ಧರ್ಮಸ್ಥಳ ಗ್ರಾಮಾಭಿವೃದ್ದಿ ಬ್ಯಾಂಕ್‍ನಿಂದ ಹಲವು ಯೋಜನೆ ಜಾರಿ

ಆನೇಕಲ್, ಶುಕ್ರವಾರ, 10 ಆಗಸ್ಟ್ 2018 (14:09 IST)

ರೈತರು ಜೀವನದಲ್ಲಿ ಬದಲಾವಣೆ ತರಬೇಕಾದರೆ ಅವರು ಸ್ವಾವಲಂಬಿಗಳಾಬೇಕು. ಹೀಗಾಗಿ ಗ್ರಾಮಾಭಿವೃದ್ದಿ ಬ್ಯಾಂಕ್‍ನಿಂದ ರೈತರಿಗಾಗಿ ಹಲವು ಯೋಜನೆಗಳನ್ನ ಜಾರಿ ಮಾಡಿದ್ದು, ರೈತರು ಹಾಗೂ ಮಹಿಳೆಯರು  ಪ್ರಯೋಜನ ಪಡೆದುಕೊಳ್ಳಬೇಕು. ಹೀಗಂತ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
 
ಆನೇಕಲ್‍ನ ಚಂದಾಪುರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ, ರೈತರು ಪ್ರತಿಯೊಂದಕ್ಕೂ ಪ್ರಕೃತಿ ಮೇಲೆ ಅವಲಂಬಿತವಾಗಿದ್ದು ಅತಿವೃಷ್ಟಿ -ಅನಾವೃಷ್ಟಿಗಳ ಮೂಲಕ ತೊಂದರೆ ಅನುಭವಿಸುವಂತಾಗಿದೆ. ಸರ್ಕಾರ ರೈತರ ಅಭಿವೃದಿಗಾಗಿ ಮನ್ನಾ ಮಾಡುವ ಮೂಲಕ ಕೊಂಚ ನೆಮ್ಮದಿ ತಂದಿದೆ.

ರೈತರ ಉದ್ದಾರಕ್ಕೆ ಸಾಲ ಮನ್ನಾ ಒಂದೇ ಪರಿಹಾರವಲ್ಲ. ಬದಲಾಗಿ ಬೇರೆ ಪರ್ಯಾಯ ಯೋಜನೆಗಳನ್ನ ಸರ್ಕಾರಗಳ ನೀಡುವ ಮೂಲಕ ರೈತರ ಅಭಿವೃದ್ದಿಗೆ ಶ್ರಮಿಸಬೇಕು ಎಂದರು. ಅಲ್ಲದೇ ಧರ್ಮಸ್ಥಳ ಗ್ರಾಮಾಭಿವೃದ್ದಿ ಬ್ಯಾಂಕ್ ವತಿಯಿಂದ ಸುಮಾರು 8 ಸಾವಿರ ಕೋಟಿ ಸಾಲವನ್ನ ರೈತರಿಗೆ ನೀಡಿದ್ದೇವೆ. ಆ ಮೂಲಕ ರೈತರ ಸ್ವಾವಲಂಬಿ ಜೀವನಕ್ಕೆ ನಮ್ಮ ಕೈಲಾದ ಸಹಾಯವನ್ನ ನಾವು ಮಾಡುತ್ತಿದ್ದೇವೆ ಎಂದು ವಿರೇಂದ್ರ ಹೆಗ್ಗಡೆ ತಿಳಿಸಿದರು.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೋಟೆನಾಡಿನಿಂದ ರಣಕಹಳೆ ಊದಲು ಕೈಪಾಳೆಯ ರೆಡಿ

ಲೋಕಸಭಾ ಹಾಗೂ ಸ್ಥಳೀಯ ಚುನಾವಣೆ ಹಿನ್ನಲೆಯಲ್ಲಿ ರಾಷ್ಟ್ರೀಯ ಪಕ್ಷಗಳ ರಣಕಹಳೆ ಜೋರಾಗಿದೆ. ಗಡಿನಾಡಿನಿಂದ ...

news

ದೇಶಕ್ಕೆ ನೆಹರೂ ಮನೆತನ ಶಾಪವಾಯ್ತು ಎಂದ ಬಿಜೆಪಿ ಶಾಸಕ

ಕಾಂಗ್ರೆಸ್, ಆಡಳಿತ ಹಾಗೂ ನೆಹರೂ ಮನೆತನದ ಆಡಳಿತ ಈ ದೇಶಕ್ಕೆ ವರವಾಗಿಲ್ಲ ಶಾಪವಾಯ್ತು. ಹೀಗಂತ ಬಿಜೆಪಿ ...

news

ಜೈಲ್ ಭರೋ ನಡೆಸಿದ ನೌಕರರು…

ಕನಿಷ್ಠ ವೇತನ ಜಾರಿಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ...

news

ಸಹಕಾರಿ ಸಂಘಗಳ 9448 ಕೋಟಿ ರೂ. ಚಾಲ್ತಿ ಸಾಲ ಮನ್ನಾ

ಸಹಕಾರಿ ಬ್ಯಾಂಕಿನ 10-7-2018ರ ವರೆಗಿನ ರೈತರ 1 ಲಕ್ಷ ರೂ. ವರೆಗಿನ ಚಾಲ್ತಿ ಸಾಲ ಸಂಪೂರ್ಣ ಮನ್ನಾ ಮಾಡಲು ...

Widgets Magazine