ಸಚಿವ ಅನಂತ್ ಕುಮಾರ್ ಹೆಗಡೆ ಕ್ಷಮೆಯಾಚನೆ

ಬೆಂಗಳೂರು, ಗುರುವಾರ, 28 ಡಿಸೆಂಬರ್ 2017 (12:06 IST)

Widgets Magazine

ಬದಲಾವಣೆಗಾಗಿ ನಾವು ಬಂದಿದ್ದೇವೆ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಇಂದು ವಿಪಕ್ಷಗಳ ಒತ್ತಡಕ್ಕೆ ಮಣಿದು ಕ್ಷಮೆಯಾಚಿಸಿದ್ದಾರೆ.
ಸಂಸತ್ತಿನಲ್ಲಿ ನಡೆದ ಕಲಾಪದಲ್ಲಿ ಅನಂತ್ ಕುಮಾರ್ ಹೆಗಡೆ, ನಾನು ಆ ರೀತಿ ಹೇಳಿಯೇ ಇಲ್ಲ. ಒಂದು ವೇಳೆ, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾದಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.
 
ಸಚಿವ ಹೆಗಡೆ ಹೇಳಿಕೆ ಕುರಿತಂತೆ ನಿನ್ನೆ ಸಂಸತ್ತಿನ ಕಲಾಪದಲ್ಲಿ ವಿಪಕ್ಷಗಳು ಕೋಲಾಹಲ ಸೃಷ್ಟಿಸಿದ್ದವು ಇಂದು ಕೂಡಾ ಸಂಸತ್ತಿನ ಬಳಿಯಿರುವ ಗಾಂಧಿ ಪ್ರತಿಮೆ ಬಳಿ ವಿಪಕ್ಷಗಳು ಪ್ರತಿಭಟನೆ ನಡೆಸಿದವು.
 
ಪ್ರತಿಭಟನೆ ತೀವ್ರವಾಗಿ ದೇಶಾದ್ಯಂತ ಹರಡುವ ಆತಂಕದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್, ಕೂಡಲೇ ಕ್ಷಮೆಯಾಚಿಸುವಂತೆ ಸಚಿವ ಹೆಗಡೆಯವರಿಗೆ ಸಲಹೆ ನೀಡಿತು ಎನ್ನಲಾಗಿದೆ. ಹೈಕಮಾಂಡ್ ಆದೇಶದ ಮೇರೆಗೆ ಸಟಿವ ಹೆಗಡೆ ಇಂದು ಕ್ಷಮೆಯಾಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಅನಂತ್ ಕುಮಾರ್ ಹೆಗಡೆ ಕ್ಷಮೆಯಾಚನೆ ಪ್ರಧಾನಿ ಮೋದಿ ಸಂವಿಧಾನ Apology Constitution Pm Modi Anantkumar Hegade

Widgets Magazine

ಸುದ್ದಿಗಳು

news

ಹಿಂದೂ ದೇವರನ್ನು ಆರಾಧಿಸುವ ಮುಸ್ಲಿಂ ಯುವಕ

ವಿಜಯಪುರ: ವಿಜಯಪುರದಲ್ಲಿ ಮುಸ್ಲಿಂ ಯುವಕನೊಬ್ಬ ಹಿಂದೂ ದೇವರಾದ ಅಯ್ಯಪ್ಪನ ಮಾಲೆ ಧರಿಸಿ ವೃತ ಕೈಗೊಂಡು ಜಾತಿ ...

news

ಮೈಸೂರು ವಿವಿ ವಿದ್ಯಾರ್ಥಿಯಿಂದ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಪದ ಬಳಕೆ

ಮೈಸೂರು: ರವೀಂದ್ರ ಹಾರೋಹಳ್ಳಿ ಎಂಬ ವಿದ್ಯಾರ್ಥಿ ಅನಂತ ಕುಮಾರ್ ಹೆಗಡೆ ಅವರಿಗೆ ನಿಂದಿಸುವ ಭರದಲ್ಲಿ ಹಿಂದೂ ...

news

ಫೇಸ್ ಬುಕ್ ಗೆ ಆಧಾರ್ ಕಡ್ಡಾಯ ನಿಜವೇ? ಫೇಸ್ ಬುಕ್ ಕೊಟ್ಟಿದೆ ಸ್ಪಷ್ಟನೆ

ನವದೆಹಲಿ: ಮುಂದಿನ ದಿನಗಳಲ್ಲಿ ಫೇಸ್ ಬುಕ್ ಖಾತೆಗೂ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂಬ ಸುದ್ದಿಗಳ ...

news

ಗೋವಾದಲ್ಲಿ ಸೋನಿಯಾ ಗಾಂಧಿ ಜಾಲಿ ರೈಡ್!

ಪಣಜಿ: ಪುತ್ರ ರಾಹುಲ್ ಗಾಂಧಿಗೆ ಕಾಂಗ್ರೆಸ್ ಪಕ್ಷದ ಹೊಣೆ ವಹಿಸಿದ ಮೇಲೆ ಸೋನಿಯಾ ಗಾಂಧಿ ಏನು ಮಾಡಬೇಕೋ ...

Widgets Magazine