ವಿಚ್ಛೇದಿತ ಪತ್ನಿಯ ಅಶ್ಲೀಲ ಫೋಟೋಗಳನ್ನು ಡೇಟಿಂಗ್‌ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡಿದ ಪತಿ ಅರೆಸ್ಟ್

ಬೆಂಗಳೂರು, ಶನಿವಾರ, 28 ಅಕ್ಟೋಬರ್ 2017 (12:07 IST)

ವಿಚ್ಚೇದಿತ ಪತ್ನಿಯ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಫೋಟೋ ಮತ್ತು ಪ್ರೋಫೈಲ್‌ನ್ನು ಮ್ಯಾಟ್ರಿಮೋನಿಯಲ್ ಮತ್ತು ಡೇಟಿಂಗ್ ವೆಬ್‌‍ಸೈಟ್‌ನಲ್ಲಿ ಅಪ್ಲೋಡ್ ಮಾಡಿದ 31 ವರ್ಷ ವಯಸ್ಸಿನ ಸಾಫ್ಟ್‌ವೇರ್‌ ಇಂಜಿನಿಯರ್‌ನನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ.
ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಪ್ರತಿಷ್ಠಿದ ಐಟಿ ಕಂಪೆನಿಯೊಂದರಲ್ಲಿ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಹುದ್ದೆಯಲ್ಲಿರುವ ಹರ್ಷವರ್ಧನ್ ಭಟ್ ಎನ್ನುವ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
  
ಪೊಲೀಸ್ ಮೂಲಗಳ ಪ್ರಕಾರ, ಹರ್ಷವರ್ಧನ್ ಭಟ್ ಮತ್ತು ಆತನ ಪತ್ನಿ ವಿಚ್ಚೇದನಕ್ಕಾಗಿ ಕೌಟಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ವಿಚ್ಚೇದನ ಪ್ರಕರಣ ನೆನೆಗುದಿಯಲ್ಲಿದೆ ಎನ್ನಲಾಗಿದೆ.
 
ಏತನ್ಮಧ್ಯೆ, ಭಟ್ ಪತ್ನಿಯ ಮೇಲೆ ಸೇಡು ತೀರಿಸಿಕೊಳ್ಳಲು ವೇಶ್ಯಾವಾಟಿಕೆಗೆ ಪ್ರಚೋದಿಸುವ ಹಲವಾರು ವೆಬ್‌ಸೈಟ್‌ಗಳಲ್ಲಿ ಪತ್ನಿಯ ಫೋಟೋ ಹಾಗೂ ಮೊಬೈಲ್ ನಂಬರ್‌ನ್ನು ಅಪ್ಲೋಡ್ ಮಾಡಿದ್ದಾನೆ. ನಂತರ ಪತ್ನಿಗೆ ಅನೇಕರು ಕರೆ ಮಾಡಿ ಕಾಲ್‌ಗರ್ಲ್‌ ರೀತಿಯಲ್ಲಿ ವರ್ತಿಸಿದ್ದಾರೆ.
 
ಇದರಿಂದ ಆತಂಕಗೊಂಡ ಆರೋಪಿ ಹರ್ಷವರ್ಧನ್ ಪತ್ನಿ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನ ಬಗ್ಗೆ ತನಿಖೆ ನಡೆಸಿದ ಪೊಲೀಸರು ಹರ್ಷವರ್ಧನ್ ಭಟ್‌ನ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ವಶಕ್ಕೆ ತೆಗೆದುಕೊಂಡು ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೋದಿ ಭೇಟಿಯಿಂದ ಮಂಜುನಾಥನ ದರ್ಶನಕ್ಕೆ ತೊಂದರೆಯಾಗದು: ವೀರೇಂದ್ರ ಹೆಗ್ಗಡೆ

ಮಂಗಳೂರು: ಪ್ರಧಾನಿ ಮೋದಿ ಭೇಟಿ ಹಿನ್ನಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದು ಮಧ್ಯಾಹ್ನ 2 ...

news

ಎಲ್ಲಾ ಚುನಾವಣೆ ಇಫೆಕ್ಟ್! ಪ್ರಧಾನಿ ಮೋದಿ ಭಾರೀ ಬ್ಯುಸಿ!

ನವದೆಹಲಿ: ತವರು ರಾಜ್ಯದ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಧಾನಿ ಮೋದಿ ಭಾರೀ ಬ್ಯುಸಿಯಾಗಿದ್ದಾರೆ. ...

news

ಬ್ರಿಟನ್ ಬ್ರಿಟಿಷರ ರಾಷ್ಟ್ರದಂತೆ, ಹಿಂದೂಸ್ತಾನ್ ಹಿಂದೂಗಳ ರಾಷ್ಟ್ರ: ಭಾಗವತ್

ಮಧ್ಯಪ್ರದೇಶ: ಹಿಂದೂಸ್ತಾನ್ ಹಿಂದೂಗಳ ರಾಷ್ಟ್ರ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ...

news

ಕಾಂಗ್ರೆಸ್‌ನೊಂದಿಗೆ ಶಿವಸೇನೆ ನಾಯಕರ ಮೃದುಧೋರಣೆ: ಬಿಜೆಪಿ ವಾಗ್ದಾಳಿ

ಮುಂಬೈ: ಶಿವಸೇನೆ ಸಂಸದ ಸಂಜಯ್ ರಾವುತ್ ಪ್ರಧಾನಿ ಮೋದಿಯನ್ನು ತೆಗಳಿ ರಾಹುಲ್ ಗಾಂಧಿಯನ್ನು ಹೊಗಳಿರುವುದು ...

Widgets Magazine
Widgets Magazine