ಗೌರಿ ಲಂಕೇಶ್ ಹತ್ಯೆ ಬಗ್ಗೆ ವಿವಾದಿತ ಹೇಳಿಕೆ ನೀಡಿದ ಶಾಸಕ ಜೀವರಾಜ್ ವಿಚಾರಣೆ: ರಾಮಲಿಂಗಾರೆಡ್ಡಿ’

ಬೆಂಗಳೂರು, ಶುಕ್ರವಾರ, 8 ಸೆಪ್ಟಂಬರ್ 2017 (12:25 IST)

Widgets Magazine

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಶಾಸಕ ಜೀವರಾಜ್ ಅವರನ್ನ ತನಿಖೆಗೊಳಪಡಿಸಲು ಸೂಚಿಸಿರುವುದಾಗಿ ಗೃಹ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.


ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ಬೈಕ್ ರ್ಯಾಲಿ ಸಂದರ್ಭ ಮಾತನಾಡಿದ್ದ ಶಾಸಕ ಜೀವರಾಜ್, ಸಂಘ ಪರಿವಾರದವರ ವಿರುದ್ಧ ಬರೆದಿದ್ದೇ ಕಾರಣ ಎಂಬ ಅರ್ಥ ಬರುವ ರೀತಿ ಮಾತನಾಡಿದ್ದರು. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿ ದೂರು ಕೂಡ ದಾಖಲಾಗಿತ್ತು. ಇದೀಗ, ಈ ಬಗ್ಗೆ ವಿಚಾರಣೆಗೊಳಪಡಿಸಲು ಸೂಚಿಸಿರುವುದಾಗಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಸಿಎಂ ಜೊತೆಗಿನ ಸಭೆ ಬಳಿಕ ಮಾತನಾಡಿದ ರಾಮಲಿಂಗಾರೆಡ್ಡಿ, ಶಾಸಕ ಜೀವರಾಜ್ ಹೇಳಿಕೆ ವಿಚಾರಣೆ ನಡೆಸಲು ಸೂಚಿಸಿದ್ದೇವೆ. ಯಾಕೆ ಆ ರೀತಿ ಹೇಳಿಕೆ ನೀಡಿದ್ದೀರಿ ಎಂದು ಕೇಳಲು ಸೂಚಿಸಿದ್ದೇವೆ. ಬಹಿರಂಗವಾಗಿ ಅಂತಹ ಹೇಳಿಕೆ ನೀಡುವುದು ಸರಿಯಲ್ಲ. ಎಸ್ಐಟಿ ತನಿಖೆ ಬಳಿಕ ಹೇಳಿಕೆ ಬಗ್ಗೆ ಬಗ್ಗೆ ಮತ್ತಷ್ಟು ಸ್ಪಷ್ಟನೆ ಸಿಗುತ್ತೆ ಎಂದು ಅವರು ಹೇಳಿದ್ದಾರೆ.

ಇದೇವೇಳೆ, ಹಂತಕರ ಬಗ್ಗೆ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ರಾಮಲಿಂಗಾರೆಡ್ಡಿ ಘೋಷಿಸಿದ್ದಾರೆ. ಎಸ್`ಐಟಿ ಕೇಳಿದಷ್ಟು ಪೊಲೀಸ್ ಸಿಬ್ಬಂದಿ ನೀಡಿದ್ದೇವೆ .ಮತ್ತಷ್ಟು ಸಿಬ್ಬಂದಿ ನೀಡಲು ಸಿದ್ಧವಿರುವುದಾಗ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಗೌರಿ ಹತ್ಯೆಯಾದ ಕೆಲವೇ ನಿಮಿಷಗಳಲ್ಲಿ ಅಲ್ಲಿ ರಸ್ತೆಯಲ್ಲಿ ಹೋದವಾ ಹಂತಕನಾ..?

ದಿಟ್ಟೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ತೀವ್ರಗತಿಯಲ್ಲಿ ...

news

‘ನಿಮ್ಮ ದೇಶದಲ್ಲೇ ಬೀಫ್ ತಿಂದು ಭಾರತಕ್ಕೆ ಬನ್ನಿ’

ನವದೆಹಲಿ: ನಿಮಗೆ ಬೀಫ್ ತಿನ್ನಬೇಕಿಂದ್ದರೆ, ನಿಮ್ಮ ದೇಶದಲ್ಲೇ ತಿಂದು ಭಾರತಕ್ಕೆ ಬನ್ನಿ ಎಂದು ಭಾರತದ ನೂತನ ...

news

ಪ್ರಧಾನಿ ಮೋದಿ ಜನ್ಮದಿನದಂದು ಉತ್ತರ ಪ್ರದೇಶ ಶಾಲೆಗಳಲ್ಲಿ ಹಾಜರಿ ಕಡ್ಡಾಯ!

ಲಕ್ನೋ: ಪ್ರಧಾನಿ ಮೋದಿಯವರು ಸೆಪ್ಟೆಂಬರ್ 17 ರಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ...

news

ಡೇರಾ ಬಾಬಾನ ಸೆಕ್ಸ್ ಕರ್ಮಕಾಂಡದ ಸ್ಥಳ ಹುಡುಕುತ್ತಿದ್ದ ಪೊಲೀಸರು ಬೆಚ್ಚಿಬಿದ್ದರು!

ಸಿರ್ಸಾ: ಡೇರಾ ಸಂಘಟನೆ ಮುಖ್ಯಸ್ಥ ರಾಮ್ ರಹೀಂ ಸಿಂಗ್ ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ ಬಳಿಕ ಆತನ ...

Widgets Magazine