ಮಧ್ವರಾಜ್ ನೀನು ಬಿಜೆಪಿ ಸೇರುತ್ತೀಯಾ?: ಸಿಎಂ ನೇರ ಪ್ರಶ್ನೆ

ಮಂಗಳೂರು, ಭಾನುವಾರ, 19 ನವೆಂಬರ್ 2017 (14:35 IST)

ಕಾಂಗ್ರೆಸ್ ಶಾಸಕ ಪ್ರಮೋದ್ ಮದ್ವರಾಜ್ ಬಿಜೆಪಿ ಸೇರಲಿದ್ದಾರೆ ಎನ್ನುವ ಉಹಾಪೋಹ, ವದಂತಿಗಳಿಗೆ ತೆರೆ ಎಳೆದಿದ್ದಾರೆ.
 
ಸುದ್ದಿಗಾರರ ಸಮ್ಮುಖದಲ್ಲಿಯೇ ಶಾಸಕ ಮದ್ವರಾಜ್ ಅವರನ್ನು ಕರೆದ ಸಿಎಂ ಸಿದ್ದರಾಮಯ್ಯ, ಏನಪ್ಪಾ ನೀನವು ಬಿಜೆಪಿ ಸೇರುತ್ತೀಯಾ? ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರ ನೀಡಿಗ ಮದ್ವರಾಜ್, ನಾನು ಬಿಜೆಪಿ ಸೇರುವ ವದಂತಿಗಳು ಸುಳ್ಳು ನಾನು ಈ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ ಎಂದರು.
 
ಬಿಜೆಪಿಯವರು ಅನಗತ್ಯ ಗೊಂದಲ, ಸುಳ್ಳು ಹೇಳುವುದೇ ಕಾಯಕವಾಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ತೊರೆದು ಯಾರೂ ಬಿಜೆಪಿ ಪಕ್ಷಕ್ಕೆ ಹೋಗುತ್ತಿಲ್ಲ. ಆದರೆ, ಬಿಜೆಪಿಯ ಹಲವು ಮುಖಂಡರು ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ನನ್ನೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿರುಗೇಟು ನೀಡಿದರು.
 
ಆರೆಸ್ಸೆಸ್ ಮುಖಂಡರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಆದರೆ,ಆರೆಸ್ಸೆಸ್ ಮುಖಂಡರನ್ನು ಪಕ್ಷಕ್ಕೆ ಸೇರ್ಪಗೊಳಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರತಿಪಕ್ಷಗಳನ್ನು ಹಣಿಯಲು ಬಿಜೆಪಿಯಿಂದ ಚುನಾವಣೆಯಲ್ಲಿ ವಾಟ್ಸಪ್ ಸಮರ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಆಧುನೀಕರಣಗೊಳ್ಳುತ್ತಿದೆ. ಬಿಜೆಪಿ ನಾಯಕರು ಸಾಮಾಜಿಕ ಜಾಲ ...

news

ಒಬ್ಬನ ಜತೆ ಎಂಗೇಜ್‌ಮೆಂಟ್, ಮತ್ತೊಬ್ಬನೊಂದಿಗೆ ವಿವಾಹ...!

ಹಾಸನ: ಯುವತಿಯೊಬ್ಬಳು ಒಬ್ಬನ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡು ಮತ್ತೊಬ್ಬನ ಜೊತೆ ವಿವಾಹ ಮಾಡಿಕೊಂಡ ವಿಚಿತ್ರ ...

news

ಬಿಎಸ್‌ವೈ, ಶೋಭಾ ಕರಂದ್ಲಾಜೆರಿಂದ ಪಶ್ಚಾತಾಪದ ಯಾತ್ರೆ: ಸಿಎಂ ವ್ಯಂಗ್ಯ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಮಾಡಬಾರದ ತಪ್ಪುಗಳನ್ನು ...

news

ಗುಜರಾತ್ ಬಿಜೆಪಿಗೆ ಮತ್ತೊಂದು ಆಘಾತ: ಪ್ರಭಾವಿ ಮುಖಂಡ ಬಿಜೆಪಿಗೆ ಗುಡ್‌ಬೈ

ಗಾಂಧಿನಗರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಲಾಢ್ಯ ಕೋಟೆಯಾದ ಗುಜರಾತ್‌‌ನಲ್ಲಿ ಬಿಜೆಪಿ, ಶತಾಯ ಗತಾಯ ...

Widgets Magazine
Widgets Magazine