ಮಂಡ್ಯ ಲೋಕಸಭೆ ಉಪಚುನಾವಣೆ: ನಿಲ್ಲದ ವಾಕ್ಸಮರ

ಮಂಡ್ಯ, ಗುರುವಾರ, 11 ಅಕ್ಟೋಬರ್ 2018 (18:17 IST)

ಮಾಜಿ ಸಚಿವ ಚಲುವರಾಯಸ್ವಾಮಿಯನ್ನು ಡೆಡ್ ಹಾರ್ಸ್ ಎಂದು ಸಚಿವ ಪುಟ್ಟರಾಜು ಜರೆದಿದ್ರು. ಇದಕ್ಕೆ ಪ್ರತಿಯಾಗಿ ಚಲುವರಾಯಸ್ವಾಮಿ ಬೆಂಬಲಿಗರು ಪುಟ್ಟರಾಜು ವಿರುದ್ಧ ಹರಿಹಾಯ್ದಿದ್ದರು. ಅದಾದ ಬಳಿಕ ಹಾಲಿ, ಮಾಜಿ ಸಚಿವರ ವಕ್ಸಮರ ಮತ್ತೆ ಮುಂದುವರಿದಿದೆ.

ಚಲುವರಾಯಸ್ವಾಮಿ ಬೆಂಬಲಿಗರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಸಚಿವ ಪುಟ್ಟರಾಜು, ಚಲುವರಾಯಸ್ವಾಮಿಯನ್ನು ಚರ್ಚೆಗೆ ಆಹ್ವಾನಿಸಿದ್ದು, ಸವಾಲು ಸ್ವೀಕರಿಸಿ ಚರ್ಚೆ ಮಾಡುವಂತೆ ಹೇಳಿದ್ದಾರೆ.

ಮಂಡ್ಯದಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿಕೆ ನೀಡಿದ್ದು, ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ ಗೆದ್ದವನು ಸೋತ, ಸೋತವನು ಸತ್ತ ಅನ್ನುವ ರೀತಿ ನಾವೇಲ್ಲ ರಾಜಕಾರಣ ಮಾಡಬೇಕಾಗಿದೆ. ಆ ಅರ್ಥದಲ್ಲಿ ಡೆಡ್ ಹಾರ್ಸ್ ಪದ ಬಳಸಿದೆ ಅಷ್ಟೇ. ಜನ 52 ಸಾವಿರ ಮತಗಳ ಅಂತರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನ ಆಯ್ಕೆ ಮಾಡಿ ನೀನು ಸುಮ್ಮನಿರಪ್ಪ ಅಂತ ಹೇಳಿದ್ದಾರೆ.

ಹೀಗಾಗಿ ನಾನು ಆ ರೀತಿ ಹೇಳಿಕೆ ನೀಡಿದೆ ಅಷ್ಟೇ. ಅವರಿಗೆ ಅಗೌರವ ತರುವ ಉದ್ದೇಶದಿಂದ ಹಾಗೆ ಹೇಳಿಲ್ಲ.  ಚಲುವರಾಯಸ್ವಾಮಿ ಅವ್ರನ್ನ ಜಿ.ಪಂ ಉಪಾಧ್ಯಕ್ಷನನ್ನಾಗಿ ಮಾಡಿ ರಾಜಕೀಯ ಶಕ್ತಿ ತುಂಬುತ್ತ ಬಂದವ್ರು ಯಾರು ಅನ್ನೋದರ ಬಗ್ಗೆ ಮಂಡ್ಯದಲ್ಲಿ ದೊಡ್ಡ ವೇದಿಕೆ ಹಾಕಿ ಬಹಿರಂಗ ಚರ್ಚೆ ಮಾಡಬೇಕು. ಅದಕ್ಕೆ ನಾನು ರೆಡಿ ಎಂದರು.
ನಾನು ಯಾವುದೋ ಕಾಟ್ಪೋಟಿಗಳಿಗೆ ಉತ್ತರ ಕೊಡುವ ಅಗತ್ಯ ಇಲ್ಲ. ಎಂದು ಚಲುವರಾಯಸ್ವಾಮಿ ಬೆಂಬಲಿಗರನ್ನು ಕಾಟ್‌ಪೋಟಿಗಳು ಎಂದು ಜರಿದರು.
ಜಿಪಂ ಹಾಲ್ ನಲ್ಲಿ ಯಾರು ಕಾಲು ಹಿಡಿದುಕೊಂಡ್ರು ಅಂತ ಮಾಜಿ ಶಾಸಕ ಹೆಚ್‌.ಬಿ. ರಾಮು ಅವ್ರೆ ಸಾಕ್ಷಿ, ಬೇಕಿದ್ರೆ ಅವ್ರ ನೇತೃತ್ವದಲ್ಲಿ ಚರ್ಚೆ ನಡೆಯಲಿ ಎಂದರು.
ಚಲುವರಾಯಸ್ವಾಮಿ ಬರುವುದಾದರೆ ಬಹಿರಂಗ ಚರ್ಚೆಗೆ ನಾನು ಸಿದ್ಧ ಎಂದ ಅವರು, ನಾನು ಚಲುವರಾಯಸ್ವಾಮಿ ಸ್ನೇಹಿತರು. ರಾಜಕೀಯ ವಿಚಾರದಲ್ಲಿ ಅವ್ರು ನನಗೆ ಏನ್ ತೊಂದ್ರೆ ಕೊಟ್ರು, ನಾನು ಅವ್ರ ಬಗ್ಗೆ ಏನ್ ಮಾತನಾಡಿದ್ದೇನೆ ಅನ್ನೋದ್ರ ಬಗ್ಗೆ ಚರ್ಚೆಗೆ ನಾನು ರೆಡಿ ಎಂದರು.

