ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೊಸ ಬೇಡಿಕೆ

ಬೆಂಗಳೂರು, ಶುಕ್ರವಾರ, 14 ಸೆಪ್ಟಂಬರ್ 2018 (10:43 IST)

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಚಟವಟಿಕೆಗಳು ಬಿರುಸಿನಿಂದ ಸಾಗಿದ್ದು, ನಾಯಕರು ತಮಗೆ ಸಚಿವ ಸ್ಥಾನ ಕೊಡುವಂತೆ ಒತ್ತಡ ಹೇರುವುದು ಸಾಮಾನ್ಯವಾಗಿದೆ.
 
ಇದೀಗ ಲೋಕಸಭೆ ವಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಪರ ಲಾಬಿ ನಡೆಸಿದ್ದಾರೆ. ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ನೀಡುವಂತೆ ಖರ್ಗೆ ಒತ್ತಾಯಿಸಿದ್ದಾರೆ.
 
ರಾಮಲಿಂಗಾರೆಡ್ಡಿಗೆ ಬೆಂಗಳೂರಿನ ಮೂರು ನಾಲ್ಕು ಕ್ಷೇತ್ರಗಳ ಮೇಲೆ ಹೆಚ್ಚು ಹಿಡಿತವಿದೆ. ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗಲಿದೆ. ಕಾರ್ಯಕರ್ತರ ಜತೆಗೂ ಅವರಿಗೆ ಒಡನಾಟ ಚೆನ್ನಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ರಾಮಲಿಂಗಾ ರೆಡ್ಡಿ ಪರ ಬ್ಯಾಟಿಂಗ್ ನಡೆಸಿದ್ದಾರೆ. ಇಷ್ಟು ದಿನ ಸಚಿವ ಸ್ಥಾನ ಸಿಗದ ಬೇಸರದಲ್ಲಿ ಪಕ್ಷದ ಚಟುವಟಿಕೆಗಳಿಂದ ರಾಮಲಿಂಗಾ ರೆಡ್ಡಿ ದೂರವೇ ಉಳಿದಿದ್ದರು. ಈ ಬಾರಿ ಹಿರಿಯರಿಗೆ ನೀಡುವ ಕೋಟಾದಲ್ಲಿ ರಾಮಲಿಂಗಾರೆಡ್ಡಿ ಹೆಸರು ಸೇರ್ಪಡೆಯಾಗಲಿದೆಯೇ ನೋಡಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಅರೆಸ್ಟ್ ವಾರಂಟ್

ಹೈದರಾಬಾದ್: ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಗೋದಾವರಿ ನದಿ ಹೋರಾಟ ಪ್ರಕರಣಕ್ಕೆ ...

news

ರಾಜ್ಯ ಸಂಪುಟ ವಿಸ್ತರಣೆಗೆ ಪಿತೃಪಕ್ಷದ ಕಾಟ!

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಗೆ ಕಾಂಗ್ರೆಸ್-ಜೆಡಿಎಸ್ ನಾಯಕರು ಎದುರು ...

news

ಬಂಡಾಯದ ಬಿಸಿ ನಡುವೆಯೇ ಡಿಕೆಶಿ-ಪರಮೇಶ್ವರ್ ದಿಡೀರ್ ಭೇಟಿ

ಬೆಂಗಳೂರು: ಜಾರಕಿಹೊಳಿ ಸಹೋದರರ ಬಂಡಾಯ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಹೆಸರು ಕೇಳಿಬರುತ್ತಿರುವ ...

news

ಪ್ರಿಯತಮೆ ಮೇಲೆ ಅತ್ಯಾಚಾರ ನಡೆದಿದ್ದಕ್ಕೆ ಈ ಪ್ರೇಮಿ ಮಾಡಿದ್ದೇನು ಗೊತ್ತಾ?

ಛತ್ತೀಸ್ ಘಡ: ತನ್ನ ಪ್ರೀತಿಯ ಹುಡುಗಿ ಮೇಲೆ ತನ್ನ ಕಣ್ಣೆದುರೇ ಇಬ್ಬರು ದುರುಳರು ಅತ್ಯಾಚಾರವೆಸಗಿದರು ಎಂದು ...

Widgets Magazine