ದುರುದ್ದೇಶಪೂರಿತ ಪ್ರಕರಣ: ಪೊಲೀಸ್ ಅಧಿಕಾರಿಗಳಿಗೆ ಬಿತ್ತು ದಂಡ

ಮಂಡ್ಯ, ಶನಿವಾರ, 13 ಅಕ್ಟೋಬರ್ 2018 (14:04 IST)

ದುರುದ್ದೇಶಪೂರಿತ ಪ್ರಕರಣ ದಾಖಲಿಸಿ, ಮಾನಹಾನಿ ಮಾಡಿದ್ದ ಪೊಲೀಸ್ ಅಧಿಕಾರಿಗಳಿಗೆ 7,62,268 ರೂ.ವಿಧಿಸಿ ತೀರ್ಪು ನೀಡಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಪ್ರಧಾನ ಸಿವಿಲ್ ನ್ಯಾಯಾಲಯ 7,62,268 ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. 2013ರ ನ. 25 ರಂದು ಶ್ರೀರಂಗಪಟ್ಟಣದ ಹೊಟೇಲ್ ವೊಂದರಲ್ಲಿ ಮಂಡ್ಯ ನಗರಸಭೆ ಸದಸ್ಯ ಅರುಣ್ ಕುಮಾರ್ ಎಂಬುವರು 25 ಲಕ್ಷ ರೂ. ಇಟ್ಟುಕೊಂಡು ವ್ಯಕ್ತಿವೊಬ್ಬರ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಆಗಿನ ಪ್ರೊಬೇಷನರಿ ಡಿವೈಎಸ್ಪಿ ಆಗಿದ್ದ ಗೀತಾ, ಸಿಪಿಐ ನಾಗೇಗೌಡ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ, ಹಣ ವಶಕ್ಕೆ ಪಡೆದುಕೊಂಡು ಖೋಟಾ ನೋಟು ಖರೀದಿ ದಂಧೆ ಪ್ರಕರಣ ದಾಖಲಿಸಿದ್ದರು.

ಆದರೆ ಸೂಕ್ತ ಸಾಕ್ಷಿ ಒದಗಿಸಿ ಸಾಬೀತು ಮಾಡುವಲ್ಲಿ ವಿಫಲವಾಗಿದ್ರಿಂದ 2016ರಲ್ಲಿ ಪ್ರಕರಣ ಖುಲಾಸೆಯಾಗಿತ್ತು. ನಂತರ ಅರುಣ್ ಕುಮಾರ್ ಮಾನನಷ್ಟ ಮೊಕದ್ದಮೆ ದಾಖಲಿಸಿ, 1 ಕೋಟಿ ರೂ. ಪರಿಹಾರ ನೀಡುವಂತೆ ಮನವಿ ಮಾಡಿದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ವೀರಣ್ಣ ಸೋಮಶೇಖರ್, ಪ್ರಕರಣ ದಾಖಲಿಸಿದ್ದ ಗೀತಾ, ಅರುಣ್ ನಾಗೇಗೌಡ ಹಾಗೂ ಅಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ  7,62,268 ದಂಡ ವಿಧಿಸಿ, ಆ ಹಣದಲ್ಲಿ 5 ಲಕ್ಷ ರೂ.ಅನ್ನು ಸಂತ್ರಸ್ತ ಅರುಣ್ ಕುಮಾರ್ ಅವರಿಗೆ ನೀಡುವಂತೆ ತೀರ್ಪು ನೀಡಿದ್ದಾರೆ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಫೇಸ್ ಬುಕ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್!

ನವದೆಹಲಿ: ಫೇಸ್ ಬುಕ್ ಬಳಸುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ನಿಮಗೊಂದು ಶಾಕಿಂಗ್ ಸುದ್ದಿ! ಸ್ವತಃ ಫೇಸ್ ...

news

ಶಬರಿಮಲೆಗೆ ಭೇಟಿ ನೀಡುವ ಮಹಿಳೆಯರನ್ನು ಎರಡು ಪೀಸ್ ಮಾಡಬೇಕು ಎಂದವರು ಯಾರು ಗೊತ್ತೇ?!

ತಿರುವನಂತಪುರಂ: ಶಬರಿಮಲೆಗೆ ಮಹಿಳೆಯರೂ ಭೇಟಿ ನೀಡಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪಿನ ಬೆನ್ನಲ್ಲೇ ...

news

ರಾಜ್ಯ ಕಾಂಗ್ರೆಸ್ ನಾಯಕರ ತುರ್ತು ಸಭೆ ಕರೆದ ಕೆಸಿ ವೇಣುಗೋಪಾಲ್

ಬೆಂಗಳೂರು: ಬಳ್ಳಾರಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ವಿಚಾರವಾಗಿ ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ...

news

ಪತಿಗಾಗಿ ಕಾಯುತ್ತಿದ್ದ ಗರ್ಭಿಣಿ ಮೇಲೆ ಅತ್ಯಾಚಾರ

ನವದೆಹಲಿ: ಪತಿಗಾಗಿ ಕಾಯುತ್ತಿದ್ದ ಗರ್ಭಿಣಿ ಮಹಿಳೆ ಮೇಲೆ ಕಾಮುಕರು ಅತ್ಯಾಚಾರವೆಸಗಿದ ಧಾರುಣ ಘಟನೆ ...

Widgets Magazine