ರೆಬಲ್ ಸ್ಟಾರ್ ಅಂಬಿಗೆ ಮಂಡ್ಯ, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ಬಸವನಗುಡಿ ಟಿಕೆಟ್?

ಬೆಂಗಳೂರು, ಶುಕ್ರವಾರ, 1 ಡಿಸೆಂಬರ್ 2017 (09:58 IST)

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಮ್ಯಾ ಸ್ಪರ್ಧಿಸುತ್ತಾರೆಂಬ ಸುದ್ದಿ ಹುಟ್ಟಿಕೊಂಡ ಬೆನ್ನಲ್ಲೇ ಮಂಡ್ಯದ ಮಾಜಿ ಸಂಸದೆಗಾಗಿ ರೆಬಲ್ ಸ್ಟಾರ್ ಅಂಬಿ ಬಿಟ್ಟುಕೊಡಬೇಕಾಗಬಹುದು ಎಂಬ ಮಾತುಗಳು ಕೇಳಿ ಬಂದಿತ್ತು.
 

ಆದರೆ ಇದೀಗ ಇಬ್ಬರೂ ಸ್ಟಾರ್ ಗಳಿಗೂ ಕಾಂಗ್ರೆಸ್ ತುಪ್ಪ ಸವರಲು ಮುಂದಾಗಿದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ಉತ್ತಮ ಕಾರ್ಯನಿರ್ವಹಿಸುತ್ತಿರುವ ರಮ್ಯಾಗೆ ದೆಹಲಿ ನಾಯಕರ ಕೃಪಾಕಟಾಕ್ಷವಿದೆ.
 
ಇದೇ ಬಲದಿಂದ ಅವರಿಗೆ ಮಂಡ್ಯ ಟಿಕೆಟ್ ಸಿಗುತ್ತದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಹಾಗೆ ಮಾಡಿದರೆ ಮಂಡ್ಯದ ಗಂಡು ಅಂಬರೀಷ್ ಸ್ಥಾನ ಬಿಟ್ಟುಕೊಡಬೇಕಾಗುತ್ತಿತ್ತು. ಇದರಿಂದ ಅಸಮಾಧಾನ ಸ್ಪೋಟಗೊಳ್ಳುವ ಸಾಧ್ಯತೆಯಿತ್ತು. ಇದೇ ಕಾರಣಕ್ಕೆ ಅಂಬಿಗೆ ಮಂಡ್ಯ ಬಿಟ್ಟುಕೊಟ್ಟು ರಮ್ಯಾಗೆ ಬೆಂಗಳೂರಿನ ಬಸವನಗುಡಿ ವಿಧಾನಸಭೆ ಕ್ಷೇತ್ರದ ಟಿಕೆಟ್ ನೀಡಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರ ಬಂದಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ರೆಬಲ್ ಸ್ಟಾರ್ ಅಂಬರೀಷ್ ರಮ್ಯಾ ಕಾಂಗ್ರೆಸ್ ಮಂಡ್ಯ ಕ್ಷೇತ್ರ ಚುನಾವಣೆ ರಾಜ್ಯ ಸುದ್ದಿಗಳು Ramya Congress Election Mandya Constituancy State News Rebal Star Ambreesh

ಸುದ್ದಿಗಳು

news

ಕೇರಳ, ತಮಿಳುನಾಡಿನಲ್ಲಿ ಓಖಿ ಚಂಡಮಾರುತದ ಅಬ್ಬರ

ತಿರುವನಂತಪುರಂ: ಓಖಿ ಚಂಡಮಾರುತರ ಅಬ್ಬರಕ್ಕೆ ಕೇರಳ ಮತ್ತು ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು ...

news

ನಾಡಗೀತೆ ಹಾಡಲು ಹೋಗಿ ಎಡವಟ್ಟು ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಆಯೋಜಿಸಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ...

news

ರಾಹುಲ್ ಗಾಂಧಿ ಹಿಂದೂಯೇತರ ಬುಕ್ ನಲ್ಲಿ ಸಹಿ ಮಾಡಿರಲಿಲ್ಲ

ನವದೆಹಲಿ: ಗುಜರಾತ್ ನ ಪ್ರಸಿದ್ಧ ಸೋಮನಾಥ ದೇವಾಲಯಕ್ಕೆ ಭೇಟಿ ಮಾಡಿದ ರಾಹುಲ್ ಗಾಂಧಿ ಹಿಂದೂಯೇತರ ಬುಕ್ ...

news

88 ವಿದ್ಯಾರ್ಥಿನಿಯರನ್ನು ನಗ್ನಗೊಳಿಸಿ ಶಿಕ್ಷೆ ನೀಡಿದ ಮೂವರು ಶಿಕ್ಷಕರು

ಇಟಾನಗರ್: ಮುಖ್ಯ ಶಿಕ್ಷಕಿಯ ವಿರುದ್ಧ ಅಸಭ್ಯ ಶಬ್ದಗಳನ್ನು ಬರೆದಿದ್ದಾರೆ ಎಂದು ಆರೋಪಿಸಿ 88 ...

Widgets Magazine