ಯಡಿಯೂರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು: ಎಂ.ಬಿ.ಪಾಟೀಲ್

ವಿಜಯಪುರ, ಶುಕ್ರವಾರ, 1 ಡಿಸೆಂಬರ್ 2017 (17:44 IST)

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಅಸಭ್ಯ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ.ಪಾಟೀಲ್ ಗುಡುಗಿದ್ದಾರೆ.
ಯಡಿಯೂರಪ್ಪ ನನ್ನನ್ನು ಸರಕಾರದ ಕಮಿಷನ್ ಏಜೆಂಟ್ ಎಂದು ಹೇಳಿಕೆ ನೀಡಿರುವುದು ನನಗೆ ತುಂಬಾ ಬೇಸರವಾಗಿದೆ. ವಕೀಲರೊಂದಿಗೆ ಚರ್ಚಿಸಿ ಮೊಕದ್ದಮೆ ಹೂಡುವ ಬಗ್ಗೆ ಶೀಘ್ರ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
 
ಸರಕಾರದ ಕಮಿಷನ್ ಏಜೆಂಟ್‌ರಾಗಿ ಸಿಎಂ ಸಿದ್ದರಾಮಯ್ಯರಿಗೆ ಹಣಕಾಸಿನ ನೆರವು ಒದಗಿಸುತ್ತಿದ್ದಾರೆ. ಮುಂಬರುವ ಚುನಾವಣೆಗಾಗಿ ಆರ್ಥಿಕ ಸಂಪನ್ಮೂಲ ಕ್ರೋಢಿಕರಣ ಮಾಡಲಾಗುತ್ತಿದೆ ಎಂದು ಆರೋಪಿಸಿರುವುದು ಅವರ ಘನತೆಗೆ ತಕ್ಕುದಲ್ಲ ಎಂದು ತಿರುಗೇಟು ನೀಡಿದ್ದಾರೆ. 
 
ಕಳೆದ ಕೆಲ ದಿನಗಳಿಂದ ಯಡಿಯೂರಪ್ಪ ಮತ್ತು ಅವರ ಗ್ಯಾಂಗ್ ನನ್ನನ್ನು ಟಾರ್ಗೆಟ್ ಮಾಡಿ ಹೇಳಿಕೆ ನೀಡುತ್ತಿದೆ. ಆದರೆ, ಇಂತಹ ಹೇಳಿಕೆಗಳಿಗೆ ಬೆದರುವ ವ್ಯಕ್ತಿ ನಾನಲ್ಲ. ಸಿಎಂ ಸಿದ್ದರಾಮಯ್ಯ ಮುಂದಿನ ವಾರದಲ್ಲಿ ಜಿಲ್ಲೆಗೆ ಆಗಮಿಸುತ್ತಿದ್ದು ಆ ಸಂದರ್ಭದಲ್ಲಿ ಯಡಿಯೂರಪ್ಪನವರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆ ಎಂದು ಸಚಿವ ಎಂ.ಬಿ.ಪಾಟೀಲ್ ಸವಾಲ್ ಹಾಕಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಈದ್ ಹಬ್ಬದ ಊಟ ಕೊಡುವುದಾಗಿ ನಂಬಿಸಿ ಅಪ್ರಾಪ್ತಳ ಮೇಲೆ ಗ್ಯಾಂಗ್‌‍ರೇಪ್

ಹಾವೇರಿ: ಈದ್ ಹಬ್ಬದ ಊಟ ಕೊಡುವುದಾಗಿ ನಂಬಿಸಿ ಅಪ್ರಾಪ್ತಳ ಮೇಲೆ ನಾಲ್ವರು ಕಾಮುಕರು ಗ್ಯಾಂಗ್‌‍ರೇಪ್ ...

news

ಜೆಡಿಎಸ್ ಮುಖಂಡರೆಂದು ಮಂಚಕ್ಕೆ ಕರೆಯುತ್ತಿದ್ದ ಕಾಮುಕರು ಅಂದರ್

ಬೆಂಗಳೂರು: ಜೆಡಿಎಸ್ ಮುಖಂಡ ಎಂದು ಫೇಸ್‌ಬುಕ್‌, ವಾಟ್ಸಪ್‌ನಲ್ಲಿ ಪರಿಚಯಿಸಿಕೊಂಡು ಮಹಿಳೆಯರನ್ನು ಮಂಚಕ್ಕೆ ...

news

ಅಮಿತ್ ಶಾ ಜೈನರಾಗಿದ್ದರೂ ಹಿಂದು ಅಂತ ಸುಳ್ಳು ಹೇಳ್ತಾರೆ: ರಾಜ್‌ಬಬ್ಬರ್

ಲಕ್ನೋ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜೈನ ಸಮುದಾಯಕ್ಕೆ ಸೇರಿದವರಾಗಿದ್ದರೂ ಹಿಂದು ಅಂತ ಸುಳ್ಳು ...

news

ಸೋಮನಾಥ ದೇವಾಲಯದಲ್ಲಿ ರಾಹುಲ್ ಗಾಂಧಿ ಸಹಿ ಹಾಕಿದ್ದು ಇಷ್ಟೊಂದು ವಿವಾದವಾಗಿದ್ದು ಯಾಕೆ ಗೊತ್ತಾ?

ನವದೆಹಲಿ: ಗುಜರಾತ್ ನ ಸೋಮನಾಥ ದೇವಾಲಯದ ರಿಜಿಸ್ಟರ್ ಬುಕ್ ನಲ್ಲಿ ಸಹಿ ಹಾಕಿದ ಮೇಲೆ ರಾಹುಲ್ ಗಾಂಧಿ ಧರ್ಮದ ...

Widgets Magazine
Widgets Magazine