ಸಚಿವ ಕೆ.ಜೆ. ಜಾರ್ಜ್ ಜೈಲಿಗೆ ಹೋಗುವುದು ಖಚಿತ: ಈಶ್ವರಪ್ಪ

ಬೆಳಗಾವಿ, ಬುಧವಾರ, 15 ನವೆಂಬರ್ 2017 (19:22 IST)

ಡಿವೈಎಸ್‌ಪಿ ಎಂ.ಕೆ.ಗಣಪತಿ ಪ್ರಕರಣದಲ್ಲಿ ಆರೋಪಿಯಾಗಿರುವ ಸಚಿವ ಕೆ.ಜೆ.ಜಾರ್ಜ್ ಜೈಲಿಗೆ ಹೋಗುವುದು ಖಚಿತ ಎಂದು ವಿಪಕ್ಷ ನಾಯಕ ಹೇಳಿದ್ದಾರೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸರಕಾರದ ಒತ್ತಡದ ಮೇರೆಗೆ ಸಿಐಡಿ ಅಧಿಕಾರಿಗಳು ಅವಸರದ ತನಿಖೆ ನಡೆಸಿ ಸಚಿವ ಜಾರ್ಜ್‌ಗೆ ಕ್ಲೀನ್ ಚಿಟ್ ನೀಡಿದ್ದರು ಎಂದು ಆರೋಪಿಸಿದರು.
 
ಗಣಪತಿ ಆತ್ಮಹತ್ಯೆ ಮಾಡಿಕೊಂಡ ಕೋಣೆಯಲ್ಲಿ ಸಿಬಿಐ ಅಧಿಕಾರಿಗಳಿಗೆ ಬುಲೆಟ್ ದೊರೆತಿದೆ.ಸಿಬಿಐ ತನಿಖೆ ಆರಂಭಿಸಿ ಎಫ್‌ಐಆರ್ ಕೂಡಾ ದಾಖಲಿಸಿದೆ. ಮುಂದೆ ಕಾದಿದೆ ಮಾರಿಹಬ್ಬ ಎಂದರು.
 
ಸಿಐಡಿ ತನಿಖೆ ನಡೆಯುವಾಗ ರಾಜೀನಾಮೆ ನೀಡಿದ್ದ ಸಚಿವ ಜಾರ್ಜ್, ಸಿಬಿಐ ತನಿಖೆ ನಡೆಯುವಾಗಲು ರಾಜೀನಾಮೆ ನೀಡಲಿ. ನಾವು ವಿಧಾನಸಭೆಯಲ್ಲಿ ಯಾವುದೇ ಚರ್ಚೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
 
ಖಾಸಗಿ ವೈದ್ಯರ ಮುಷ್ಕರದಿಂದ ಅನೇಕರ ಸಾವುಗಳು ಸಂಭವಿಸಿವೆ. ಆದ್ದರಿಂದ, ಸಚಿವ ರಮೇಶ್‌ಕುಮಾರ್‌ರನ್ನು ಕೊಲೆಗಡುಕ ಎಂದಿದ್ದೇನೆ. ನಾನು ಅವರ ವೈಯಕ್ತಿಕ ತೇಜೋವಧೆ ಮಾಡಿಲ್ಲ ಎಂದು ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗುಜರಾತ್ ಮಹಿಳೆ ಮೇಲೆ ಭೀಕರ ಗ್ಯಾಂಗ್‌ರೇಪ್

ಲಕ್ನೋ: ನಾಚಿಕೆಗೇಡಿತನದ ಘಟನೆಯೊಂದರಲ್ಲಿ ಗುಜರಾತ್ ಮೂಲದ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಉತ್ತರಪ್ರದೇಶದ ...

news

ನಂಜನಗೂಡಿನ ಸೋಲಿನ ಸೇಡು ತೀರಿಸಿಕೊಳ್ಳುತ್ತೇನೆ: ಶ್ರೀನಿವಾಸ್ ಪ್ರಸಾದ್ ಪ್ರತಿಜ್ಞೆ

ಮೈಸೂರು: ನಂಜನಗೂಡು ಉಪಚುನಾವಣೆಯ ಸೋಲಿನ ಸೇಡು ತೀರಿಸಿಕೊಳ್ಳುತ್ತೇನೆ ಎಂದು ಬಿಜೆಪಿ ಮುಖಂಡ ಶ್ರೀನಿವಾಸ್ ...

news

ಬಿಜೆಪಿ ಜಾಹೀರಾತಿನಲ್ಲಿ "ಪಪ್ಪು" ಪದ ಬಳಕೆಗೆ ಚು.ಆಯೋಗ ನಿಷೇಧ

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಟ್ಟುಕೊಂಡು ಎಲೆಕ್ಟ್ರಾನಿಕ್ ...

news

ಮಾನವ ಮೂತ್ರದ ಬ್ಯಾಂಕ್‌ಗಳ ಸ್ಥಾಪನೆಗೆ ಆದ್ಯತೆ: ನಿತಿನ್ ಗಡ್ಕರಿ

ನವದೆಹಲಿ: ಮಾನವನ ಮೂತ್ರವನ್ನು ಸಂಗ್ರಹಿಸಿದಲ್ಲಿ ರಸಗೊಬ್ಬರವಾದ ಯೂರಿಯಾ ತಯಾರಿಸಲು ಉಪಯೋಗವಾಗುತ್ತದೆ. ...

Widgets Magazine
Widgets Magazine