ಸಚಿವ ಅನಂತ್‌ಕುಮಾರ್ ಹೆಗಡೆ ನಾಲಿಗೆ ಕತ್ತರಿಸಿದ್ರೆ 1 ಕೋಟಿ ರೂ. ಬಹುಮಾನ: ಪಟ್ಟೇದಾರ್

ಕಲಬುರಗಿ, ಮಂಗಳವಾರ, 26 ಡಿಸೆಂಬರ್ 2017 (13:57 IST)

ಸಂವಿಧಾವ ವಿರೋಧಿ ಹೇಳಿಕೆ ನೀಡುತ್ತಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮತ್ತು ಪೇಜಾವರ ಶ್ರೀಗಳ ಕತ್ತು ಕತ್ತರಿಸಿದವರಿಗೆ 1 ಕೋಟಿ ರೂ ಬಹುಮಾನ ನೀಡುವುದಾಗಿ ಮಾಜಿ ಜಿಪಂ ಸದಸ್ಯ ಗುರುಶಾಂತ್ ಪಟ್ಟೇದಾರ್ ಘೋಷಿಸಿದ್ದಾರೆ. 
ಬದಲಾವಣೆ ಮಾಡುವುದಕ್ಕೆ ನಾವು ಬಂದಿದ್ದೇವೆ ಎನ್ನುವ ಕೇಂದ್ರ ಸಚಿವರ  ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ನಾಲಗೆ ಕತ್ತರಿಸಿ ತಂದವರಿಗೆ ಒಂದು ಕೋಟಿ ರೂ. ಬಹುಮಾನ ಕೊಡುತ್ತೇವೆ ಎಂದು ಗುಡುಗಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಸಂಪುಟದ ಸಚಿವನಾಗಿರುವ ಹೆಗಡೆಯನ್ನು ಹದ್ದುಬಸ್ತಿನಲ್ಲಿಡಬೇಕು. ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿರುವ ಹೆಗಡೆಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
 
ಉಡುಪಿಯ ಪೇಜಾವರಶ್ರೀಗಳು ಸಂವಿಧಾನ ಬದಲಾವಣೆಯಾಗಬೇಕು ಎಂದು ಹೇಳುತ್ತಿದ್ದಾರೆ.ಸಂವಿಧಾನ ಹಾಗೂ ದೇಶದ್ರೋಹ ಹೇಳಿಕೆ ಯಾರೇ ನೀಡಲಿ ಅಂಥವರ ಮೊದಲು ನಾಲಿಗೆ, ಆನಂತರ ಕೈ ಕಾಲು, ಕುತ್ತಿಗೆ ಕಡಿಯುತ್ತೇವೆ ಎಂದು ಎಚ್ಚರಿಸಿದರು. 
 
ಪೇಜಾವರ ಶ್ರೀ ಹಾಗೂ ಅನಂತಕುಮಾರ ಹೆಗಡೆ ಹೇಳಿಕೆಯಿಂದ ದೇಶದ, ರಾಜ್ಯದ ದಲಿತ, ಅಲ್ಪಸಂಖ್ಯಾತ ಜನರಿಗೆ ನೋವಾಗಿದೆ. ಒಂದು ತಿಂಗಳಲ್ಲಿ ಅನಂತಕುಮಾರ ಹೆಗಡೆ ನಾಲಿಗೆ ಕಟ್ ಮಾಡಿದವರಿಗೆ ಒಂದು ಕೋಟಿ ರೂ. ಬಹುಮಾನ ಕೊಡುವುದಾಗಿ ಮಾಜಿ ಜಿಪಂ ಸದಸ್ಯ ಗುರುಶಾಂತ್ ಪಟ್ಟೇದಾರ್ ಘೋಷಿಸಿದ್ದಾರೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಎಸ್‌ವೈ ಘೋಷಿಸಿದ ಮಾತ್ರಕ್ಕೆ ಟಿಕೆಟ್ ಫೈನಲ್ ಅಲ್ಲ: ಮತ್ತೆ ಈಶ್ವರಪ್ಪ ಟಾಂಗ್

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘೋಷಿಸಿದ ಮಾತ್ರಕ್ಕೆ ಅಭ್ಯರ್ಥಿ ಟಿಕೆಟ್ ಫೈನಲ್ ...

news

ಅನಂತ ಕುಮಾರ್ ಹೆಗಡೆಗೆ ಪ್ರಕಾಶ್ ರೈ ಬರೆದ ಪತ್ರದಲ್ಲಿ ಏನಿದೆ ಗೊತ್ತಾ...?

ನವದೆಹಲಿ: ಜಾತ್ಯಾತೀತರಿಗೆ ತಂದೆ-ತಾಯಿ ಇಲ್ಲ ಎಂಬರ್ಥದಲ್ಲಿ ಮಾತನಾಡಿ ವಿವಾದ ಸೃಷ್ಟಿಸಿದ ಕೇಂದ್ರ ಸಚಿವ ...

news

ಕಾಂಗ್ರೆಸ್ ನ ಪ್ರಭಾವಿ ಸಚಿವರಿಂದಲೇ ಟಿಕೆಟಿಗಾಗಿ ಭಾರಿ ಪೈಪೋಟಿ; ಇದೆಂಥಾ ಫ್ಲೇಕ್ಸ್ ರಾಜಕಾರಣ

ಬೆಂಗಳೂರು: ಕಾಂಗ್ರೆಸ್ ನ ಪ್ರಭಾವಿ ಸಚಿವರಿಂದಲೇ ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರದಿಂದ ...

news

ಮಹದಾಯಿ ಪ್ರತಿಭಟನೆಗೆ ಬೆದರಿದ ಬಿಜೆಪಿ

ಬೆಂಗಳೂರು: ಮಹದಾಯಿ ನೀರು ವಿವಾದ ಪರಿಹರಿಸಲು ಹೋಗಿ ಇದೀಗ ರಾಜ್ಯ ಬಿಜೆಪಿ ನಾಯಕರು ಕೊಟ್ಟ ಮಾತು ...

Widgets Magazine
Widgets Magazine