ಮಹದಾಯಿ ಹೋರಾಟ: ನಾಳೆ ಉತ್ತರ ಕರ್ನಾಟಕ ಸಂಪೂರ್ಣ ಬಂದ್

ಬೆಂಗಳೂರು, ಮಂಗಳವಾರ, 26 ಡಿಸೆಂಬರ್ 2017 (19:22 IST)

ಮಹಾದಾಯಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ  ರೈತ ಸಂಘಟನೆಗಳು ನಾಳೆ ಸಂಪೂರ್ಣ ಬಂದ್‌ಗೆ ಕರೆ ನೀಡಿವೆ. 
 ನಾಳೆ ಉತ್ತರ ಕರ್ನಾಟಕ ಬಂದ್‌ಗೆ ನೂರಾರು ಸಂಘಟನೆಗಳು ಬೆಂಬಲ ಸೂಚಿಸಿದ್ದು, ಆಸ್ಪತ್ರೆ, ಮೆಡಿಕಲ್ ಸ್ಟೋರ್, ತುರ್ತು ಸೇವೆ  ಹೊರತುಪಡಿಸಿ ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್‍ಗೆ ಕರೆ ನೀಡಲಾಗಿದೆ
 
ಉತ್ತರ ಕರ್ನಾಟಕದಾದ್ಯಂತ ಸಾರಿಗೆ ಸಂಚಾರ ಸೇರಿದಂತೆ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದ್ದು, ಪ್ರತಿಯೊಬ್ಬ ನಾಗರಿಕರು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಸಂಘಟನೆಗಳು ಮನವಿ ಮಾಡಿವೆ.
 
ನಾಳೆ ಬಸ್ ಸಂಚಾರ, ಅಂಗಡಿ ಮುಂಗಟ್ಟು, ಶಾಲಾ‌-ಕಾಲೇಜು ಬಂದ್ ಮಾಡಲಾಗುವುದು. ಕೇಂದ್ರ ಸರ್ಕಾರದ ಕಚೇರಿಗಳಾದ ಅಂಚೆ ಕಚೇರಿ ಹಾಗೂ ರೈಲು‌ ನಿಲ್ದಾಣ ಹಾಗೂ ಸಂಸದರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಹೋರಾಟಗಾರರು ಒಕ್ಕೋರಲಿನ ನಿರ್ಣಯ ತಗೆದುಕೊಂಡಿದ್ದಾರೆ.
 
ಕೇಂದ್ರ ಸರಕಾರದ ಕಚೇರಿಗಳಿಗೆ ಮುತ್ತಿಗೆ ಹಾಕಿ ತೀವ್ರ ತೆರನಾದ ಪ್ರತಿಭಟನೆಯನ್ನು ವ್ಯಕ್ತಪಡಿಸಲಾಗುವುದು ಎಂದು ಮಹದಾಯಿ ಪ್ರತಿಭಟನಾಕಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿ.ಎಸ್.ಯಡಿಯೂರಪ್ಪ ವಚನಭ್ರಷ್ಟ: ಮಹಾದಾಯಿ ಪ್ರತಿಭಟನಾಕಾರರು

ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆಗಾಗಿ ಕಾದಿದ್ದ ...

news

ರಿವಾಲ್ವರ್‌ನಿಂದ ಬೆದರಿಸಿ ಬಾಲಕಿಯ ಮೇಲೆ ಗ್ಯಾಂಗ್‌ರೇಪ್

ಮುಜಾಫರ್‌ನಗರ್: 15 ವರ್ಷದ ಬಾಲಕಿಯ ಮೇಲೆ ಇಬ್ಬರು ಯುವಕರು ರಿವಾಲ್ವರ್‌ನಿಂದ ಬೆದರಿಸಿ ಅತ್ಯಾಚಾರವೆಸಗಿದ ...

news

ಸಂವಿಧಾನ ಬದಲಾಯಿಸಲು ಅನಂತ್‌ಕುಮಾರ್ ಹೆಗಡೆ ಯಾರು?: ರಾಯರೆಡ್ಡಿ

ಕೊಪ್ಪಳ: ಸಂವಿಧಾನದ ಪ್ರಮಾಣ ವಚನ ಸ್ವೀಕರಿಸಿ ಕೇಂದ್ರ ಸಚಿವರಾಗಿರುವ ಅನಂತ್ ಕುಮಾರ್ ಹೆಗಡೆ ಇದೀಗ ಸಂವಿಧಾನ ...

news

ಯಡಿಯೂರಪ್ಪ ಭಾವುಕರಾಗಿ ಹೇಳಿದ್ದೇನು ಗೊತ್ತಾ…?

ಬೆಂಗಳೂರು: ‘ಮಹದಾಯಿ ಯೋಜನೆ ಜಾರಿಗೆ ತಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದು, ಆದರೆ ಇದಕ್ಕೆ ...

Widgets Magazine
Widgets Magazine