ಸಾಗರದಲ್ಲಿ ದಯಾಮರಣಕ್ಕೆ ಮತ್ತೊಂದು ಅರ್ಜಿ ಬಂದಿದ್ದು, ಕಳೆದೊಂದು ತಿಂಗಳಲ್ಲಿ ದಯಾಮರಣಕ್ಕೆ ಮೂರನೇ ಅರ್ಜಿ ಬಂದಂತಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಅರ್ಜಿ ಬಂದಿದೆ. ದಯಾಮರಣಕ್ಕೆ ಅರ್ಜಿ ಸಲ್ಲಿಸಿದವರಿಗೆ ಎ.ಸಿ ಪಲ್ಲವಿ ಸಾತೇನಹಳ್ಳಿ ಹಾಗೂ ತಹಸೀಲ್ದಾರ್ ಮಲ್ಲೇಶ್ ಪೂಜಾರ್ ಬುದ್ದಿ ಹೇಳಿ ಕಳುಹಿಸಿದ್ದಾರೆ. ತಮ್ಮ ಕುಟುಂಬ ಅನುಭವಿಸುತ್ತಿರುವ ಸಂಕಷ್ಟಕ್ಕೆ ಆಡಳಿತ ಸ್ಪಂದಿಸುತ್ತಿಲ್ಲ, ನಾವು ಬದುಕುವುದು ಕಷ್ಟ ಸಾಧ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ, ಎಂದು ಹೇಳಿ ದಯಾಮರಣಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.