್ಚೆ ನಡೆಯಿತು.


 
ಮುಜರಾಯಿ ಇಲಾಖೆ ಸಿಕ್ಕಿದ್ದೇ ನಿಮ್ಮ ಅದೃಷ್ಟ ಎಂದುಕೊಳ್ಳಿ. ಮುಜರಾಯಿ ಇಲಾಖೆ ಎಂದರೆ ದೇವರ ಕೆಲಸ ಎಂದು ಈಶ್ವರಪ್ಪ, ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಮಾಣಿಗೆ ಛೇಡಿಸಿದರು.
 
ಈ ಸಂದರ್ಭದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಮುಜರಾಯಿ ಇಲಾಖೆ ಸಿಕ್ಕಿದರೆ ಚುನಾವಣೆಯಲ್ಲಿ ಸೋಲಾಗುತ್ತದೆ ಎಂಬ ಇತಿಹಾಸವಿದೆಯಲ್ಲವೇ ಎಂದು ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ನಾನು ಮುಂದಿನ ಬಾರಿ ಮುಜರಾಯಿ ಖಾತೆಯನ್ನೇ ಕೇಳಿ ಪಡೆಯುತ್ತೇನೆ ಎಂದರು.
 
ನನಗೆ ಆ ಖಾತೆ, ಈ ಖಾತೆ ಎಂದೇನಿಲ್ಲ. ಇದುವರೆಗೆ ಹಲವು ಖಾತೆಗಳನ್ನು ನಿಭಾಯಿಸಿದ್ದೇನೆ. ಮುಂದಿನ ಬಾರಿ ಮುಜರಾಯಿ ಇಲಾಖೆಯನ್ನೇ ಕೇಳಿ ಪಡೆಯುತ್ತೇನೆ. ಅದು ನನ್ನ ಸೌಭಾಗ್ಯ ಎಂದುಕೊಳ್ಳುತ್ತೇನೆ. ನಾನು ಮುಜರಾಯಿ ಇಲಾಖೆಗೆ ಬಂದರೆ ಕಾಂಗ್ರೆಸ್ ನೆಗೆದು ಬಿದ್ದು ಹೋಗುವಂತೆ ಮಾಡುತ್ತೆನೆ’ ಎಂದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸೆಕ್ಸ್ ಸಿಡಿ ನಂತರ ಹಾರ್ದಿಕ್ ಪಟೇಲ್ ಗೆ ಮತ್ತೊಂದು ಶಾಕ್

ಅಹಮ್ಮದಾಬಾದ್: ಗುಜರಾತ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಶಾಕ್ ಕೊಡಬೇಕೆಂಬುದು ಬಲೆ ಹೆಣೆಯುತ್ತಿರುವ ...

news

ಅಂತೂ ಇಂತೂ ರಾಹುಲ್ ಗಾಂಧಿಗೆ ಈ ಭಾಗ್ಯವಿಲ್ಲ ಬಿಡಿ!

ನವದೆಹಲಿ: ಅದೇನು ದುರದೃಷ್ಟವೋ. ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಇನ್ನೇನು ಅಧ್ಯಕ್ಷ ಹುದ್ದೆಗೇರಿಯೇ ...

news

ಹಾರ್ದಿಕ್ ಪಟೇಲ್ ಯಾವ ತಪ್ಪು ಮಾಡಿಲ್ಲ, ಸೆಕ್ಸ್ ಮೂಲಭೂತ ಹಕ್ಕು: ಜಿಗ್ನೇಶ್ ಮೇವಾನಿ

ಗುಜರಾತ್: ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಸೆಕ್ಸ್ ಸಿಟಿ ಬಿಡುಗಡೆಯಾದ ನಂತರ ಅವರ ನೆರವಿಗೆ ...

news

ಆರ್ಥಿಕತೆ ಕುಸಿತ: ಪ್ರಧಾನಿ ಮೋದಿ, ಜೇಟ್ಲಿ ವಿರುದ್ಧ ಯಶ್ವಂತ್ ಸಿನ್ಹಾ ವಾಗ್ದಾಳಿ

ನವದೆಹಲಿ: ಕೇಂದ್ರ ಸರಕಾರದ ನೋಟು ನಿಷೇಧ ಮತ್ತು ಜಿಎಸ್‌ಟಿ ದೇಶದ ಆರ್ಥಿಕತೆಗೆ ಮಾರಕವಾಗಿ ಪರಿಣಮಿಸಿವೆ ಎಂದು ...

Widgets Magazine
Widgets Magazine