ಭೂ ಹಗರಣ ಆರೋಪ: ಪುಟ್ಟಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಸಿಎಂ ಪುತ್ರ ಸಿದ್ದತೆ

ಬೆಂಗಳೂರು, ಮಂಗಳವಾರ, 10 ಅಕ್ಟೋಬರ್ 2017 (13:19 IST)

ಮುಖ್ಯಮಂತ್ರಿ ಸಿದ್ದರಾಮಯ್ಯ 300 ಕೋಟಿ ಮೌಲ್ಯದ ಮಾಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಬಿ.ಜಿ.ಪುಟ್ಟಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಸಿಎಂ ಪುತ್ರ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯರವರ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶ ಮತ್ತು ಚುನಾವಣೆ ಪ್ರಚಾರಕ್ಕಾಗಿ ಯಾವುದೇ ವಿಷಯಗಳಿಲ್ಲವಾದ್ದರಿಂದ ಇಂತಹ ಬೇಜವಾಬ್ದಾರಿ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 
ಕಾವೇರಿ ನಿವಾಸದಲ್ಲಿ ವಕೀಲರೊಂದಿಗೆ ಚರ್ಚೆ ನಡೆಸಿರುವ ಯತೀಂದ್ರ, ಪುಟ್ಟಸ್ವಾಮಿ ಬಿಡುಗಡೆ ಮಾಡಿದ ದಾಖಲೆಗಳ ಸಮೇತ ಕೇಸ್ ದಾಖಲಿಸಲು ಸಿದ್ದತೆ ನಡೆಸುವಂತೆ ವಕೀಲರಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಬೆಂಗಳೂರಿನ ಉತ್ತರ ಭಾಗದಲ್ಲಿರುವ ಭೂಪಸಂದ್ರದ ಸರ್ವೆ ನಂಬರ್ 20 ಮತ್ತು ಸರ್ವೆ ನಂಬರ್ 21 ರಲ್ಲಿ 6.26 ಎಕರೆ ಭೂಮಿಯ ಮೌಲ್ಯ 300 ಕೋಟಿ ರೂಪಾಯಿಗಳಾಗಿದ್ದು ಡಿನೋಟಿಫಿಕೇಶನ್ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಪುಟ್ಟಸ್ವಾಮಿ ಬಾಂಬ್ ಸಿಡಿಸಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಸಿದ್ದರಾಮಯ್ಯರಿಂದ 300 ಕೋಟಿ ಭೂಹಗರಣ: ಬಿ.ಜಿ.ಪುಟ್ಟಸ್ವಾಮಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಭೂಸ್ವಾಧೀನದಿಂದ 300 ಕೋಟಿ ಮೌಲ್ಯದ ಭೂಮಿಯನ್ನು ಕೈಬಿಟ್ಟಿದ್ದಾರೆ ಎಂದು ...

news

ಅಯೋಧ್ಯೆಯಲ್ಲಿ ಶ‍್ರೀರಾಮ ಮೂರ್ತಿ ಸ್ಥಾಪನೆ…!

ಉತ್ತರ ಪ್ರದೇಶ: ಅಯೋಧ್ಯೆಯ ಸರಯೂ ನದಿ ತೀರದಲ್ಲಿ ನೂರು ಮೀಟರ್ ಎತ್ತರದ ಶ್ರೀರಾಮ ದೇವರಮೂರ್ತಿ ಸ್ಥಾಪಿಸಲು ...

news

ಹೈಕಮಾಂಡ್ ಪ್ರಿಪರೇಟರಿ ಎಕ್ಸಾಂ… `ಕೈ’ ಮುಖಂಡರ ಫೈನಲ್ ಪರೀಕ್ಷೆ ಕಿತ್ತಾಟ

ಬೆಂಗಳೂರು: 224 ವಿಧಾನಸಭಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ...

news

ಮತ್ತೆ ಪ್ರಧಾನಿ ಮೋದಿ ವಿರುದ್ಧ ಗುಜರಾತ್ ನಲ್ಲಿ ಗುಡುಗಿದ ರಾಹುಲ್ ಗಾಂಧಿ

ನವದೆಹಲಿ: ಗುಜರಾತ್ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಪ್ರಧಾನಿ ಮೋದಿ ...

Widgets Magazine
Widgets Magazine