ಸರಕಾರಕ್ಕೆ ನಮ್ಮ ರೈತರಿಗಿಂತ ತಮಿಳರ ಹಿತರಕ್ಷಣೆ ಮುಖ್ಯ: ಕುಮಾರಸ್ವಾಮಿ ಆಕ್ರೋಶ

ಮೈಸೂರು, ಮಂಗಳವಾರ, 25 ಜುಲೈ 2017 (14:15 IST)

ಕಾವೇರಿ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಕೊರತೆಯಿದ್ದರೂ ತಮಿಳುನಾಡಿಗೆ ನೀರು ಹರಿದುಬಿಡಲಾಗುತ್ತಿದೆ. ಸರಕಾರಕ್ಕೆ ನಮ್ಮ ರೈತರಿಗಿಂತ ತಮಿಳು ರೈತರ ಹಿತ ಮುಖ್ಯವಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ನಗರದಲ್ಲಿ ರೈತರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರಕಾರ ಬರಗಾಲ ಪೀಡಿತ ಪ್ರದೇಶಗಳನ್ನು ನಿರ್ಲಕ್ಷಿಸಿ ಕೇವಲ ರಾಜಕೀಯದಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.
 
ರಾಜ್ಯದಲ್ಲಿ ಬರಗಾಲವಿದ್ದರೂ ಪಕ್ಕದಲ್ಲಿರುವ ನಾಲೆಗಳಿಗೆ ನೀರು ಬಿಡುತ್ತಿಲ್ಲ. ಕೋರ್ಟ್ ಆದೇಶದ ನೆಪವೊಡ್ಡಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಇದು ನಮ್ಮ ಸರಕಾರಕ್ಕೆ ಇರುವ ಬದ್ಧತೆ ಎತ್ತಿ ತೋರಿಸುತ್ತದೆ ಎಂದು ಕಿಡಿಕಾರಿದರು.
 
ಒಂದು ವಾರದಲ್ಲಿ ನಾಲೆಗಳಿಗೆ ನೀರು ಬೀಡುವ ಬಗ್ಗೆ ಸರಕಾರ ಕ್ರಮ ಕೈಗೊಳ್ಳಲಿ. ಇಲ್ಲವಾದಲ್ಲಿ ಹುಣಸೂರಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಎಚ್.ಡಿ.ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ತಮಿಳುನಾಡು ಕಾಂಗ್ರೆಸ್ Tamilnadu Congress Cm Siddaramaiah H.d.kumarswamy

ಸುದ್ದಿಗಳು

news

ಸುಳ್ಳು ಪ್ರಚಾರದಲ್ಲಿ ಪ್ರಧಾನಿ ಮೋದಿಯದ್ದು ಎತ್ತಿದ ಕೈ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸುಳ್ಳು ಪ್ರಚಾರದಲ್ಲಿ ಪ್ರಧಾನಿ ಮೋದಿಯದ್ದು ಎತ್ತಿದ ಕೈ. ಆದರೆ, ನಾವು ಪ್ರಚಾರ ಮಾಡದೇ ಜನರ ...

news

2 ರೂಪಾಯಿಗಳಿಗಾಗಿ ಮಾಲೀಕನಿಗೆ ಚಾಕುವಿನಿಂದ ಇರಿದ ಗ್ರಾಹಕ

ಲೂಧಿಯಾನಾ: ಅಂಗಡಿ ಮಾಲೀಕನೊಂದಿಗೆ ನಡೆದ ಎರಡು ರೂಪಾಯಿಗಳ ಜಗಳದಲ್ಲಿ ಅಪರಿಚಿತ ಗ್ರಾಹಕನೊಬ್ಬ ಚಾಕುವಿನಿಂದ ...

news

14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್ ಪ್ರಮಾಣ ವಚನ ಸ್ವೀಕಾರ

ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಸತ್ ಭವನದ ಸೆಂಟ್ರಲ್ ...

news

ಚೀನಾ ಪರ ನಿಂತ ಲಷ್ಕರ್ ಉಗ್ರರು: ಭಾರತದ ವಿರುದ್ಧ ಯುದ್ದಕ್ಕೆ ಕರೆ

ಗಡಿಯಲ್ಲಿ ಚೀನಾ ಭಾರತದ ವಿರುದ್ಧ ಮುಗಿಬೀಳುಲು ಸಜ್ಜಾಗಿರುವ ಬೆನ್ನಲ್ಲೇ ಪಾಕಿಸ್ತಾನ ಕೃಪಾಪೋಷಿತ ನಿಷೇಧಿತ ...

Widgets Magazine