ಬೆಂಗಳೂರು: ಕೊರೋನಾ ಅಲೆ ತಪ್ಪಿಸಲು ರಾಜ್ಯದಲ್ಲಿ 14 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಈ ವೇಳೆ ಏನೇನಿರುತ್ತದೆ, ಏನೇನಿರಲ್ಲ ಎಂಬ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.ಏನೇನಿದೆ? ತುರ್ತು ಆಹಾರಗಳು, ಹಾಲು, ಮಾಂಸ, ಮೀನು ಮಳಿಗೆಗಳು ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ತೆರೆದಿರಲಿವೆ. ಆನ್ ಲೈನ್ ಕ್ಲಾಸ್ ನಡೆಸಬಹುದು. ಹೋಟೆಲ್ ರೆಸ್ಟೋರೆಂಟ್, ಮದ್ಯದಂಗಡಿಗಳಲ್ಲಿ ಪಾರ್ಸಲ್ ಗೆ ಅವಕಾಶ. ವಿಮಾನ, ರೈಲ್ವೇ ಸೇವೆ ಇರಲಿದೆ. ಸರ್ಕಾರಿ ಕಚೇರಿಗಳಲ್ಲಿ ಶೇ.50 ಸಿಬ್ಬಂದಿಗೆ ಅವಕಾಶ.