ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಿಸುವಂತೆ ವಿಧಾನಸಭೆಯಲ್ಲಿ ಎಚ್`ಡಿಕೆ ಮನವಿ

ಬೆಂಗಳೂರು, ಮಂಗಳವಾರ, 21 ಮಾರ್ಚ್ 2017 (11:50 IST)

Widgets Magazine

ಗೌರವ ಧನ 7ರಿಂದ 10 ಸಾವಿರಕ್ಕೆ ಏರಿಕೆ, ನಿವೃತ್ತಿ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ. ಮಾಜಿ ಸಿಎಂ ಕುಮಾರಸ್ವಾಮಿ ಸದನದಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ.


ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ನ್ಯಾಯಯುತವಾಗಿದೆ. ವೇತನವನ್ನ 7 ಸಾವಿರದಿಂದ 10 ಸಾವಿರಕ್ಕೆ ಏರಿಸಿದರೆ ಸರ್ಕಾರಕ್ಕೆ ಹೊರೆಯಾಗುವುದಿಲ್ಲ. ಕಾರ್ಯಕರ್ತೆಯರ ಬೇಡಿಕೆಯನ್ನ ಪರಿಗಣಿಸಿ, ಸರ್ಕಾರ ಅವರ ಕನಿಷ್ಠ ವೇತನ ಹೆಚ್ಚಿಸಬೇಕು ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನೆರೆಯ ಕೇರಳ ಮತ್ತು ತಮಿಳುನಾಡಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಒಳ್ಳೆಯ ವೇತನದ ವ್ಯವಸ್ಥೆ ಇದೆ, ರಾಜ್ಯದಲ್ಲೂ ಮಾನವೀಯತೆ ದೃಷ್ಟಿಯಿಂದ ವೇತನ ಹೆಚ್ಚಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ಇದೇವೇಳೆ, ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕುಡಿಯುವ ನೀರು, ಊಟ ಮತ್ತು ಶೌಚಾಲಯದ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಎಚ್`ಡಿಕೆ ಮನವಿ ಮಾಡಿದ್ದಾರೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಕುಮಾರಸ್ವಾಮಿ. ಜೆಡಿಎಸ್ ಸಿದ್ದರಾಮಯ್ಯ Jds Kumaraswamy Karnataka

Widgets Magazine

ಸುದ್ದಿಗಳು

news

ಹೆಣ್ಣು ಮಕ್ಕಳ ಮೇಲೆ ಕನಿಷ್ಠ ಕನಿಕರವೂ ಇಲ್ಲವೇ? : ಕುಮಾರಸ್ವಾಮಿ ಪ್ರಶ್ನೆ

ಬೆಂಗಳೂರು: ಹೆಣ್ಣು ಮಕ್ಕಳು ರಾತ್ರಿಯಿಡೀ ರಸ್ತೆಯಲ್ಲಿ ಮಲಗಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಕನಿಷ್ಠ ...

news

ಭಾರತೀಯ ಮಹಿಳೆಯನ್ನು ಕಾಪಾಡಿ ಮತ್ತೊಮ್ಮೆ ಹೀರೋ ಆದ ಸಚಿವೆ ಸುಷ್ಮಾ ಸ್ವರಾಜ್!

ನವದೆಹಲಿ: ವಿದೇಶದಲ್ಲಿರುವ ಭಾರತೀಯರ ನೆರವಿಗೆ ಕೇಂದ್ರದ ವಿದೇಶಾಂಗ ಸಚಿವೆ ಧಾವಿಸುತ್ತಾರೆ ಎಂಬುದಕ್ಕೆ ಈ ...

news

ಭಾರತಕ್ಕೆ ನುಸುಳಿದ್ದಾರೆ 2000ಕ್ಕೂ ಅಧಿಕ ಉಗ್ರರು.. ಬಾಂಗ್ಲಾ ಎಚ್ಚರಿಕೆ

ಪಶ್ಚಿಮಬಂಗಾಳ ಗಡಿ ಮೂಲಕ 2000ಕ್ಕೂ ಅಧಿಕ ಮಂದಿ ಜಿಹಾದಿಗಳು ಭಾರತಕ್ಕೆ ನುಸುಳಿರುವುದಾಗಿ ಬಾಂಗ್ಲಾದೇಶ ...

news

ರಾಹುಲ್ ಗಾಂಧಿ ಹೆಸರು ಗಿನ್ನೆಸ್ ಬುಕ್ ಗೆ! ಅಂತಹದ್ದೇನು ಮಾಡಿದರು?!

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೆಸರನ್ನು ಗಿನ್ನೆಸ್ ವಿಶ್ವದಾಖಲೆ ಪುಟಕ್ಕೆ ...

Widgets Magazine