ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಕೋಟ್ಯಾಂತರ ಭೂ ಕಬಳಿಕೆ ಆರೋಪ

ಬೆಂಗಳೂರು, ಶುಕ್ರವಾರ, 1 ಡಿಸೆಂಬರ್ 2017 (19:47 IST)

ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಒಂದು ಏಕರೆ ಜಮೀನು ಕಬಳಿಸಿದ್ದಾರೆ ಎನ್ನುವ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ಸಚಿವ ಡಿ.ಕೆ.ಶಿವಕುಮಾರ್‌ನಂತಹ ಪ್ರಭಾವಿ ನಾಯಕರು ಕೇವಲ ಒಂದು ಏಕರೆ ಭೂಮಿ ಕಬಳಿಸಿದ್ದಾರೆ ಎನ್ನುವ ಆರೋಪದಲ್ಲಿ ಹುರುಳಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಡಿಕೆಶಿ ಪರ ಬ್ಯಾಟಿಂಗ್ ಮಾಡಿದ್ದಾರೆ.
 
ಸಚಿವ ಡಿಕೆಶಿ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ವಿರುದ್ಧ ಬಸಪ್ಪ, ಕೃಷ್ಣಪ್ಪ ಎನ್ನುವವರು ದೂರು ಸಲ್ಲಿಸಿದ್ದು, ನನಗೆ ನ್ಯಾಯಬೇಕು ಮರ್ಯಾದೆಯಿಂದ ಬದುಕಬಲ್ಲಷ್ಟು ನನ್ನಲ್ಲಿ ಹಣವಿದೆ. ಆದರೆ, ಅನ್ಯಾಯಕ್ಕೆ ಅವಕಾಶ ಕೊಡುವುದಿಲ್ಲ.ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಗುಡುಗಿದ್ದಾರೆ. 
 
ಭೂಕಬಳಿಕೆ ಕುರಿತಂತೆ ಸ್ಪಷ್ಟನೆ ನೀಡಿದ ಸಚಿವ ಡಿ.ಕೆ.ಶಿವಕುಮಾರ್, ನಾನು ಭೂಕಬಳಿಕೆ ಮಾಡಿಲ್ಲ. ಆ ಜಮೀನು ಅವರ ಜಮೀನೇ ಅಲ್ಲ. ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಾಲಯ ನೀಡುವ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೆ.ಆರ್.ಪುರಂ ಆಸ್ಪತ್ರೆಯಲ್ಲಿ ಕೀಚಕ: ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಕಾಮುಕ ಅರೆಸ್ಟ್

ಬೆಂಗಳೂರು: ಯುವತಿಯರೊಂದಿಗೆ ಅನುಚಿತ ವರ್ತನೆ ತೋರುತ್ತಿದ್ದ ಕಾಮುಕ ಸಿಬ್ಬಂದಿಯನ್ನು ಪೊಲೀಸರು ...

news

ಅಭಿವೃದ್ಧಿ ಗುರಿ ಹೊಂದಿರುವ ಯುವಕರು ರಾಜಕೀಯಕ್ಕೆ ಬರಲಿ: ನಿಖಿಲ್ ಕುಮಾರ್

ಬೆಂಗಳೂರು: ಅಭಿವೃದ್ಧಿ ಗುರಿ ಹೊಂದಿರುವ ಯುವಕರು ರಾಜಕೀಯಕ್ಕೆ ಬರಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಪುತ್ರ ...

news

ಸಿಎಂ ಸಿದ್ರಾಮಯ್ಯ ಬಚ್ಚಾ ಬಿಎಸ್‌ವೈ ಹೇಳಿಕೆಗೆ ಸಿಎಂ ತಿರುಗೇಟು

ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಮಾತನಾಡಲು ಸಿಎಂ ಸಿದ್ದರಾಮಯ್ಯಗೆ ಅರ್ಹತೆಯಿಲ್ಲ ಅವರೊಬ್ಬ ಬಚ್ಚಾ ಎಂದು ...

news

ಯಡಿಯೂರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು: ಎಂ.ಬಿ.ಪಾಟೀಲ್

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಸಭ್ಯ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರ ...

Widgets Magazine
Widgets Magazine