ಯಾವನೋ ಇನ್ನೊಬ್ಬನ ಮಾತಿಗೆ ನಾನು ಉತ್ತರ ಕೊಡುವ ಅಗತ್ಯ ಇಲ್ಲ. ತಲೆಯಲ್ಲಿ ಮೆದುಳು ಇಟ್ಟಕೊಂಡು ಮಾತನಾಡಬೇಕು ಎಂಬ ಚಲುವರಾಯಸ್ವಾಮಿ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ್ದಾರೆ. ನನ್ನ ತಲೆ ತುಂಬಾ ಫೈನ್ ಆಗಿದೆ. ನನ್ನ ತಲೆಯಲ್ಲಿ ಮೆದುಳು ಇರೋದಕ್ಕೆ ಎದುರಾಳಿಯ ಅನುಕಂಪದ ಅಲೆ ಇದ್ರು ಜನ ನನ್ನನ್ನ ಗೆಲ್ಲಿಸಿದ್ದಾರೆ.
ಚಲುವರಾಯಸ್ವಾಮಿ ಅವ್ರು ತಲೆ ಸರಿ ಮಾಡಿಸಿಕೊಳ್ಳಬೇಕಾಗಿದೆ ಎಂದರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲೋಕಲ್ ಚಾನೆಲ್: ಸುಲಿಗೆ ಮಾಡುತ್ತಿದ್ದವರ ಬಂಧನ

ಲೋಕಲ್ ಚಾನಲ್ ಮಾಡಿಕೊಂಡ ಸುಲಿಗೆ ಮಾಡುತ್ತಿದ್ದವರ ಬಂಧನ ಮಾಡಲಾಗಿದೆ.

news

ಸಿಎಂ ಹೆಚ್.ಡಿ.ಕೆ ವಿರುದ್ಧ ಹಿರೇಮಠ ಆಕ್ರೋಶ

ಜೆಡಿಎಸ್​ ಎಜೆಂಟರಂತೆ ವರ್ತಿಸುತ್ತಾರೆ ಎಂಬ ಆರೋಪ ಹೊತ್ತಿರುವ ಸಮಾಜ ಪರಿವರ್ತನಾ ಸಮುದಾಯದ ಮುಖಂಡ ...

news

ಚುನಾವಣೆ ಸ್ಪರ್ಧೆ ಕುರಿತು ನಿರ್ಧಾರ ಪ್ರಕಟಿಸುವುದಿಲ್ಲ ಎಂದ ಬಿಜೆಪಿ ಸಂಸದೆ

ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಾರದು ಎಂದು ನನ್ನ ಮನಸ್ಸಿನಲ್ಲಿತ್ತು. ಆದರೆ ಸದ್ಯ ವರಿಷ್ಠರ ಸೂಚನೆ ...

news

ಪಿಎಲ್‌ಡಿ ಬ್ಯಾಂಕ್‌ಗಳಿಗೂ ಸಾಲಮನ್ನಾ ವಿಸ್ತರಿಸುವಂತೆ ಒತ್ತಾಯ

ರಾಜ್ಯ ಸರ್ಕಾರ ರೈತರ ಬೆಳೆಸಾಲ ಮನ್ನಾ ಮಾಡಿರುವುದು ಸ್ವಾಗತಾರ್ಹ. ಆದರೇ ಅದೇ ರೀತಿ ರಾಜ್ಯದ 117 ಪಿಎಲ್‌ಡಿ ...

Widgets Magazine