40ರ ಮಹಿಳೆ ಜತೆ 20 ವರ್ಷದ ಹುಡುಗನ ಲವ್ವಿಡವ್ವಿ..!

ಬೆಂಗಳೂರು, ಶನಿವಾರ, 4 ನವೆಂಬರ್ 2017 (11:53 IST)

ಬೆಂಗಳೂರು: ನಲವತ್ತರ ಆಂಟಿಗಾಗಿ 20 ವರ್ಷದ ಹುಡುಗ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.


ತರುಣ್‌(21) ಆತ್ಮಹತ್ಯೆಗೆ ಯತ್ನಿಸಿರುವ ಯುವಕ. ಎಸ್ಎಸ್ಎಲ್ಸಿ ಫೇಲ್ ಆಗಿರುವ ತರುಣನಿಗೆ ಅಪ್ಪ-ಅಮ್ಮ ಇಲ್ಲ. ಜೆ.ಪಿ. ನಗರದ ಖಾಸಗಿ ಸ್ಕೂಲ್‌ ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡಿಕೊಂಡಿದ್ದ ಈತ ಹಾಗೂ ಆ ಶಾಲೆಯ ಪ್ರಿನ್ಸಿಪಾಲ್ ನಡುವೆ ಲವ್ವಿ ಡವ್ವಿ ಶುರುವಾಗಿತ್ತು. ಕಳೆದೊಂದು ವರ್ಷದಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಅಷ್ಟೇ ಅಲ್ಲದೆ ಇಬ್ಬರೂ ಕೂಡ 4 ತಿಂಗಳಿಂದ ಲಿವಿಂಗ್ ರಿಲೇಷನ್‌ ಶಿಪ್ ಇಟ್ಟುಕೊಂಡಿದ್ದರು ಎನ್ನಲಾಗಿದೆ.

ಆದರೆ ಒಂದೂವರೆ ತಿಂಗಳಿಂದ ಪ್ರಿನ್ಸಿಪಾಲ್ ತರುಣ್ ನನ್ನು ರಿಜೆಕ್ಟ್ ಮಾಡಿದ್ದಾರೆ. ಇದರಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ ಈತ, ನಾಲ್ಕೈದು ಬಾರಿ ಕೈ ಕೊಯ್ದುಕೊಂಡಿದ್ದ. ಇಷ್ಟಕ್ಕೆ ಸುಮ್ಮನಾಗದ ತರುಣ್ ನಿನ್ನೆ ಮತ್ತೆ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಸಮಾಜ ಏನೇ ಅಂದರೂ ಪ್ರಿನ್ಸಿಪಾಲ್ ನನಗೆ ಬೇಕು ಎಂದು ತರುಣ್‌ ಪಟ್ಟು ಹಿಡಿದಿದ್ದಾನೆ. ಆದರೆ ಈಗಾಗಲೇ ಪ್ರಿನ್ಸಿಪಾಲ್‌ ಗೆ ಮದುವೆಯಾಗಿ 20 ವರ್ಷದ ಮಗಳಿದ್ದಾಳೆ ಹಾಗೂ ಪತಿ ಕೇರಳದಲ್ಲಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸರ್ಕಾರದ ವಿರುದ್ಧ ಬಿಎಸ್ ವೈ ವಾಗ್ದಾಳಿ

ಬೆಂಗಳೂರು: ಖಾಸಗಿ ವೈದ್ಯರ ಮುಷ್ಕರ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸರ್ಕಾರದ ...

news

ವಿವಾದಾತ್ಮಕ ಹೇಳಿಕೆ: ಕಮಲ್ ಹಾಸನ್ ವಿರುದ್ಧ ಕೇಸ್, ಇಂದೇ ವಿಚಾರಣೆ

ಉತ್ತರ ಪ್ರದೇಶ: ಖ್ಯಾತ ನಟ ಕಮಲ್ ಹಾಸನ್ ವಿರುದ್ಧ ವಾರಣಾಸಿ ಕೋರ್ಟ್ ನಲ್ಲಿ ಕೇಸ್ ದಾಖಲಾಗಿದ್ದು, ಇಂದೇ ...

news

ಬಿಎಸ್ ವೈಗೆ ಜನರೇ ಬುದ್ಧಿ ಕಲಿಸುತ್ತಾರೆ: ಸಿಎಂ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನಾವು ಏನೇ ಹೇಳಿದರೂ ಕೇಳುವುದಿಲ್ಲ. ಅವರಿಗೆ ಜನರೇ ...

news

ಹಳೇ ನೋಟು ಇಟ್ಟುಕೊಂಡಿದ್ದೀರಾ? ಹಾಗಿದ್ದರೆ ಚಿಂತೆ ಬೇಡ

ನವದೆಹಲಿ: ಅಮಾನ್ಯಗೊಂಡ ಹಳೇ 500 ಮತ್ತು 1000 ರೂ. ನೋಟು ಇಟ್ಟುಕೊಂಡಿದ್ದೀರಾ? ಹಾಗಿದ್ದರೆ ಇನ್ನು ಚಿಂತೆ ...

Widgets Magazine
Widgets Magazine