ಪ್ರಜ್ವಲ್ ಹೇಳಿಕೆ ಬಗ್ಗೆ ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆ

ಬೆಂಗಳೂರು, ಸೋಮವಾರ, 10 ಜುಲೈ 2017 (16:16 IST)

ನಿಷ್ಠೆಯಿಂದ ದುಡಿದವರಿಗೆ ಹಿಂದೆ ಕುರ್ಚಿ ಹಾಕ್ತಾರೆ, ಸೂಟ್ ಕೇಸ್ ತಂದವರಿಗೆ ಮುಂದೆ ಕುರ್ಚಿ ಹಾಕುತ್ತಾರೆ ಎಂಬ ಪ್ರಜ್ವಲ್ ರೇವಣ್ಣ ಹೇಳಿಕೆ ಬಗ್ಗೆ ಇದೇ ಮೊದಲ ಬಾರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.


ಮಾಧ್ಯಮಗಳಿಗೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಬಂದಿದ್ದನ್ನ ನೋಡಿದ್ದೇನೆ. ನನ್ನ ಬಗ್ಗೆ ಪ್ರಜ್ವಲ್ ಮಾತನಾಡಿಯೇ ಇಲ್ಲ. ಸೂಟ್ ಕೇಸ್ ಪಡೆಯುವವರೆಲ್ಲ ಪಕ್ಷ ಬಿಟ್ಟು ಹೋಗಿದ್ದಾಗಿದೆ. ಅವರನ್ನ ಉದ್ದೇಶಿಸಿ ಪ್ರಜ್ವಲ್ ಹೇಳಿರಬಹುದು ಎಂದು ಕುಮಾರಸ್ವಾಮಿ ಬಂಡಾಯ ಶಾಸಕರಿಗೆ ಟಾಂಗ್ ನೀಡಿದ್ದಾರೆ. ಇದೇವೇಳೆ, ಪ್ರಜ್ವಲ್ ನನ್ನ ಬಗ್ಗೆ ಮಾತನಾಡಿಲ್ಲ, ನನ್ನ ಬಳಿ ಕ್ಷಮೆ ಕೇಳುವ ಅಗತ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇತ್ತೀಚೆಗೆ, ಪ್ರಜ್ವಲ್ ನೀಡಿದ್ದ ಸೂಟ್ ಕೇಸ್ ಹೇಳಿಕೆ ರಾಜ್ಯಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಸ್ವತಃ ಮಾಜಿ ಪ್ರಧಾನಿ ದೇವೇಗೌಡರು ಪ್ರಜ್ವಲ್ ರೇವಣ್ಣರನ್ನ ಕರೆಸಿಕೊಮಡು ಬುದ್ಧಿವಾದ ಹೇಳಿದ್ದರು. ಈ ಸಂದರ್ಭ ಕ್ಷಮೆ ಕೇಳಿದ್ದ ಪ್ರಜ್ವಲ್ ರೇವಣ್ಣ, ಕುಮಾರಸ್ವಾಮಿಗೆ ನೋವಾಗಿದ್ದರೆ ಅವರ ಬಳಿಯೂ ಕ್ಷಮೆ ಕೇಳುವುದಾಗಿ ಹೇಳಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪ್ರಜ್ವಲ್ ಕುಮಾರಸ್ವಾಮಿ ಜೆಡಿಎಸ್ ದೇವೇಗೌಡ Prajwal Kumaraswamy Jds Devegowda

ಸುದ್ದಿಗಳು

news

ಸೆಲ್ಫಿ ಹುಚ್ಚು: ದೋಣಿ ಮುಗುಚಿ ಎಂಟು ಯುವಕರ ಸಾವು

ನಾಗ್ಪುರ್: ನಾಗ್ಪುರದ ವೇನಾ ಅಣೆಕಟ್ಟಿನ ಹಿನ್ನಿರಿನಲ್ಲಿ ಫೇಸ್ಬುಕ್ ಲೈವ್ ಮಾಡುತ್ತಾ ಸೆಲ್ಫಿ ...

news

ಬಡತನ ತಾಳದೆ ಈ ಹೆತ್ತಮ್ಮ ಮಾಡಿದ್ದೇನು ಗೊತ್ತಾ?!

ಹೈದರಾಬಾದ್: ಬಡತನ ಮನುಷ್ಯನನ್ನು ಯಾವ ಮಟ್ಟಕ್ಕೆ ಇಳಿಸುತ್ತದೆ ನೋಡಿ. ಬಡತನದ ಬೇಗೆ ತಾಳಲಾದೆ ಇಲ್ಲೊಬ್ಬಳು ...

ಫೇಸ್ ಬುಕ್ ನಲ್ಲಿ ಸೆಲ್ಫೀ ಪೋಸ್ಟ್ ಮಾಡುತ್ತಲೇ ನೀರಿನಲ್ಲಿ ಮುಳುಗಿದರು!

ನಾಗ್ಪುರ: ಸ್ನೇಹಿತರೊಂದಿಗೆ ಸುತ್ತಾಡುವಾಗ ಸೆಲ್ಫೀ ತೆಗೆದು ಫೇಸ್ ಬುಕ್ ನಲ್ಲಿ ಫೋಟೋ, ವಿಡಿಯೋ ಪೋಸ್ಟ್ ...

news

ನಿರಾಶ್ರಿತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕ

ನವದೆಹಲಿ: ನಗರದ ಕನ್ನಾಟ್ ಪ್ರದೇಶದಲ್ಲಿ ತನ್ನ ಪೋಷಕರೊಂದಿಗೆ ಮಲಗಿದ್ದ 8 ವರ್ಷ ವಯಸ್ಸಿನ ಬಾಲಕಿಯೊಬ್ಬಳ ...

Widgets Magazine