ಸಾಲು ಸಾಲು ರಜಾ ದಿನ ಕೆಎಸ್ ಆರ್ ಟಿಸಿ ದರ ನೋಡಿದ್ರೆ ಬೆಚ್ಚಿಬೀಳ್ತೀರಿ!

ಬೆಂಗಳೂರು, ಬುಧವಾರ, 14 ಮಾರ್ಚ್ 2018 (11:15 IST)

Widgets Magazine

ಬೆಂಗಳೂರು: ಯುಗಾದಿ ಹಬ್ಬದ ಬೆನ್ನಲ್ಲೇ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರಿಗೆ ಶಾಕ್ ನೀಡಿದೆ. ಕೆಎಸ್ ಆರ್ ಟಿಸಿ ಬಸ್  ದರ ನೋಡಿದ್ರೆ ಬೆಚ್ಚಿ ಬೀಳ್ತೀರಿ.
 
ಈ ಮಾಸಾಂತ್ಯಕ್ಕೆ ಸಾಲು ಸಾಲು ರಜೆಯಿದೆ. ಆದರೆ ಟಿಕೆಟ್ ಬುಕ್ ಮಾಡಲು ಕೌಂಟರ್ ಗೆ ಹೋದರೆ ಶಾಕ್ ಆಗೋದು ಗ್ಯಾರಂಟಿ. ಯಾಕೆಂದರೆ ಬಸ್ ಪ್ರಯಾಣ ದರ ದುಪ್ಪಟ್ಟಾಗಿದೆ.
 
600 ರೂ. ಗಳಷ್ಟು ಟಿಕೆಟ್ ದರವಿರುವ ಪ್ರಯಾಣಕ್ಕೆ ಈ ಸಾಲು ಸಾಲು ರಜಾ ದಿನಗಳಂದು 1200 ರೂ. ನಿಗದಿಪಡಿಸಲಾಗಿದೆ. ಇದು ವೋಲ್ವೋ, ರಾಜಹಂಸ, ಸ್ಲೀಪರ್ ಬಸ್ ಗಳಿಗೆ ಅನ್ವಯವಾಗುತ್ತಿದೆ. ಇದರಿಂದಾಗಿ ಪ್ರಯಾಣಿಕರು ದಂಗುಬಡಿದಂತಾಗಿದ್ದಾರೆ.
 
ವಿಶೇಷ ರಜಾ ದಿನಗಳಂದು ಪ್ರಯಾಣ ದರ ಹೆಚ್ಚಳವನ್ನು ಶೇ. 20 ರಿಂದ ಶೇ. 50 ಕ್ಕೆ ಏರಿಕೆ ಮಾಡಿದ್ದೇ ಈ ದುಬಾರಿ ಟಿಕೆಟ್ ದರಕ್ಕೆ ಕಾರಣವಾಗಿದೆ. ಇದರಿಂದಾಗಿ ಕುಟುಂಬ ಸಮೇತ ರಜಾ ದಿನಗಳಂದು ಬೆಂಗಳೂರಿನಿಂದ ಊರಿಗೆ ತೆರಳಲು ಯೋಜನೆ ಹಾಕಿಕೊಂಡವರು ಮತ್ತೊಮ್ಮೆ ಯೋಚಿಸುವಂತಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಅಬ್ಬಾ! ಕರಿಂಜೆ ಸ್ವಾಮೀಜಿ ಕುರಿತು ಕಾಂಗ್ರೆಸ್ ಶಾಸಕ ಅಭಯಚಂದ್ರ ಜೈನ್ ಇದೆಂಥಾ ಮಾತನಾಡಿದ್ದು!

ಮಂಗಳೂರು : ಇತ್ತಿಚೆಗಷ್ಟೇ ಮೂಡಬಿದಿರೆಯ ಕರಿಂಜೆ ಮುಕ್ತಾನಂದ ಸ್ವಾಮೀಜಿ ಅವರು ಕಾರ್ಯಕ್ರಮವೊಂದರಲ್ಲಿ ...

news

‘ಸಮಸ್ಯೆ ಹೇಳಿದ ಅಧಿಕಾರಿಗೆ ಪರಿಹಾರ ಕೊಡುವ ಬದಲು ಶಿಕ್ಷಿಸುತ್ತಿದೆ ಸಿದ್ದರಾಮಯ್ಯ ಸರ್ಕಾರ’

ಬೆಂಗಳೂರು: ಐಪಿಎಸ್ ಅಧಿಕಾರಿಗಳಿಗೆ ರಾಜ್ಯದಲ್ಲಿ ಕೆಲಸ ಮಾಡುವ ವಾತಾವರಣ ಇಲ್ಲ ಎಂದು ಮುಖ್ಯ ಕಾರ್ಯದರ್ಶಿಗೆ ...

news

ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ವಿಧಿವಶ

ಕೇಂಬ್ರಿಡ್ಜ್: ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಕೇಂಬ್ರಿಡ್ಜ್ ನ ತಮ್ಮ ನಿವಾಸದಲ್ಲಿ ಇಂದು ಬೆಳಗಿನ ...

news

ಮೊಹಮ್ಮದ್ ನಲಪಾಡ್ ಮೇಲೆ ಇಂದು ದಯೆ ತೋರುತ್ತಾ ಹೈಕೋರ್ಟ್?

ಬೆಂಗಳೂರು: ಖಾಸಗಿ ರೆಸ್ಟೋರೆಂಟ್ ನಲ್ಲಿ ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ...

Widgets Magazine