ಸಚಿವ ರಮೇಶ್ ಜಾರಕಿಹೊಳಿ ಎಲ್ಲೂ ಹೋಗಿಲ್ಲ ಎಂದ ಸಿಎಂ

ಬೆಳಗಾವಿ, ಭಾನುವಾರ, 16 ಸೆಪ್ಟಂಬರ್ 2018 (19:03 IST)

ಸರ್ಕಾರ ಸುಭದ್ರವಾಗಿದೆ. ಸಚಿವ ರಮೇಶ್ ಜಾರಕಿಹೊಳಿ ಎಲ್ಲೂ ಹೋಗಿಲ್ಲ. ನನ್ನ ಜೊತೆಗಿದ್ದಾರೆ. ನಿಮಗೆ ಯಾವ ಅನುಮಾನವೂ ಬೇಡ ಹೀಗಂತ ಸಿಎಂ ಹೇಳಿದ್ದಾರೆ.
 
ಸರ್ಕಾರ ಸುಭದ್ರವಾಗಿದೆ. ಸಚಿವ ರಮೇಶ್ ಜಾರಕಿಹೊಳಿ ಎಲ್ಲೂ ಹೋಗಿಲ್ಲ ಎಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಇಂದು ನನ್ನ ರಿಸಿವ್ ಮಾಡ್ಕೊಂಡು, ಅನುಮತಿ ಪಡೆದು ತಮ್ಮ ಪೂರ್ವ ನಿಯೋಜಿತ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದಾರೆ ಎಂದರು.

ಶಕ್ತಿ ಇದ್ದರೆ ಸರ್ಕಾರ ಉಳಿಸಿಕೊಳ್ಳಿ ಎಂಬ ಮಾಜಿ ಡಿಸಿಎಂ ಈಶ್ವರಪ್ಪ ಹೇಳಿಕೆಗೆ ಸಿಎಂ ಗರಂ ಆದರು.
ಅವರಿಗೆ ಶಕ್ತಿ ಇದ್ದರೆ ಸರ್ಕಾರ ಉರುಳಿಸಿ ತೋರಿಸಲಿ ಎಂದು ಸಿಎಂ ಸವಾಲ್ ಹಾಕಿದ್ದಾರೆ. 
ಆಪರೇಷನ್ ಕಮಲ ಎಂಬ ಮಾಧ್ಯಮದವರ ಪ್ರಶ್ನೆಗೆ, ಯಾವ ಕಮಲ ಅದು? ಎಂದು ಪ್ರಶ್ನಿಸಿದರು.  
ಸರ್ವಕಾಲಕ್ಕೂ ಆಪರೇಷನ್ ಕಮಲ ಮದ್ದಲ್ಲ. ಅದಕ್ಕೆ ಜಯವೂ ದೊರಕಲ್ಲ. ಬಿಜೆಪಿಯವ್ರು ರಾಜಕೀಯ ಮಾಡೋದೇ ಹಿಂಬಾಗಿಲಿನಿಂದ. ಅವರು ಯಾವಾಗ ಸೆಡ್ಡು ಹೊಡೆದು ರಾಜಕೀಯ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ಸಮ್ಮಿಶ್ರ ಸರ್ಕಾರ ಅತ್ಯಂತ ಸುಭದ್ರವಾಗಿದೆ. ಅಷ್ಟು ಸುಲಭವಾಗಿ ಯಾರೂ ಅಭದ್ರಗೊಳಿಸಲು ಸಾಧ್ಯವಿಲ್ಲ. ನಾನು ಕಿಂಗ್ ಪಿನ್ ಅಂದ್ರೆ ಅವರಿಗೆ ಯಾಕೆ ಭಯ ಶುರುವಾಯ್ತು? ನಾನೇನು ಯಾರ ಹೆಸರನ್ನು ಹೇಳಿದ್ದಿಲ್ಲ ಎಂದರು.
ಬಹುಶಃ ಸಾಮ್ರಾಟ್ ಅವರು ನಿನ್ನೆ ಏನು ಹೇಳಿಕೆ ಕೊಟ್ಟಿದ್ದಾರೆ. ಬೆಂಗಳೂರಿನ ಸಾಮ್ರಾಟರು ಬಹುಶಃ ನನಗಿಂತ ಹೆಚ್ಚು ಮಾಹಿತಿ ಅವರ ಬಳಿಯೇ ಇದೆ ಎಂದಿದ್ದಾರೆ.  

ನನ್ನ ಹತ್ರಾನು ಅಧಿಕಾರಿಗಳ ವರ್ಗ ಇದೆ. ಇಂಟಲಿಜನ್ಸ್ ಇದೆ. ಕ್ರಮ ತೆಗೆದುಕೊಳ್ಳೊಕೆ ನಿನ್ನೆಯಿಂದ ಜಾರ್ಚ ಶುರುವಾಗಿದೆ ಎಂದರು.

 

 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೈತ್ರಿ ಸರಕಾರ ವರ್ಗಾವಣೆ ದಂಧಗೆ ಸೀಮಿತ ಎಂದ ಬಿಎಸ್ ವೈ

ಮೈತ್ರಿ ಸರ್ಕಾರ ಕೇವಲ ವರ್ಗಾವಣೆ ದಂಧೆಗೆ ಸೀಮಿತವಾಗಿದ್ದು ಜನರ, ರೈತರ ಹಿತ ಮರೆತಿದೆ ಇದು ಅಕ್ಷಮ್ಯ ಅಪರಾಧ ...

news

ಬಡವರ ಕನಸಿನ ಮನೆ ಜಾಗದಲ್ಲಿ ತಲೆ ಎತ್ತಲಿದೆ ತಾಲೂಕು ಕಚೇರಿ..!

ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈ ಯಿಂದ ಕಸಿದು ಕೊಳ್ತಿದ್ದಾರೆ ಬಡವರ ಪಾಲಿನ ಮಹತ್ವಕಾಂಕ್ಷಿ ಯೋಜನೆ. ...

news

ವಾಮಾಚಾರ ಆರೋಪ: ವ್ಯಕ್ತಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

ಮುಳ್ಳುಹಂದಿಯ ಮುಳ್ಳನ್ನು ಬೇರೆಯವರ ಮನೆಯಲ್ಲಿ ಇಟ್ಟು ಜಗಳವಾಡೋ ಹಾಗೆ ಮಾಡ್ತಿದ್ದ ವಾಮಾಚಾರಿಯೊಬ್ಬನನ್ನು ...

news

ಪೊರಕೆ ಹಿಡಿದ ಬಿಜೆಪಿ ಶಾಸಕ

ಸ್ವಚ್ಛತೆಯೇ ಸೇವಾ ಅಭಿಯಾನದ ಅಂಗವಾಗಿ ಬಿಸಿಲುನಗರಿಯಲ್ಲಿ ಶಾಸಕರೊಬ್ಬರು ಕೈಯಲ್ಲಿ ಪೊರಕೆ ಹಿಡಿದು ...

Widgets Magazine