Widgets Magazine

ಜಿಂದಾಲ್ ಗೆ ಭೂಮಿ ನೀಡಿಕೆಯ ವಿಚಾರ; ಮರು ಪರಿಶೀಲನೆ ನಡೆಸಲು ಸಿಎಂ ನಿರ್ಧಾರ

ಬೆಂಗಳೂರು| pavithra| Last Updated: ಬುಧವಾರ, 12 ಜೂನ್ 2019 (19:21 IST)
ಬೆಂಗಳೂರು : ಜಿಂದಾಲ್ ಗೆ ನೀಡಿರುವ ಜಮೀನಿನ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನಲೆಯಲ್ಲಿ ಇದೀಗ ಈ ವಿಚಾರದ ಕುರಿತು  ಮರು ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಜಿಂದಾಲ್ ಕಂಪನಿಗೆ 3667 ಎಕರೆ ಭೂಮಿ ಮಾರಾಟ ಮಾಡಿದ ರಾಜ್ಯ ಸರ್ಕಾರದ ಕ್ರಮಕ್ಕೆ, ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಜಿಂದಾಲ್ ಕಂಪನಿಗೆ ಭೂಮಿ ಮಾರಟದ ವಿವಾದದ ಬಗ್ಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಕೈಗಾರಿಕಾ ಸಚಿವ ಕೆಜೆ ಜಾರ್ಜ್ ಅವರ ಜೊತೆ ಮಾತುಕತೆ ನಡೆಸಿದ  ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಈ ಬಗ್ಗೆ ಟ್ವೀಟ್ ಮಾಡಿ, ಜಿಂದಾಲ್ ಗೆ ಭೂಮಿ ಮಾರಾಟ ಮಾಡುವ ವಿಷಯದ ಕುರಿತು ನಿನ್ನೆ ಪರಮೇಶ್ವರ್ ಹಾಗೂ ಕೈಗಾರಿಕಾ ಸಚಿವ ಕೆಜೆ ಜಾರ್ಜ್ ಅವರ ಜೊತೆಗೆ ಚರ್ಚಿಸಿದ್ದೇನೆ. ಈ ಬಗ್ಗೆ ತೀರ್ಮಾನ ಮರುಪರಿಶೀಲನೆ ಮಾಡಲು ಸಂಪುಟ ಸಭೆಗೆ ಪುನಃ ಕಡತ ಮಂಡಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.


ಇದಕ್ಕೆ ಪ್ರತಿಕ್ರಿಯಿಸಿದ ಹೆಚ್.ಕೆ.ಪಾಟೀಲ್, ಸಿಎಂ ಕುಮಾರಸ್ವಾಮಿಯವರ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :