Widgets Magazine
Widgets Magazine

ನಮ್ಮ ಮೆಟ್ರೋದಲ್ಲಿ ಜನದಟ್ಟಣೆ: ನೂಕು ನುಗ್ಗಲಿಗೆ ಬಿದ್ದು ಸೊಂಟ ಮುರಿದುಕೊಂಡ ವ್ಯಕ್ತಿ

ಬೆಂಗಳೂರು, ಗುರುವಾರ, 27 ಜುಲೈ 2017 (12:24 IST)

Widgets Magazine

ಬೆಂಗಳೂರು:ನಮ್ಮ ಮೆಟ್ರೋದಲ್ಲಿ ಜನ ಸಂಚಾರ ಹೇರಳವಾಗಿದ್ದು, ಅದು ಪೀಕ್ ಅವರ್ ನಲ್ಲಂತೂ ಕೇಳುವುದೇ ಬೇಡ ಹೆಜ್ಜೆ ಇಡಲೂ ಸಾಧ್ಯವಿಲ್ಲದಷ್ಟು ಜನದಟ್ಟಣೆ, ನೂಕು ನುಗ್ಗಲು.  ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಎಂ ಜಿ ರಸ್ತೆಗೆ ಪ್ರತಿನಿತ್ಯ ಸಂಚರಿಸುವ 59 ವರ್ಷದ ಬಾಲಕೃಷ್ಣ ರೈ ಮೆಟ್ರೋ ಹತ್ತಲು ಹೋಗಿ ನೂಕು ನುಗ್ಗಲಿನಿಂದ ಬಿದ್ದ ಪರಿಣಾಮ ಸೊಂಟದ ಮೂಳೆಯನ್ನೇ ಮುರಿದುಕೊಂಡಿರುವ ಘಟನೆ ನಡೆದಿದೆ.
 
ಕೆಂಪೇಗೌಡ ನಿಲ್ದಾಣದ ಪ್ಲಾಟ್ ಫಾರಂ 3 ರಲ್ಲಿ ಓರ್ವ ಯುವಕ ಜನದಟ್ಟಣೆ ಮಧ್ಯೆ ರೈ ಅವರನ್ನು ತಳ್ಳಿದ್ದು,  ಯುವಕ ನೂಕಿದ ರಭಸಕ್ಕೆ ರೈಯವರ ಸೊಂಟದ ಕೆಳಗೆ ಮೂಳೆ ಮುರಿದು ಪ್ಲಾಟ್ ಫಾರಂನಲ್ಲಿ ಬಿದ್ದಿದ್ದಾರೆ.
 
ರಕ್ಷಣಾ ಇಲಾಖೆಯಲ್ಲಿ ಅಕೌಂಟ್ಸ್ ಆಫೀಸರ್ ಆಗಿರುವ ಬಾಲಕೃಷ್ಣ ರೈ ಇದೀಗ ನಗರದ ಹೊಸ್ಮಾಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಹಿಪ್ ಬದಲಾವಣೆ ಸರ್ಜರಿ ನಡೆಯಲಿದೆ. ಹೃದ್ರೋಗಿಯಾಗಿರುವ ಬಾಲಕೃಷ್ಣ ರೈಯವರಿಗೆ ಸಕ್ಕರೆ ಕಾಯಿಲೆ ಕೂಡ ಇದೆ. ಹಾಗಾಗಿ ಗುಣಮುಖವಾಗಲು ಕನಿಷ್ಠ 3 ತಿಂಗಳು ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಒಟ್ಟಿನಲ್ಲಿ ಪೀಕ್ ಅವರ್ ನಲ್ಲಿ ಮಟ್ರೊ ನಿಲ್ದಾಣದಲ್ಲಿ ಇರುವ ವಿಪರೀತ ಜನದಟ್ಟಣೆಯಲ್ಲಿ ಪ್ರಯಾಣಿಕರು ತಮ್ಮ ಸುರಕ್ಷತೆ ಕಾಪಾಡುವುದು ಅಗತ್ಯವಾಗಿದೆ 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ವಾಟ್ಸ್‌ ಆ್ಯಪ್‌ ನಿಂದ ಬರಲಿದೆ ಹೊಸ ಆ್ಯಪ್‌

ಫೇಸ್‌ಬುಕ್‌ ಸ್ವಾಮ್ಯದ ವಾಟ್ಸ್‌ ಆ್ಯಪ್‌ ಹೊಸ ಮೊಬೈಲ್‌ ಅಪ್ಲಿಕೇಶನ್‌ ಒಂದನ್ನು ಬಿಡುಗಡೆ ಮಾಡಲು ಸಿದ್ಧತೆ ...

news

ಸೆಲ್ಫಿ ಹುಚ್ಚಿಗೆ ಆನೆಯಿಂದ ಬಲಿಯಾದ ಯುವಕ

ಸೆಲ್ಫಿ ಕ್ರೇಜ್ ಜನರನ್ನು ಏನಲ್ಲ ಅಪಾಯಕ್ಕೆ ದೂಡುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಗಜರಾಜನೊದಿಗೆ ...

news

ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಪುಸ್ತಕ ಹಿಡಿದು ನಿಂತಿದ್ದ ತಮಿಳುನಾಡು ಧುರೀಣರು!

ರಾಮೇಶ್ವರಂ: ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂರ ಸ್ಮಾರಕ ಉದ್ಘಾಟನೆಗೆ ಬಂದ ಪ್ರಧಾನಿ ...

news

ನಿತೀಶ್ ರಾಜಕೀಯ ಪಿತೂರಿ ಮೊದಲೇ ಗೊತ್ತಿತ್ತು ಎಂದ ರಾಹುಲ್ ಗಾಂಧಿ

ನವದೆಹಲಿ: ಬಿಹಾರದಲ್ಲಿ ರಾಜಕೀಯ ಹೈಡ್ರಾಮಾದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ...

Widgets Magazine Widgets Magazine Widgets Magazine