ಕಾಂಗ್ರೆಸ್ ಪಕ್ಷ ಇತಿಹಾಸದ ಪುಟ ಸೇರಲಿದೆ ಎಂದು ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ಯಾಕೆ?

ಮಂಗಳೂರು, ಶನಿವಾರ, 10 ನವೆಂಬರ್ 2018 (14:05 IST)

ಮಂಗಳೂರು : ಸಾಕಷ್ಟು ವಿರೋಧದ ನಡುವೆ ಟಿಪ್ಪು ಜಯಂತಿ ಆಚರಣೆ ಮಾಡಿರುವುದಕ್ಕೆ  ಮುಂದಿನ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಇತಿಹಾಸದ ಪುಟ ಸೇರಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.


ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಟಿಪ್ಪು ಜಯಂತಿ ಆಚರಣೆ ಮಾಡುವುದರ ಬದಲು ಟಿಪ್ಪುವನ್ನು ಮರೆಯುವ ಕೆಲಸ ಆಗಬೇಕಿತ್ತು. ಸಾಕಷ್ಟು ವಿರೋಧದ ನಡುವೆ ಕಾಂಗ್ರೆಸ್ ಪಕ್ಷ ಈ ಕಾರ್ಯಕ್ರಮ ನಡೆಸಲು ಮುಂದಾಗಿದೆ. ಮುಂದಿನ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಇತಿಹಾಸದ ಪುಟ ಸೇರಲಿದೆ ಎಂದು ಹೇಳಿದ್ದಾರೆ.


ಮಹಾಘಟಬಂಧನ್ ಬಗ್ಗೆ ಮಾತನಾಡಿದ ಅವರು, ‘ಮಹಾಘಟಬಂಧನ್ ಯಶಸ್ವಿಯಾಗಲು ಸಾಧ್ಯವಿಲ್ಲ. ಇದಕ್ಕೆ ಸಮರ್ಥ ನಾಯಕತ್ವದ ಕೊರತೆ ಇದೆ. ರಾಹುಲ್ ಗಾಂಧಿ ಒಬ್ಬ ಜೋಕರ್ ಇದ್ದಹಾಗೆ, ಅವರ ನಾಯಕತ್ವಕ್ಕೆ ಕಾಂಗ್ರೆಸ್ ಪಕ್ಷದಲ್ಲಿಯೇ ವಿರೋಧ ಇದೆ. ಇನ್ನು ಮಹಾಘಟಬಂಧನ್ ನಲ್ಲಿರುವ ಪ್ರಾದೇಶಿಕ ಪಕ್ಷಗಳು ಏಡಿ ಇದ್ದಹಾಗೆ. ಒಬ್ಬರು ಇನ್ನೊಬ್ಬರನ್ನು ಮೇಲಕ್ಕೆ ಹೋಗಲು ಬಿಡುವುದಿಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಟಿಪ್ಪು ಜಯಂತ್ಯುತ್ಸವಕ್ಕೆ ಮುಖ್ಯಮಂತ್ರಿ ಗೈರು: ಶಾಸಕ ಆಕ್ರೋಶ

ಮೈಸೂರು ಹುಲಿ ಖ್ಯಾತಿಯ ಟಿಪ್ಪು ಸುಲ್ತಾನ್ ಜಯಂತ್ಯುತ್ಸವಕ್ಕೆ ಸಿಎಂ, ಡಿಸಿಎಂ ಗೈರು ಹಾಜರಾಗಿರುವುದಕ್ಕ್ಲೆ ...

news

ವಿಮಾನ ಕಾರ್ಯಾಚರಣೆ: ಬಿಸಿಲೂರಿಗೆ ಆಗಮಿಸಿದ ಬಿಸಿಎಎಸ್ ಭದ್ರತಾ ಸಮಿತಿ

ನೂತನ ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನ ಕಾರ್ಯಾಚರಣೆ ಆರಂಭಿಸುವ ಸಂಬಂಧ ಸುರಕ್ಷತಾ ಕ್ರಮಗಳನ್ನು ...

ಬಿಬಿಸಿ#ಬಿಯಾಂಡ್ ಫೇಕ್ ನ್ಯೂಸ್

ಬೆಂಗಳೂರು: ಫೇಕ್ ಸುದ್ದಿಗಳಿಗೆ ಸಂಬಂಧಿಸಿದಂತೆ ಬಿಬಿಸಿ ಅಂತರರಾಷ್ಟ್ರೀಯ ಆಂಟಿ ಡಿಸ್ನಿಫರ್ಮೇಷನ್ ...

news

ಬ್ರಿಟೀಷ್ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಬಳಸುತ್ತಿದ್ದ ವೀಲ್ ಚೇರ್ ಹರಾಜಾಗಿದ್ದು ಎಷ್ಟಕ್ಕೆ ಗೊತ್ತಾ?

ಲಂಡನ್ : ಇತ್ತೀಚೆಗಷ್ಟೇ ನಿಧನರಾದ ಬ್ರಿಟೀಷ್ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರಿಗೆ ಸೇರಿದ ಕೆಲ ...

Widgets Magazine