ಕರ್ನಾಟಕ ಆಗಮಿಸುತ್ತಿರುವ ರಾಹುಲ್‌ ಗಾಂಧಿಗೆ ಬಿಜೆಪಿ ನಾಯಕರು ಮಾಡಿರುವ ವ್ಯಂಗ್ಯದ ಟ್ವೀಟ್ ಇಲ್ಲಿದೆ ನೋಡಿ!

ಬೆಂಗಳೂರು, ಶನಿವಾರ, 10 ಫೆಬ್ರವರಿ 2018 (06:51 IST)

ಬೆಂಗಳೂರು : ವಿಧಾನಸಭೆ ಚುನಾವಣೆ ಹಿನ್ನೆ ಲೆಯಲ್ಲಿ ಪ್ರಚಾರಕ್ಕಾಗಿ ಕರ್ನಾಟಕ ಆಗಮಿಸುತ್ತಿರುವ ಎಪಿಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ರಾಜ್ಯದ ಬಿಜೆಪಿ ನಾಯಕರು ವ್ಯಂಗ್ಯವಾಗಿ ಟ್ವೀಟ್ ಮೂಲಕ ಸ್ವಾಗತಕೋರಿದ್ದಾರೆ.


ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ ಯಡಿಯೂರಪ್ಪ ಅವರು ರಾಹುಲ್‌ ಗಾಂಧಿ ಅವರನ್ನು ಕುರಿತು,’ ಎಲೆಕ್ಷನ್‌ ಹಿಂದೂ ರಾಹುಲ್‌ ಗಾಂಧಿ ಅವರೇ ಬಳ್ಳಾರಿಗೆ ಎಂದು ಟ್ವೀಟ್ ಮಾಡಿ, ಜೊತೆಗೆ ‘ಚುನಾವಣಾ ಪ್ರಚಾರಕ್ಕೆ ಬಳ್ಳಾರಿ ಜಿಲ್ಲೆಗೆ ಆಗಮಿಸುತ್ತಿರುವ ರಾಹುಲ್ ಗಾಂಧಿ ಅವರಿಗೆ ಆತ್ಮೀಯ ಸ್ವಾಗತ. ಅವರು ಈ ಹಿಂದೆ ಪ್ರಚಾರ ಮಾಡಿದ ಬಹುತೇಕ ಕಡೆ ಕಾಂಗ್ರೆಸ್‌ಗೆ ಹಿನ್ನಡೆಯಾಗಿ ಬಿಜೆಪಿ ಜಯಗಳಿಸಿದೆ. ರಾಹುಲ್ ಬರುವುದು ಬಿಜೆಪಿಗೆ ಭಾಗ್ಯವೇ ಬಂದಂತಾಗಿದೆ’ ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ.


ಅದೇರೀತಿ ಸಿಟಿ ರವಿ ಕೂಡ ರಾಹುಲ್‌ ಗಾಂಧಿ ಅವರಿಗೆ’ ಕಾಂಗ್ರೆಸ್‌ ಸರಕಾರದ ಕೊಡುಗೆಯಾಗಿ ಭ್ರಷ್ಟಾಚಾರದಲ್ಲಿ ನಂ.1 ರಾಜ್ಯವಾಗಿರುವ ಕರ್ನಾಟಕಕ್ಕೆ 'ಬೇಲ್‌' ಮೇಲಿರುವ ರಾಹುಲ್‌ ಗಾಂಧಿಯನ್ನು ನಾನು ಸ್ವಾಗತಿಸುವೆ. ರಾಜ್ಯ ಲೂಟಿ ಮಾಡುವ ಮೂಲಕ ಗಾಂಧಿ ಕುಟುಂಬದ ಗೌರವ ಹೆಚ್ಚಿಸಿರುವ ಸಿದ್ದರಾಮಯ್ಯ ಬಗ್ಗೆ ರಾಹುಲ್‌ ಹೆಮ್ಮೆ ಪಡಬೇಕು’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಲ್ಪಸಂಖ್ಯಾತರನ್ನು ಓಟ್ ಬ್ಯಾಂಕ್ ಮಾಡಿಕೊಂಡ ಕಾಂಗ್ರೆಸ್ – ಶೆಟ್ಟರ್

ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಪಕ್ಷ ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಂಡಿದೆ ಎಂದು ವಿಧಾನಸಭೆ ವಿರೋಧ ...

news

ಅಮಿತ್ ಶಾ ಅವರಿಂದ ಹೇಡಿಯಂತಹ ಕೆಲಸ- ದಿನೇಶ್

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಶೇಷವಾಗಿ ಅಮಿತ್ ಶಾ ಅವರು ...

news

ರಾಹುಲ್ ಗಾಂಧಿ ಕಾಲಿಟ್ಟರೆ ಕಾಂಗ್ರೆಸ್ ಭಸ್ಮ- ಜನಾರ್ದನ ರೆಡ್ಡಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಾಲಿಟ್ಟಲ್ಲೆಲ್ಲಾ ಕಾಂಗ್ರೆಸ್ ಪಕ್ಷ ಸುಟ್ಟು ಭಸ್ಮವಾಗಲಿದೆ ಎಂದು ...

news

ನರೇಂದ್ರಮೋದಿಗೆ ಸಮಾನವಾದ ವ್ಯಕ್ತಿ ಸಿದ್ದರಾಮಯ್ಯ- ಸ್ವಾಮೀಜಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸರಿ ಸಮಾನವಾದ ...

Widgets Magazine
Widgets Magazine