50 ಲಕ್ಷ ರೂ ಮೌಲ್ಯದ ಶೂ ಧರಿಸುವ ಸಿಎಂರದ್ದು ಯಾವ ಸಮಾಜವಾದ?: ಕುಮಾರಸ್ವಾಮಿ

ಬೆಂಗಳೂರು, ಶನಿವಾರ, 11 ನವೆಂಬರ್ 2017 (14:55 IST)

ಸಮಾಜವಾದಿ ಹಿನ್ನೆಲೆಯಿಂದ ಬಂದವರೆಂದು ಹೇಳ್ತಾರೆ. ಆದರೆ, 50 ಲಕ್ಷ ರೂ ಮೌಲ್ಯದ ಶೂ ಧರಿಸುತ್ತಾರೆ. ಇದು ಢೋಂಗಿ ಸಮಾಜವಾದ ಅಲ್ಲವೇ? ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸರಕಾರ ಚೆಕ್‌ಪೋಸ್ಟ್‌ಗಳಲ್ಲಿ ಖಾಸಗಿ ಗೂಂಡಾಗಳನ್ನು ನೇಮಿಸಿ ಹಣ ಲೂಟಿ ಹೊಡೆಯುತ್ತಿದೆ. ಪ್ರತಿನಿತ್ಯ 20 ರಿಂದ 30 ಲಕ್ಷ ಹಣ ಸಂಗ್ರಹಿಸಲಾಗುತ್ತಿದೆ. ಜಿಎಸ್‌ಟಿ ಜಾರಿ ಬಂದ ಮೇಲೆ ಚೆಕ್‌‌ಪೋಸ್ಟ್‌ಗಳನ್ನು ಮುಚ್ಚಬೇಕು ಎಂದು ಒತ್ತಾಯಿಸಿದರು.
 
ವಿಪಕ್ಷಗಳನ್ನು ಟೀಕಿಸಲು ಸಿಎಂ ಸಿದ್ದರಾಮಯ್ಯ ಪದೇ ಪದೇ ಢೋಂಗಿ ಪದ ಬಳಸುತ್ತಾರೆ. ಢೋಂಗಿ ಪದ ಸಿಎಂಗೆ ತುಂಬಾ ಪ್ರಿಯವಾಗಿದೆ. ಆದರೆ, ನಿಮ್ಮದು ಢೋಂಗಿ ಸಮಾಜವಾದವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
 
ರೌಡಿಗಳನ್ನು ಬಿಟ್ಟು ಸರಕಾರ ಚುನಾವಣೆಗೆ ಹಣ ಸಂಗ್ರಹಿಸುತ್ತಿದೆ. ಮುಂಬರುವ ಚುನಾವಣೆಗೆ ಹಣ ಸಂಗ್ರಹ ಮಾಡಲು ಸರಕಾರ ಮುಂದಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಸಿದ್ದರಾಮಯ್ಯ ಮೈಯಲ್ಲಿ ಟಿಪ್ಪು ರಕ್ತ ಹರಿತಿದೆ: ಕೆ.ಎಸ್.ಈಶ್ವರಪ್ಪ

ಬಂಟ್ವಾಳ: ಸಿಎಂ ಸಿದ್ದರಾಮಯ್ಯ ಮೈಯಲ್ಲಿ ಟಿಪ್ಪು ಸುಲ್ತಾನ್ ರಕ್ತ ಹರಿತಿದೆ. ನನ್ನ ಮೈಯಲ್ಲಿ ಕನಕದಾಸರ ರಕ್ತ ...

news

ಬಿಜೆಪಿಯವರಂತಹ ಭ್ರಷ್ಟ, ಕೊಳಕ ರಾಜಕಾರಣಿಗಳು ಬೇರೆ ಇಲ್ಲ: ಸಿಎಂ

ಬೆಂಗಳೂರು: ಬಿಜೆಪಿಯವರಂತಹ ಭ್ರಷ್ಟ, ಕೊಳಕ ರಾಜಕಾರಣಿಗಳು ಬೇರೆ ಯಾರೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ...

news

ಕಾಂಗ್ರೆಸ್ ಪಕ್ಷದ ಬಗ್ಗೆ ಅಸಮಾಧಾನವಿದೆ: ಶಾಸಕ ಮಲಕರೆಡ್ಡಿ

ಕಲಬುರಗಿ: ಕಾಂಗ್ರೆಸ್ ಪಕ್ಷದ ಬಗ್ಗೆ ಅಸಮಾಧಾನವಿದೆ. ಆದರೆ. ಪಕ್ಷ ಬಿಡುವ ವರದಿಗಳು ಉಹಾಪೋಹ ಎಂದು ಮಾಜಿ ...

news

ಸಸ್ಯಹಾರಿ ವಿದ್ಯಾರ್ಥಿಗಳಿಗೆ ಮಾತ್ರ ಚಿನ್ನದ ಪದಕ: ವಿ.ವಿ.ಆದೇಶ

ಪುಣೆ: ಕಠಿಣ ಸಸ್ಯಾಹಾರಿ ಮತ್ತು "ವ್ಯಸನ" ಅಥವಾ "ಕೆಟ್ಟ ಅಭ್ಯಾಸ" ಇಲ್ಲದ ವಿದ್ಯಾರ್ಥಿಗಳಿಗೆ ಮಾತ್ರ ಚಿನ್ನದ ...

Widgets Magazine
Widgets Magazine