ದೇವೇಗೌಡರನ್ನು ಭೇಟಿಯಾದ ಮೇಯರ್, ಉಪಮೇಯರ್

ಬೆಂಗಳೂರು, ಶುಕ್ರವಾರ, 29 ಸೆಪ್ಟಂಬರ್ 2017 (12:57 IST)

ಬಿಬಿಎಂಪಿ ನೂತನ ಮೇಯರ್ ಸಂಪತ್‌ರಾಜ್ ಮತ್ತು ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ ಇಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ನಿವಾಸಕ್ಕೆ ಆಗಮಿಸಿದ ಮೇಯರ್ ಮತ್ತು ಉಪಮೇಯರ್‌ರನ್ನು ಬರಮಾಡಿಕೊಂಡ ದೇವೇಗೌಡರು, ಎರಡೂ ಪಕ್ಷಗಳ ನಾಯಕರು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಕಿವಿಮಾತು ಹೇಳಿದರು.
 
ಬಿಬಿಎಂಪಿಯಲ್ಲಿ ಸಮನ್ವಯ ಸಮಿತಿ ರಚಿಸುವಂತೆ ಕಾಂಗ್ರೆಸ್ ಮುಖಂಡರಿಗೆ ಹೇಳಿದ್ದೇನೆ. ಅವರು ಯಾವಾಗ ರಚಿಸುತ್ತಾರೋ ಗೊತ್ತಿಲ್ಲ. ಶೀಘ್ರದಲ್ಲಿ ಸಮನ್ವಯ ಸಮಿತಿ ರಚಿಸಿ ಉತ್ತಮ ಕಾರ್ಯನಿರ್ವಹಿಸಲಿ ಎನ್ನುವುದೇ ನಮ್ಮ ಬಯಕೆ ಎಂದು ತಿಳಿಸಿದ್ದಾರೆ.
 
ಮಳೆಯಿಂದಾಗಿ ಬೆಂಗಳೂರಿನ ಜನತೆ ತಲ್ಲಣಿಸಿದ್ದಾರೆ. ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ ಜನತೆಯನ್ನು ಸಂಕಷ್ಟದಿಂದ ಪಾರುಮಾಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಲಹೆ ನೀಡಿದ್ದಾರೆ.    
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಬಿಬಿಎಂಪಿ ಮೇಯರ್ ಉಪಮೇಯರ್ ಎಚ್.ಡಿ.ದೇವೇಗೌಡ Bbmp Mayor Deputy Mayor H.d.devegowda

ಸುದ್ದಿಗಳು

news

ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ ಸಿಎಂ ನೀಡಿದ ಸಲಹೆ ಏನು?

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದು ಜೆಡಿಎಸ್ ನಾಯಕ, ಮಾಜಿ ...

news

ಮುಂಬೈ ರೈಲ್ವೇ ಕಾಲ್ತುಳಿತಕ್ಕೆ 15 ಸಾವು

ಮುಂಬೈ: ಮುಂಬೈನ ಎಲ್ಫಿಲ್ಟನ್ ರೈಲ್ವೇ ಸೇತುವೆಯಲ್ಲಿ ಇಂದು ಸಂಭವಿಸಿದ ಕಾಲ್ತುಳಿತದ ಘಟನೆಯಲ್ಲಿ 15 ಮಂದಿ ...

news

ರಾಜಕಾರಣಿಗಳಿಗೆ ಸೆಕ್ಸ್ ದಂಧೆ ಮಾಡುತ್ತಿದ್ದನಂತೆ ಈ ಬಾಬಾ

ನವದೆಹಲಿ: ಡೇರಾ ಬಾಬಾ ನಂತರ ಒಬ್ಬೊಬ್ಬರೇ ಸ್ವಯಂ ಘೋಷಿತ ಮಾನವರ ನಿಜ ಬಣ್ಣ ಬಯಲಾಗುತ್ತಿದೆ. ಇದೀಗ ಮತ್ತೊಬ್ಬ ...

news

‘ರಾಹುಲ್ ಗಾಂಧಿ ಕ್ರಿಶ್ಚಿಯನ್, ಮನೆಯೊಳಗೇ ಒಂದು ಚರ್ಚ್ ಕಟ್ಟಿಕೊಂಡಿದ್ದಾರೆ’

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಒಬ್ಬ ಕ್ರಿಶ್ಚಿಯನ್. ಅವರು ಮನೆಯೊಳಗೇ ಒಂದು ಚರ್ಚ್ ...

Widgets Magazine