ಸಹೋದರಿಯ ಗೆಳತಿಯನ್ನೇ ರೇಪ್ ಮಾಡಿದ ಕಾಮುಕ ಸಹೋದರ

ಬೆಂಗಳೂರು, ಶನಿವಾರ, 5 ಆಗಸ್ಟ್ 2017 (16:56 IST)

19 ವರ್ಷದ ಅಂಗವಿಕಲ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.
 
ಹೂಡಿ ಪ್ರದೇಶದ ಬಳಿಯಿರುವ ಬಸವಣ್ಣ ನಗರ ನಿವಾಸಿ, ದಿನಗೂಲಿ ಕಾರ್ಮಿಕನಾಗಿರುವ ರವಿ, ಸಹೋದರಿಯ ಗೆಳತಿ ಮನೆಗೆ ಬಂದಾಗ ಆಕೆಯ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿದ್ದಾನೆ.
 
ಅತ್ಯಾಚಾರಕ್ಕೊಳಗಾದ ಯುವತಿಯ ತಾಯಿಯ ಪ್ರಕಾರ,  ಪುತ್ರಿ ತನ್ನ ಗೆಳತಿಯನ್ನು ನೋಡಲು ರವಿ ಮನೆಗೆ ಹೋಗಿದ್ದಳು. ಆದರೆ, ಮನೆಯಲ್ಲಿ ಆಕೆಯಿರಲಿಲ್ಲ. ರವಿ ಉಪಸ್ಥಿತನಿದ್ದನು. ಮನೆಯಲ್ಲಿ ಯಾರು ಇಲ್ಲದಿರುವುದು ಕಂಡು ಪುತ್ರಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ತುಂಬಾ ಹೊತ್ತಾದರು ಪುತ್ರಿ ಬಾರದಿದ್ದರಿಂದ ನಾನೇ ರವಿಯ ಮನೆಗೆ ಹೋಗಿ ನೋಡಿದಾಗ ಪುತ್ರಿಯ ಮೇಲೆ ಅತ್ಯಾಚಾರವಾಗಿರುವುದು ಕಂಡು ಬಂದಿದೆ.  
 
ಯುವತಿಯ ಪೋಷಕರು ಆರೋಪಿ ರವಿಯ ವಿರುದ್ಧ ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ರವಿ, ತನ್ನ ಸಹೋದರಿ ಮತ್ತು ತಂದೆಯೊಂದಿಗೆ ಕೋಲಾರ ಜಿಲ್ಲೆಗೆ ಪರಾರಿಯಾಗಿದ್ದಾನೆ.
 
ಮಾರನೇ ದಿನ ನಗರಕ್ಕೆ ಆಗಮಿಸುತ್ತಿದ್ದಂತೆ ಆತನ ವಿರುದ್ಧ ಅಪಹರಣ, ಸೇರಿದಂತೆ ಕೆಲ ಪ್ರಕರಣಗಳನ್ನು ದಾಖಲಿಸಿ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



ಇದರಲ್ಲಿ ಇನ್ನಷ್ಟು ಓದಿ :  
ರೇಪ್ ಸಹೋದರಿ ಸಹೋದರ ಕಾಮುಕ ಪೊಲೀಸ್ ಅತ್ಯಾಚಾರ Man Rape Sister Woman Teen Friend Physical Disability

ಸುದ್ದಿಗಳು

news

ಐಟಿ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಲ್ಲ: ಯಡಿಯೂರಪ್ಪ

ಬೆಂಗಳೂರು: ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಮನೆಯ ಮೇಲೆ ನಡೆದಿ ಐಟಿ ದಾಳಿಯ ಬಗ್ಗೆ ಯಾವುದೇ ...

news

ಅನೈತಿಕ ಸಂಬಂಧ: ಯುವತಿಯನ್ನು ಹತ್ಯೆಗೈದು ತನ್ನ ಅಂಗಡಿಯಲ್ಲಿಯೇ ಹೂತುಹಾಕಿದ ಭೂಪ

ಪಿಂಪ್ರಿ ಚಿಂಚವಾಡ್: 17 ವರ್ಷದ ಹದಿಹರೆಯದ ಯುವತಿಯ ಕತ್ತು ಸೀಳಿ ತನ್ನ ಅಂಗಡಿಯಲ್ಲಿಯೇ ಆಕೆಯನ್ನು ಹೂತು ...

news

ಬಿಜೆಪಿ, ಆರೆಸ್ಸೆಸ್ ಪ್ರೇರಣಿಯಿಂದ ನಮ್ಮ ಮೇಲೆ ದಾಳಿ: ರಾಹುಲ್ ಗಾಂಧಿ

ನವದೆಹಲಿ: ಗುಜರಾತ್‌ನಲ್ಲಿ ಬೆಂಗಾವಲು ಕಾರಿನ ಮೇಲೆ ನಡೆದ ದಾಳಿ ಆರೆಸ್ಸೆಸ್, ಬಿಜೆಪಿ ಪ್ರೇರಿತವಾಗಿದೆ. ...

news

ವಿದ್ಯಾರ್ಥಿನಿಯೊಂದಿಗಿನ ಅಶ್ಲೀಲ ಫೋಟೋಗಳನ್ನು ಇಂಟರ್‌ನೆಟ್‌ನಲ್ಲಿ ಪೋಸ್ಟ್ ಮಾಡಿದ ಶಿಕ್ಷಕ

ಕಾಟ್ಟಿಚೆರ್ರಾ(ಆಸ್ಸಾಂ): ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುವ ಇತಿಹಾಸ ಹೊಂದಿರುವ ಶಿಕ್ಷಕನೊಬ್ಬ, ...

Widgets Magazine