ಯಡಿಯೂರಪ್ಪ ಕಚಡಾ ಮುಖ್ಯಮಂತ್ರಿ: ಮಧು ಬಂಗಾರಪ್ಪ ಕಿಡಿ

ಧಾರವಾಡ, ಶುಕ್ರವಾರ, 21 ಜುಲೈ 2017 (18:11 IST)

ಶಿವಮೊಗ್ಗ ಜಿಲ್ಲೆಯಿಂದ ಯಡಿಯೂರಪ್ಪನಂತಹ ಕಚಡಾ ಮುಖ್ಯಮಂತ್ರಿಯನ್ನ ಕೊಟ್ಟಿದ್ದಕ್ಕೆ ನಾಚಿಕೆ ಆಗುತ್ತಿದೆ. ಶಿವಮೊಗ್ಗ ಜಿಲ್ಲೆಯಿಂದ ಬಂದ ಮೂವರು ಮುಖ್ಯಮಂತ್ರಿಗಳಲ್ಲೇ ಕಚಡಾ ಮುಖ್ಯಮಂತ್ರಿ ಎಂದು ಕಿಡಿ ಕಾರಿದ್ಧಾರೆ.


ಧಾರವಾಡದಲ್ಲಿ ಜೆಡಿಎಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಸಿಎಂ ಸಿದ್ದರಾಮಯ್ಯನವರ ಮೂಗು ಹಿಡಿದುಕೊಂಡು ರೈತರ ಸಾಲ ಮನ್ನಾ ಮಾಡಿಸುತ್ತೇನೆ ಎಂದು ಹೇಳುತ್ತಿದ್ದ ಯಡಿಯೂರಪ್ಪ, ಪ್ರಧಾನಮಂತ್ರಿ ನರೇಂದ್ರ ಮೋದಿ ಮೂಗಿ ಹಿಡಿದು ಸಾಲಮನ್ನಾ ಮಾಡಿಸಲಿ ಎಂದು ಕಿಡಿ ಕಾರಿದ್ಧಾರೆ. 17 ಸಂಸದರು ಏನು ಮಾಡುತ್ತಿದ್ದಾರೆ. ರೈತರ ನೆರವಿಗೆ ಬರುವುದನ್ನ ಬಿಟ್ಟು ಏನ್ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಕ್ಕೆ ಬಂದರೆ ಸಾಲಮನ್ನಾ ಮಾಡುವುದಾಗಿ ರಕ್ತದಲ್ಲಿ ಬರೆದು ಕೊಡುವುದಾಗಿ ಹೇಳುತ್ತಿರುವ ಯಡಿಯೂರಪ್ಪನವರ ರಕ್ತ ಒಳ್ಳೆಯ ರಕ್ತವಲ್ಲ, ಅದು ರೈತ ವಿರೋಧಿ ರಕ್ತ. ಗೊಬ್ಬರ ಕೇಳಲು ಹೋದ ರೈತರು ಮಾಡಿದ್ದು ನೆನಪಿಲ್ವಾ ಎಂದು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸುನಂದಾ ಪುಷ್ಕರ್ ಸಾವಿನ ರಹಸ್ಯ ಶೀಘ್ರ ಬಹಿರಂಗ..?

ಮಾಜಿ ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢವಾಗಿ ನವದೆಹಲಿ ಹೋಟೆಲ್`ನಲ್ಲಿ ...

news

`ಕೈ’ ಬಿಟ್ಟ ವಾಘೇಲಾ: ಗುಜರಾತ್ ಕಾಂಗ್ರೆಸ್ ಭಿನ್ನಮತ ಸ್ಫೋಟ

ಚುನಾವಣಾ ವರ್ಷದಲ್ಲಿ ಗುಜರಾತ್ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಿದೆ. ವಿಪಕ್ಷ ನಾಯಕ ಶಂಕರ್ ...

news

ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ 7 ಗಂಟೆಗಳ ಕಾಲ ಗಿಟಾರ್‍ ನುಡಿಸುತ್ತಲೇ ಇದ್ದ ವ್ಯಕ್ತಿ...

ವೈದ್ಯರು ಅತ್ತ ತನ್ನ ಮಿದುಳು ಶಸ್ತ್ರಚಿಕಿತ್ಸೆ ಮಾಡುತ್ತಿದ್ದರೆ, ಇತ್ತ ಈ ರೋಗಿ ಗಿಟಾರ್‌ ನುಡಿಸುತ್ತಲೇ ...

news

ಈ ಶಾಲೆಯಲ್ಲಿ ಶಿಕ್ಷಕರು ಹೆಲ್ಮೆಟ್ ಧರಿಸಿ ಪಾಠ ಮಾಡುತ್ತಾರೆ...!

ತೆಲಂಗಾಣದ ಸರ್ಕಾರಿ ಶಾಲೆಯ ಶಿಕ್ಷಕರು ತಲೆಗೆ ಹೆಲ್ಮೆಟ್ ಧರಿಸಿ ಪಾಠ ಮಾಡುವ ಮೂಲಕ ವಿಭಿನ್ನ ರೀತಿಯ ...

Widgets Magazine