ದಂಡುಪಾಳ್ಯ ಬೆತ್ತಲೆ ಬೆನ್ನಿನ ಪೂಜಾಗಾಂಧಿ ಫೋಟೋಗೆ ಮಾತೆ ಮಹಾದೇವಿ ಫೋಟೋ ಅಂಟಿಸಿ ಅವಹೇಳನ

ಹುಬ್ಬಳ್ಳಿ, ಮಂಗಳವಾರ, 1 ಆಗಸ್ಟ್ 2017 (17:19 IST)

ಲಿಂಗಾಯುತ ಪ್ರತ್ಯೇಕ ಧರ್ಮವನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ಪ್ರತಿಭಟನಾಕಾರರು ನಟಿ ಪೂಜಾಗಾಂಧಿ ಬೆತ್ತಲೆ ಫೋಟೋಗೆ ಮಾತೆ ಮಹಾದೇವಿ ಫೋಟೋ ಹಚ್ಚಿ ವಿಕೃತ ಮೆರೆದಿದ್ದಾರೆ.
 
ದಂಡುಪಾಳ್ಯದಲ್ಲಿ ಅರೆಬೆತ್ತಲೆಯಾಗಿ ನಟಿಸಿದ್ದ ಪೂಜಾ ಗಾಂಧಿ ಫೋಟೋಗಳಿಗೆ ಮಾತೆ ಮಹಾದೇವಿ ಫೋಟೋ ಹಚ್ಚಿ ಮೆರವಣಿಗೆ ಮಾಡಿದ್ದಲ್ಲದೇ, ಅವರ ವಿರುದ್ಧ ಅಶ್ಲೀಲ ಪದಗಳ ಬಳಕೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ವೀರಶೈವ ಲಿಂಗಾಯುತ ಧರ್ಮಕ್ಕೆ ಒತ್ತಾಯಿಸಿದ ಪ್ರತಿಭಟನಾಕಾರರು, ಯಾವುದೇ ಕಾರಣಕ್ಕೂ ಲಿಂಗಾಯುತ ಪ್ರತ್ಯೇಕ ಧರ್ಮವನ್ನು ಸಹಿಸುವುದಿಲ್ಲ ಎನ್ನುವ ಘೋಷಣೆಗಳನ್ನು ಕೂಗಿದರು.
 
ಪ್ರತ್ಯೇಕ ಲಿಂಗಾಯುತ ಧರ್ಮ ವಿಚಾರ ಕುರಿತಂತೆ ವೀರಶೈವ ಮತ್ತು ಲಿಂಗಾಯುತ ಧರ್ಮಿಯರ ಮಧ್ಯೆ ತೀವ್ರ ತೆರೆನಾದ ಬಿಕ್ಕಟ್ಟು ಎದುರಾಗುವ ಸಾಧ್ಯತೆಗಳಿವೆ.
 
ಒಂದು ಕಡೆ ಮಾತೆ ಮಹಾದೇವಿ ಬೆಂಬಲಿಗರು ಪ್ರತ್ಯೇಕ ಲಿಂಗಾಯುತ ಧರ್ಮದ ಪರವಾಗಿ ಪ್ರತಿಭಟನೆ ನಡೆಸಿದ್ದರೆ, ರಂಭಾಪುರಿ ಶ್ರೀಗಳ ಬೆಂಬಲಿಗರು ವೀರಶೈವ ಲಿಂಗಾಯುತ ಧರ್ಮವನ್ನು ಪ್ರತಿಪಾದಿಸುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪೋಷಕರೇ ಎಚ್ಚರ.. ನಿಮ್ಮ ಮಕ್ಕಳೂ ಈ ಸೂಸೈಡ್ ಗೇಮ್ ಆಡುತ್ತಿರಬಹುದು..!

14 ವರ್ಷದ ಬಾಲಕ 7ನೇ ಅಂತಸ್ತಿನ ಕಟ್ಟಡದಿಂದ ಜಿಗಿದು ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. ...

news

ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಸಮಾವೇಶ: ಜಿ.ಪರಮೇಶ್ವರ್

ಬೆಂಗಳೂರು: ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ರಾಯಚೂರಿನಲ್ಲಿ ಸಮಾವೇಶ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ...

news

ಸಿಎಂ ಯೋಗಿ ಆದಿತ್ಯನಾಥ್‌ಗೆ ಹೈಕೋರ್ಟ್ ಛೀಮಾರಿ

ಅಲಹಾಬಾದ್: ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಹೈಕೋರ್ಟ್, ...

news

ಬ್ರಿಟನ್ ಮಿಲಿಟರಿಯಲ್ಲಿ ಸೆಕ್ಸ್ ಕಿರುಕುಳ: ಫೋಟೋ ಬಯಲಿಗಿಟ್ಟ ದಿಟ್ಟ ಮಹಿಳೆ

ಬ್ರಿಟನ್ ಮಿಲಿಟರಿಯಲ್ಲೂ ಲೈಂಗಿಕ ಕಿರುಕುಳದಂತಹ ಸಮಸ್ಯೆ ಇದೆಯಾ..? ಹೌದು ಎನ್ನುತ್ತಿವೆ ಇತ್ತೀಚೆಗೆ ಮಾಜಿ ...

Widgets Magazine