Widgets Magazine

ಸಿಎಂ ನಮ್ಮ ಫ್ರೆಂಡ್ಸ್ ಗೆ ಏನೇನು ಗಿಫ್ಟ್ ತರ್ತಾರೆ ನೋಡೋಣ- ಅನರ್ಹ ಶಾಸಕರನ್ನು ಲೇವಡಿ ಮಾಡಿದ ಡಿಕೆಶಿ

ಬೆಂಗಳೂರು| pavithra| Last Modified ಶುಕ್ರವಾರ, 16 ಆಗಸ್ಟ್ 2019 (13:44 IST)
ಬೆಂಗಳೂರು : ಬಿಜೆಪಿ ಸಂಪುಟ ಸೇರುವ ವಿಚಾರದಲ್ಲಿ ಮೈತ್ರಿ ಸರ್ಕಾರದಿಂದ ಅನರ್ಹಗೊಂಡ ಶಾಸಕರನ್ನು ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ  ಮುಂದಾದ ರಾಜೀನಾಮೆ ನೀಡಿದ ಶಾಸಕರಿಗಾಗಿ 10 ಸಚಿವ ಸ್ಥಾನಗಳನ್ನು ಕಾಯ್ದಿರಿಸಲಾಗಿದ್ದು, ಉಳಿದ ಶಾಸಕರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಸಿಎಂ ಕೇಂದ್ರ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.


 ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ಫ್ರೆಂಡ್ಸ್ ಗೆ ಏನೇನು ಗಿಫ್ಟ್ ತರ್ತಾರೆ ನೋಡೋಣ. ಅವರೆಲ್ಲರೂ ಚೆನ್ನಾಗಿರಲಿ, ಅವರು ತ್ಯಾಗ, ಬಲಿದಾನ ಮಾಡಿದ್ದಾರೆ. ಅವರಿಗೆ ಹೂವು ಗಿಫ್ಟ್ ತೆಗೆದುಕೊಂಡು ಹೋಗಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :