ಸೂಲಿಬೆಲೆ ಚಕ್ರವರ್ತಿ ಬಗ್ಗೆ ಅಸಭ್ಯ ಪದ ಬಳಕೆ… ಸಚಿವರೇ ಇದೇನಾ ಸಭ್ಯತೆ…

ಮಂಗಳೂರು, ಶನಿವಾರ, 23 ಸೆಪ್ಟಂಬರ್ 2017 (21:01 IST)

ಮಂಗಳೂರು: ಅರಣ್ಯ ಸಚಿವ ರಮಾನಾಥ ರೈ ಸಂಸ್ಕಾರ ಮರೆತಿದ್ದಾರೆ ಅನ್ನಿಸುತ್ತೆ. ಯಾಕಂದ್ರೆ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯುವ ಬ್ರಿಗೇಡ್ ಸಂಚಾಲಕ ಸೂಲಿಬೆಲೆ ಚಕ್ರವರ್ತಿ ಬಗ್ಗೆ ಕೀಳಾಗಿ ಮಾತನಾಡಿದ್ದಲ್ಲದೆ, ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.


ನಿನ್ನೆ(ಸೆ.23) ಅಸೈಗೋಳಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತುಳು ಭಾಷೆಯಲ್ಲಿ ಭಾಷಣ ಮಾಡುತ್ತಿದ್ದರು. ಇದೇವೇಳೆ ನೆಹರೂ ಕುಟುಂಬದ ಬಗ್ಗೆ ಮಾತನಾಡುತ್ತಿದ್ದ ಅವರು, ಮಧ್ಯದಲ್ಲಿ ಸೂಲಿಬೆಲೆ ಚಕ್ರವರ್ತಿಯವರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈವೇಳೆ ಅವಾಚ್ಯ ಬಳಸಿ ಮಾತನಾಡಿದ್ದಲ್ಲದೆ, ಅದನ್ನೇ ಸಭಿಕರಿಗೆ ನಾಲ್ಕೈದು ಬಾರಿ ಹೇಳಿ, ಕೇಳಿ ವ್ಯಂಗ್ಯ ಮಾಡಿದ್ದಾರೆ. ಇಷ್ಟೇ ಅಲ್ಲದೆ ಸೂಲಿಬೆಲೆ ಚಕ್ರವರ್ತಿಯೊಬ್ಬ ದೇಶದ್ರೋಹಿ. ಅವರನ್ನು ಜೈಲಿಗೆ ಕಳುಹಿಸಬೇಕು ಎಂದಿದ್ದಾರೆ.

ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಕ್ರವರ್ತಿ ಸೂಲಿಬೆಲೆ ಬಗ್ಗೆ ಕೀಳುಮಟ್ಟಕ್ಕಿಳಿದು ಮಾತನಾಡಿರುವ ಸಚಿವರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಸೂಲಿಬೆಲೆ ಚಕ್ರವರ್ತಿ ಅಭಿಮಾನಿಗಳು ಮತ್ತು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಬಿಜೆಪಿ ಮುಖಂಡರು ಅಸಭ್ಯವಾಗಿ ಮಾತನಾಡಿರುವ ಸಚಿವ ರಮಾನಾಥ ರೈ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಯಲಲಿತಾ ಆರೋಗ್ಯದ ಬಗ್ಗೆ ನಾವೆಲ್ಲರು ಸುಳ್ಳು ಹೇಳಿದ್ದೇವೆ ಕ್ಷಮಿಸಿ: ತಮಿಳುನಾಡು ಸಚಿವ

ಚೆನ್ನೈ: ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಆರೋಗ್ಯದ ಬಗ್ಗೆ ನಾವೆಲ್ಲರು ಜನತೆಗೆ ಸುಳ್ಳು ...

news

ವಿದೇಶಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ: ಬಾಲಕನಿಗೆ ಧರ್ಮದೇಟು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ/ ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿ ಅಪ್ರಾಪ್ತ ಬಾಲಕನೊಬ್ಬ ವಿದೇಶಿ ...

news

ಗೋಮಾಂಸ ತಿಂದಿದ್ದೇನೆ.. ಕೇಳೋಕೆ ನೀವ್ಯಾರು ಎಂದ ಸಚಿವ ಕಾಗೋಡು ತಿಮ್ಮಪ್ಪ

ಶಿವಮೊಗ್ಗ: ನಾನು ದನದ ಮಾಂಸ ತಿಂದಿದ್ದೇನೆ. ಅದನ್ನು ಕೇಳಲು ನೀವ್ಯಾರು ಎಂದು ಗೋರಕ್ಷಕರಿಗೆ ಸಚಿವ ಕಾಗೋಡು ...

news

ಸಚಿವ ಟಿ.ಬಿ.ಜಯಚಂದ್ರಗೆ ಛೀಮಾರಿ ಹಾಕಿದ ಗ್ರಾಮಸ್ಥರು

ತುಮಕೂರು: ಕಾನೂನುಖಾತೆ ಸಚಿವ ಟಿ.ಬಿ.ಜಯಚಂದ್ರಗೆ ಜಿಲ್ಲೆಯ ಶಿರಾ ತಾಲೂಕಿನ ಚಿರತಹಳ್ಳಿ ಗ್ರಾಮಸ್ಥರು ಛೀಮಾರಿ ...

Widgets Magazine
Widgets Magazine