ಛಬ್ಬಿ ಗಣಪತಿಗೆ ಮೊರೆ ಹೋಗುತ್ತಿರುವ ಲಕ್ಷಾಂತರ ಭಕ್ತರು

ಹುಬ್ಬಳ್ಳಿ, ಶನಿವಾರ, 15 ಸೆಪ್ಟಂಬರ್ 2018 (14:42 IST)

ಛಬ್ಬಿ ಗಣೇಶ ಭಕ್ತರ ಬೇಡಿಕೆ ಈಡೇರಿಸುವ ಜಾಗೃತ ದೇವರು ಎಂದು ಹೆಸರು ವಾಸಿಯಾಗಿದ್ದಾನೆ. ಹೀಗಾಗಿ ತನ್ನದೇ ವಿಶಿಷ್ಟ ಶಕ್ತಿಯಿಂದ ಭಕ್ತರನ್ನು ತನ್ನತ್ತ ಸೆಳೆಯುತ್ತಿದ್ದಾನೆ.
 
ಹುಬ್ಬಳ್ಳಿಯ ಛಬ್ಬಿಯ ಕೆಂಪು ಗಣಪತಿ ಎಂದೇ ಪ್ರಸಿದ್ಧ ಪಡೆದಿರುವ ಗಣಪತಿಗೆ ತನ್ನದೇ ಇತಿಹಾಸ, ಮಹತ್ವ ಪಡೆದಿದ್ದಾನೆ. ಗ್ರಾಮದ ಕುಲಕರ್ಣಿ ಮನೆತನದವರ ಮನೆಯಲ್ಲಿ ಗಣಪತಿ ಪ್ರತಿಷ್ಠಾನೆ ಮಾಡುತ್ತಾರೆ. ಇಲ್ಲಿ ಮೊದಲು ಗ್ರಾಮದ ಮೂರೇ ಕುಲಕರ್ಣಿ ಮನೆತನದಲ್ಲಿ ಮಾತ್ರ ಪ್ರತಿಷ್ಠಾಪನೆ ಮಾಡುತ್ತಿದ್ದರು. ಆದ್ರೆ ಈಗ ಅದು 9 ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. 9 ಗಣಪತಿಗಳು ಕೆಂಪು ಬಣ್ಣದ್ದಾಗಿರುವದು ವಿಶೇಷ. ಕಳೆದ 2 ದಶಕಗಳಿಂದ ಛಬ್ಬಿ ಗಣೇಶನ ಪ್ರಸಿದ್ದಿ ಹೆಚ್ಚಿದೆ. ಕುಲಕರ್ಣಿ ಮನೆತನ ಈ ಗಣೇಶನನ್ನು ತಲೆತಲಾಂತರದಿಂದ ಮೂರು ದಿನಗಳ ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತ ಬಂದಿದ್ದಾರೆ. 

