ಮಂಗಳೂರು ಗಲಭೆ: ಶಾಂತಿ ಸಭೆ ಬಹಿಷ್ಕರಿಸಿದ ಬಿಜೆಪಿ, ಜೆಡಿಎಸ್

ಮಂಗಳೂರು, ಗುರುವಾರ, 13 ಜುಲೈ 2017 (17:05 IST)

ಜಿಲ್ಲಾಡಳಿತದ ಶಾಂತಿ ಸಭೆ ಆರಂಭವಾಗಿದ್ದು, ಸಭೆಗೆ ಹಿಂದು ಪರ ಸಂಘಟನೆಗಳ ಮುಖಂಡರು, ಬಿಜೆಪಿ, ಜೆಡಿಎಸ್ ನಾಯಕರು ಬಹಿಷ್ಕಾರ ಹಾಕಿದ್ದಾರೆ.
 
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ  ಸಭೆ ಆಯೋಜಿಸಲಾಗಿದ್ದು, ಜೆಡಿಎಸ್ ನಾಯಕರು ಸಭೆಗೆ ಬಂದರಾದರೂ ನಂತರ ಬಂದ ದಾರಿಗೆ ಸುಂಕವಿಲ್ಲವೆನ್ನುವಂತೆ ಮರಳಿದ್ದಾರೆ. ಕಾಂಗ್ರೆಸ್, ಪಿಎಫ್‌ಐ, ಎಸ್‌ಡಿಪಿಐ ಸೇರಿದಂತೆ ಇತರ ಸಂಘಟನೆಗಳು ಸಭೆಯಲ್ಲಿ ಪಾಲ್ಗೊಂಡಿವೆ ಎಂದು ಮೂಲಗಳು ತಿಳಿಸಿವೆ.
 
ಸಚಿವರಾದ ರಮಾನಾಥ್ ರೈ ಯು.ಟಿ.ಖಾದರ್ ಸಭೆಯಲ್ಲಿ ಉಪಸ್ಥಿತರಿದ್ದು, ಜಿಲ್ಲೆಯಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.
 
ಐಜಿಪಿ ಹರಿಶೇಖರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ಸೇರಿದಂತೆ ಇತರ ಉನ್ನತ ಅಧಿಕಾರಿಗಳು ಸಭೆಗೆ ಹಾಜರಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗದಗದಲ್ಲಿ ವಿಚಿತ್ರ ಪ್ರಾಣಿಯನ್ನ ಕಂಡ ಬಸ್ ಡ್ರೈವರ್..? ಏಲಿಯನ್ ಶಂಕೆ

ಇತ್ತೀಚೆಗೆ ತಾನೆ ಗದಗದ ಹಳ್ಳಿಯೊಂದರಲ್ಲಿ ದೊಡ್ಡ ಪಾದದ ಗುರುತು ಕಾಣಿಸಿಕೊಂಡು ಏಲಿಯನ್ಸ್ ಬಂದು ಹೋಗಿದೆ ಎಂಬ ...

news

ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬಹಿರಂಗ: 8 ಆರೋಪಿಗಳು ಅರೆಸ್ಟ್

ಬೆಂಗಳೂರು: ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬಹಿರಂಗವಾಗಿದ್ದು, ಪೊಲೀಸರು ಎಂಟು ಮಂದಿ ಆರೋಪಿಗಳನ್ನು ...

news

ಹೆಣ್ಣು ಭ್ರೂಣ ಹತ್ಯೆಯ ಫಲ: ವಯಸ್ಸಿಗೆ ಬಂದ ಹುಡುಗರಿಗೆ ಇಲ್ಲಿ ವಧುಗಳೇ ಸಿಗುತ್ತಿಲ್ಲ..!

ಈ ರಾಜ್ಯದಲ್ಲಿ ವಯಸ್ಸಿಗೆ ಬಂದ ಹುಡುಗರಿಗೆ ಮದುವೆಯಾಗಲು ಹೆಣ್ಣುಗಳೇ ಸಿಗುತ್ತಿಲ್ಲ. 50,000 ರೂ ನಿಂದ 1 ...

news

ರಾಜಕೀಯ ವ್ಯವಸ್ಥೆಯೇ ಹಾಳಾಗಿ ಹೋಗಿದೆ: ಎಚ್.ಡಿ.ದೇವೇಗೌಡ ಕಿಡಿ

ಬೆಂಗಳೂರು: ಸರಕಾರದ ಸಂಪೂರ್ಣ ವ್ಯವಸ್ಥೆಯೇ ಹಾಳಾಗಿ ಹೋಗಿದೆ ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ...

Widgets Magazine