Widgets Magazine

ಪತಿ ರೇಪ್‌ ಮಾಡಿದ ಬಾಲಕಿಯೊಂದಿಗೆ ವಿವಾಹ ಮಾಡಿದ ಪತ್ನಿ

ಕೋಲಾರ| Rajesh patil| Last Modified ಬುಧವಾರ, 13 ಮಾರ್ಚ್ 2019 (19:27 IST)
ದಲಿತ ಅಪ್ರಾಪ್ತ ಬಾಲಕಿಯ ಮೇಲೆ ಪತಿ ಅತ್ಯಾಚಾರವೆಸಗಿದರೆ ಆತನ ಪತ್ನಿ ಬಾಲಕಿಯೊಂದಿಗೆ ಮಾಡಿಕೊಟ್ಟಿರುವ ಹೇಯ ಘಟನೆ ವರದಿಯಾಗಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹುಣಸಿಕೋಟ ಗ್ರಾಮದಲ್ಲಿ ಘಟನೆ ನಡೆದಿದ್ದು ಆರೋಪಿಯ ವಿರುದ್ಧ ಪೋಸ್ಕೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.
 
ದೊಡ್ಡ ಕಡತೂರು ಗ್ರಾಮದ ಕುಂಬಾರ ಸಮುದಾಯದ 32 ವರ್ಷ ವಯಸ್ಸಿನ ಗಂಗರಾಜು ಎಂಬಾತ ಪತಿಯಿಂದ ದೂರವಾಗಿದ್ದ ಪಲ್ಲವಿ ಎಂಬಾಕೆಯೊಂದಿಗೆ ಕಳೆದ ತಿಂಗಳು ವಿವಾಹವಾಗಿದ್ದ.
 
ಕಳೆದ ವಾರ ಪಲ್ಲವಿ ಸಹೋದರಿ ಇವರೊಂದಿಗೆ ವಾಸಿಸಲು ಆಗಮಿಸಿದ್ದಳು. ಆದರೆ, ಕಾಮುಕ ಗಂಗಾ ರಾಜು ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಯಾರಿಗಾದರೂ ಮಾಹಿತಿ ನೀಡಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾನೆ. ಆದರೆ, ಸುದ್ದಿ ಗ್ರಾಮದಲ್ಲಿ ಹರಡಿದಾಗ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
 
ಗ್ರಾಮಸ್ಥರ ವರ್ತನೆಯಿಂದ ಭಯಭೀತಳಾದ ಪಲ್ಲವಿ ತನ್ನ ಪತಿಯನ್ನು ಬಾಲಕಿಯೊಂದಿಗೆ ವಿವಾಹ ಮಾಡಿ, ಇಂತಹ ಘಟನೆ ನಡೆದಿಯೇ ಇಲ್ಲ ಎಂದು ಗ್ರಾಮಸ್ಥರನ್ನು ನಂಬಿಸಿದ್ದಾಳೆ.
 
ತದನಂತರ ಅಪ್ರಾಪ್ತ ಬಾಲಕಿಯನ್ನು ಗಂಗರಾಜು ವಿವಾಹವಾಗಿದ್ದಾನೆ ಎಂದು ಗ್ರಾಮಸ್ಥರು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದಾರೆ.
 
ಬಾಲಕಿ ನೀಡಿದ ದೂರಿನ ಮೇರೆಗೆ ಆರೋಪಿ ಗಂಗರಾಜು ಮತ್ತು ಪಲ್ಲವಿ ವಿರುದ್ಧ ಕೇಸ್ ದಾಖಲಿಸಿ ಬಂಧಿಸಿದ್ದಾರೆ ಇದರಲ್ಲಿ ಇನ್ನಷ್ಟು ಓದಿ :