ಸಚಿವ ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಪ್ರತಿರೂಪ: ಎಸ್‌‍.ಆರ್.ಹಿರೇಮಠ

ಹುಬ್ಬಳ್ಳಿ, ಗುರುವಾರ, 3 ಆಗಸ್ಟ್ 2017 (13:50 IST)

ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಪ್ರತಿರೂಪವಾಗಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್.ಹಿರೇಮಠ ಹೇಳಿದ್ದಾರೆ.
 
ಭ್ರಷ್ಟಾಚಾರವನ್ನೇ ಕಾಯಕವಾಗಿಸಿಕೊಂಡ ಶಿವಕುಮಾರ್ ಸಮಾಜದಲ್ಲಿ ಇರಲು ಅನರ್ಹರು. ಅವರ ನಿವಾಸದ ಮೇಲೆ ನಡೆದ ಐಟಿ ದಾಳಿ ಸ್ವಾಗತಾರ್ಹವಾಗಿದೆ. ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
 
ಆದಾಯ ತೆರಿಗೆ ಅಧಿಕಾರಿಗಳು ವ್ಯವಸ್ಥಿತವಾಗಿ ದಾಳಿ ಮಾಡಿದ್ದರಿಂದ ಸಚಿವ ಡಿ.ಕೆ.ಶಿವಕುಮಾರ್ ಬ್ರಹ್ಮಾಂಡ ಬಯಲಿಗೆ ಬರಲಿದೆ. ಇಂತಹ ಭ್ರಷ್ಟ ಸಚಿವನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.
 
ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಧಿಕಾರಿಗಳು ಜಂಟಿಯಾಗಿ, ಶಿವಕುಮಾರ್ ಪ್ರಕರಣದಲ್ಲಿ ತನಿಖೆ ನಡೆಸಿದಲ್ಲಿ ಗಣಿಧಣಿ ಜನಾರ್ದನ ರೆಡ್ಡಿಗಾದ ಗತಿಯೇ ಸಚಿವ ಶಿವಕುಮಾರ್‌ಗೆ ಆಗುತ್ತದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಪ್ಪುಹಣ, ಭ್ರಷ್ಟಾಚಾರದ ವಿರುದ್ಧ ಐಟಿ ದಾಳಿ: ಅನಂತ್ ಕುಮಾರ್ ಸಮರ್ಥನೆ

ಬೆಂಗಳೂರು: ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ನಡೆದ ಐಟಿ ದಾಳಿ ಕಪ್ಪುಹಣ, ಭ್ರಷ್ಟಾಚಾರದ ...

news

ಡಿಕೆಶಿ ಮನೆಯ 4 ಲಾಕರ್`ಗಳನ್ನ ಓಪನ್.. ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದೇನು..?

ಸತತ 2ನೇ ದಿನವೂ ಸಚಿವ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ 2 ನಿವಾಸಗಳಲ್ಲಿ ಐಟಿ ಅಧಿಕಾರಿಗಳ ತನಿಖೆ ...

news

ಡಿ.ಕೆ.ಶಿವಕುಮಾರ್ ಅಗರ್ಭ ಶ್ರೀಮಂತರು: ಯಡಿಯೂರಪ್ಪ

ಬೆಂಗಳೂರು: ಇಂಧನ ಖಾತೆ ಸಚಿವರಾದ ಡಿ.ಕೆ.ಶಿವಕುಮಾರ್ ಅಗರ್ಭ ಶ್ರೀಮಂತರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ...

news

ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಮಾಹಿತಿ ನೀಡದ ಗುಪ್ತಚರ ಸಂಸ್ಥೆ ವಿರುದ್ಧ ಸಿಎಂ ಗರಂ

ಡಿ.ಕೆ. ಶಿವಕುಮಾರ್ ಮನೆ ಮೇಲಿನ ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಮಾಹಿತಿ ನೀಡದ ಗುಪ್ತಚರ ಇಲಾಖೆ ಬಗ್ಗೆ ...

Widgets Magazine