ಕಳೆದ ಹಲವು ವರ್ಷಗಳಿಂದ ಗಣೇಶ ಹಬ್ಬ ಇಲ್ಲಿ ಸಾರ್ವತ್ರಿಕವಾಗಿ ಆಚರಿಸಲಾಗುತ್ತಿದೆ. ಕುಲಕರ್ಣಿ  ಮನೆತನದ ನಾಲ್ಕು ಮನೆತನದಲ್ಲಿ ಕೇವಲ 3 ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಈಗ ಮನೆತನಗಳು ಹೆಚ್ಚಾಗುತ್ತಿದಂತೆ 9 ಗಣಪತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಆದ್ರೆ ಎಲ್ಲಾ ಗಣೇಶನ ಬಣ್ಣ ಹಾಗೂ ಆಕಾರ ಒಂದೆಯಾಗಿದೆ. ಈ ಗ್ರಾಮಕ್ಕೆ ಗಣೇಶನ ದರ್ಶನಕ್ಕೆ ಬರುವ ಎಲ್ಲಾ ಭಕ್ತರು ಎಲ್ಲಾ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿದ ಗಣೇಶ ಮೂರ್ತಿಗಳ ಪಡೆದುಕೊಂಡು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸುತ್ತಾರೆ. ಗ್ರಾಮದಲ್ಲಿ ಮೂರು ದಿನಗಳ ಕಾಲ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಇಲ್ಲಿಗೆ ಆಗಮಿಸಿ ಗಣಪತಿ ದರ್ಶನ ಪಡೆಯುತ್ತಾರೆ. ಕರ್ನಾಟಕ, ಗೋವಾ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಸೇರಿದಂತೆ ಹಲವು ಕಡೆಯಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಮೂರು ದಿನಗಳ ಕಾಲ ಇಲ್ಲಿ ಗಣಪತಿ ಮಹೋತ್ಸವವೇ ನಡೆಯುತ್ತದೆ. ಇದೊಂದು ಗಜಾನನ ಪುಣ್ಯಕ್ಷೇತ್ರ ಎಂಬ ಖ್ಯಾತಿ ಪಡೆದಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿ ಗಣಪತಿಯಷ್ಟೇ ಖ್ಯಾತಿಯನ್ನು ಪಡೆದಿದೆ. 


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆತ್ಮಹತ್ಯೆ ಮಾಡಿಕೊಂಡ ರೈತ: ಬ್ಯಾಂಕ್ ಮ್ಯಾನೇಜರ್ ಅರೆಸ್ಟ್ ಯಾಕೆ ಗೊತ್ತಾ?

ಸಾಲ ಮರುಪಾವತಿ ಮಾಡಬೇಕೆಂದು ಬ್ಯಾಂಕ್ ರೈತನಿಗೆ ನೋಟೀಸ್ ‌ನೀಡಿತ್ತು. ನೋಟೀಸ್ ನೋಡಿ ಮನನೊಂದು ರೈತನೊಬ್ಬ ...

news

ಭಾರತ ಬಂದ್ ವೇಳೆ ಅಂಗಡಿ ಮುಚ್ಚದ ವ್ಯಾಪಾರಿ ಮೇಲೆ ಹಲ್ಲೆ

ಭಾರತ ಬಂದ್ ಗೆ ಕರೆ ನೀಡಿದ್ದ ದಿನ ವ್ಯಾಪಾರ ಬಂದ್ ಮಾಡಿಲ್ಲ, ಅಂಗಡಿ ಮುಚ್ಚಿಲ್ಲ ಎನ್ನುವ ಕಾರಣಕ್ಕೆ ...

news

ಗಣೇಶ ಪೂಜೆಗೆ ತೆರಳಿದ್ದ ವೇಳೆ ಹಾಡುಹಗಲೇ ಮನೆ ಕಳ್ಳತನ

ಮನೆಯವರು ಸಾರ್ವಜನಿಕ ಗಣೇಶನ ಪೂಜೆಗೆ ತೆರಳಿದ್ದ ಸಂದರ್ಭದಲ್ಲಿ ಹಾಡುಹಗಲೇ ಮನೆಗೆ ಒಳ ನುಗ್ಗಿದ ಕಳ್ಳರು ...

news

ಜಾರಕಿಹೊಳಿ ದೊಡ್ಡ ನಾಯಕರಲ್ಲ, ಮಾಧ್ಯಮಗಳೇ ಆ ರೀತಿ ಬಿಂಬಿಸುತ್ತಿವೆ: ವೀರಪ್ಪ ಮೊಯಿಲಿ

ಚಿಕ್ಕಬಳ್ಳಾಪುರ: ಬೆಳಗಾವಿ ಕಾಂಗ್ರೆಸ್ ನಲ್ಲಿ ಎದ್ದಿರುವ ಭಿನ್ನಮತದ ಬಗ್ಗೆ ಮಾತನಾಡಿರುವ ಮಾಜಿ ಕೇಂದ್ರ ...

Widgets Magazine